ಬೆಂಗಳೂರು : 30 ವರ್ಷ ಹರೆಯದ ಬೆಂಗಳೂರಿನ(Bengaluru) ಮಹಿಳೆಯೊಬ್ಬರ ಬಳಿಯಿದ್ದ ಹಣವನ್ನು ತನ್ನ ಸ್ನೇಹಿತರೇ ಲಪಟಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.

ಮಹಿಳೆಯ ಇಬ್ಬರು ಸ್ನೇಹಿತರು, ಹೊಸಕೆರೆಹಳ್ಳಿಯಲ್ಲಿರುವ(Hoskerehalli) ಅವರ ನಿವಾಸದಲ್ಲಿ ಏಪ್ರಿಲ್ 27 ರಂದು 4 ಲಕ್ಷ ಮೌಲ್ಯ ಬೆಲೆಬಾಳುವ ಚಿನ್ನಾಭರಣಗಳನ್ನು ಲಪಟಾಯಿಸಿದ್ದಾರೆ. ದೂರುದಾರರಾದ ಬಿ.ಸೌಭಾಗ್ಯ ಅವರು ಕೊಟ್ಟಿರುವ ಮಾಹಿತಿಯ ಅನುಸಾರ, ಮನೆಗೆ ಬಂದ ಆಕೆಯ ಇಬ್ಬರು ಸ್ನೇಹಿತರು ಕುಡಿಯಲು ತಂದಿದ್ದ ತಂಪುಪಾನೀಯಗೆ ನಿದ್ರಾಜನಕಗಳನ್ನು ಬೆರೆಸಿ ಕುಡಿಸಿದ್ದಾರೆ. ಕುಡಿದ ಬಳಿಕ ಪ್ರಜ್ಞಾಹೀನರಾಗಿರುವುದನ್ನು ಖಚಿತಪಡಿಸಿಕೊಂಡು, ಬೆಲೆಬಾಳುವ ವಸ್ತುಗಳನ್ನು ಕದಿದ್ದಾರೆ.
ಇಬ್ಬರಲ್ಲಿ ಒಬ್ಬರು ಮಾತ್ರ ಆಕೆಯ ಸ್ನೇಹಿತೆ ಎಂಬುದು ಸ್ಪಷ್ಟವಾಗಿದೆ. ಆರೋಪಿಗಳು ಮಹಿಳೆಯ ಮನೆಗೆ ಕೆಲಸ ಹುಡುಕುತ್ತಿರುವ ಸುಲವಾಗಿ ಸಹಾಯ ಕೋರಿ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ. “ನಾನು ತುರ್ತು ಪರಿಸ್ಥಿತಿ ಇರಬಹುದು ಎಂದು ಭಾವಿಸಿ ಮನೆಗೆ ಬಂದೆ. ನನ್ನ ಸ್ನೇಹಿತೆ ನನಗೆ ಕುಡಿಯಲು ತಂಪು ಪಾನೀಯವನ್ನು ಕೊಟ್ಟಳು. ಅದನ್ನು ಕುಡಿದ ಕೂಡಲೇ ನಾನು ಪ್ರಜ್ಞಾಹೀನಳಾಗಿ ಬಿದ್ದೆ ಮತ್ತು ನನ್ನ ಪತಿ ಕೆಲಸದಿಂದ ಹಿಂದಿರುಗಿದಾಗ ಐದು ಗಂಟೆಗಳ ನಂತರ ಎಚ್ಚರವಾಯಿತು ಎಂದು ಸೌಭಾಗ್ಯ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇವರಿಬ್ಬರು ಸೌಭಾಗ್ಯ ಅವರಿಗೆ ಮಾದಕ ವಸ್ತು ನೀಡಿ ಆಕೆ ಧರಿಸಿದ್ದ ಚೈನ್ ಹಾಗೂ ಮನೆಯಲ್ಲಿದ್ದ 4 ಲಕ್ಷ ಮೌಲ್ಯದ ಆಭರಣಗಳನ್ನು ಕದ್ದೊಯ್ದಿದ್ದಾರೆ. ಮೂಲಗಳ ಪ್ರಕಾರ, ಗಿರಿನಗರ(Girinagar) ಪೊಲೀಸರು ಇಬ್ಬರು ಮಹಿಳೆಯರ ವಿರುದ್ಧ ಐಪಿಸಿ ಸೆಕ್ಷನ್ 328 (ವಿಷ ಅಥವಾ ಇತರ ವಿಷಯಗಳಿಂದ ಗಾಯಗೊಳಿಸುವುದು), 420 (ವಂಚನೆ) ಮತ್ತು 380 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.