download app

FOLLOW US ON >

Tuesday, August 9, 2022
Breaking News
ಸಿದ್ದರಾಮಯ್ಯ-ಖರ್ಗೆಗೆ ಅಂಬೇಡ್ಕರ್ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ : ನಟ ಚೇತನ್ಕಾಂಗ್ರೆಸ್ ಪಕ್ಷಕ್ಕೆ ಮಹಿಳಾ ನಾಯಕರೆಂದರೆ ನಕಲಿ ಗಾಂಧಿ ಕುಟುಂಬದ ಸದಸ್ಯರು ಮಾತ್ರ  : ಬಿಜೆಪಿನೋಯ್ಡಾ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತನ ವಿರುದ್ಧ ಬುಲ್ಡೋಜರ್ ಕ್ರಮ!“ರಮೇಶ್ ಕುಮಾರ್‍ಗೆ ಸ್ವಂತ ಶಕ್ತಿಯಿಂದ ರಾಜಕೀಯ ಮಾಡುವ ಯೋಗ್ಯತೆ ಇಲ್ಲ” : ಬಿಜೆಪಿಹೆಣ ಕಂಡರೆ ಓಡೋಡಿ ಬರುವ ಶೋಭಾ ಕರಂದ್ಲಾಜೆ, ಸಮಸ್ಯೆಗಳಿಗೆ ಬಾಯಿ ಬಿಡದಿರುವುದೇಕೆ? : ಕಾಂಗ್ರೆಸ್‌ಆಮ್ಲಜನಕ ಕೊರತೆ ; ಮಾರ್ಗಸೂಚಿ ಪಾಲಿಸುವಲ್ಲಿ ಸಿಬ್ಬಂದಿಯ ವಿಫಲವೆಂದ ಬಿ.ಎ ಪಾಟೀಲ್ ವರದಿ : `ದ ಫೈಲ್ಸ್’ಹಿಟ್ಲರ್ ಕೂಡಾ ಚುನಾವಣೆಗಳನ್ನು ಗೆಲ್ಲುತ್ತಿದ್ದ : ರಾಹುಲ್‌ ಗಾಂಧಿಅರ್ಪಿತಾ ಮುಖರ್ಜಿ ಪ್ರಾಣಕ್ಕೆ ಅಪಾಯವಿದೆ ; ಆಹಾರ ಮತ್ತು ನೀರನ್ನು ಪರೀಕ್ಷಿಸಬೇಕು : ನ್ಯಾಯಾಲಯಕ್ಕೆ ಇ.ಡಿ ಮನವಿಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರುಜ್ಯೂಸ್ ಬಾಟಲಿಯನ್ನೇ ಮೈಕ್ ಮಾಡಿಕೊಂಡು ಶಾಲೆಯ ದುಸ್ಥಿತಿಯನ್ನು ವರದಿ ಮಾಡಿದ ಬಾಲಕ ; ವೀಡಿಯೋ ವೈರಲ್
English English Kannada Kannada

‘ರಾಕಿಂಗ್ ದಂಪತಿ’ ಮಗನ ರಾಕಿಂಗ್‌ ಹುಟ್ಟುಹಬ್ಬ

ರಾಕಿಂಗ್​ ಸ್ಟಾರ್​ ದಂಪತಿ ಮಗಳು ಆಯ್ರಾ ಹುಟ್ಟುಹಬ್ಬವನ್ನು ಸಂಭ್ರಮದಿಂದ ಫನ್​ವರ್ಲ್ಡ್​ನಲ್ಲಿ  ಸಿನಿಮಾ ರಂಗದ  ಸ್ನೇಹಿತರನ್ನೆಲ್ಲಾ ಕರೆದು ಆಚರಿಸಲಾಗಿತ್ತು ಆದರೆ ಮಗನ ಒದಲ ವರ್ಷದ ಹುಟ್ಟುಹಬ್ಬಕ್ಕೆ ಕೊರೊನಾ ಅಡ್ಡಿಯಾಯ್ತು ಈ ಕಾರಣವನ್ನೇ ಇಟ್ಟುಕೊಂಡು ಮಗನ ಹುಟ್ಟುಹಬ್ಬವನ್ನು ಸಿಂಪಲ್ಲಾಗೇನು ಆಚರಿಸಿಲ್ಲ. ಇದೇ ಅಕ್ಟೋಬರ್​ 30ರಂದು ಯಥರ್ವಗೆ ಒಂದು ವರ್ಷ ತುಂಬಿತ್ತು.

ಗೋವಾದ ಕ್ರೂಸರ್​ನಲ್ಲಿ ಅದ್ದೂರಿಯಾಗಿ ರಾಕಿಂಗ್​ ಆಗಿ ಮಗ ಯಥರ್ವನ ಹುಟ್ಟುಹಬ್ಬವನ್ನು ಯಶ್​ ಮತ್ತು ರಾಧಿಕಾ ಆಚರಿಸಿದ್ದಾರೆ. ಸಮುದ್ರದ ಮಧ್ಯದಲ್ಲಿ ಕುಟುಂಬ ಸಮೇತರಾಗಿ ಜಾಲಿ ರೈಡ್​ ನಡೆಸುತ್ತಾ ಮಗನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಈ ವಿಡಿಯೋವನ್ನು ನಟಿ ರಾಧಿಕಾ ಪಂಡಿತ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


ರಾಧಿಕಾಗೆ ಸಮುದ್ರ ತೀರ ಎಂದರೆ ಬಲು ಇಷ್ಟ. ಇದನ್ನು ಸಾಕಷ್ಟು ಬಾರಿ ನಟ ಯಶ್​ ಕೂಡ ತಿಳಿಸಿದ್ದಾರೆ. ಅದರಲ್ಲಿಯೂ ಗೋವಾ ಎಂದರೆ ರಾಧಿಕಾಗೆ ಇನ್ನು ಖುಷಿ ಕಾರಣ ಅವರ ಅಮ್ಮ ಕೂಡ ಗೋವಾ ಮೂಲದವರು. ಈ ಹಿನ್ನಲೆ ಈ ಹುಟ್ಟು ಹಬ್ಬ ನಟಿ ರಾಧಿಕಾ ಅವರ ಯೋಜನೆಯಂತೆ ನಡೆದಿದೆ ಎನ್ನಬಹುದು. ಇದೇ ಕಾರಣದಿಂದ ತಮ್ಮ ನಿಶ್ಚಿತಾರ್ಥವನ್ನು ಈ ಜೋಡಿ ಗೋವಾದಲ್ಲಿಯೇ ಮಾಡಿಕೊಂಡಿದ್ದರು. ಅದ್ಭುತ ಸಂಗೀತ ಸಂಯೋಜನೆ, ಛಾಯಗ್ರಾಹಣ ಹೊಂದಿರುವ ಈ ವಿಡಿಯೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಸಮಾರಂಭದಲ್ಲಿ ಕುಟುಂಬದ ಆಪ್ತರಷ್ಟೇ ಭಾಗಿಯಾಗಿದ್ದಾರೆ.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article