ಐಸಿಸಿ ಈವೆಂಟ್ಗಳಲ್ಲಿ ಸತತ ಅತಿ ಹೆಚ್ಚು ಗೆಲುವು
ಎಂಎಸ್ ಧೋನಿ ದಾಖಲೆ ಪುಡಿಗಟ್ಟಿದ ರೋಹಿತ್ ಶರ್ಮಾ (Rohit-Kohli’s magic of 76)
4 ವಿಕೆಟ್ಗಳಿಂದ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತ
ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿದೆ.ಇದು ಭಾರತಕ್ಕೆ ಸಿಕ್ಕಂತಹ 3ನೇ ಟ್ರೋಫಿಯಾಗಿದೆ. ಈ ಪಂದ್ಯದಲ್ಲಿ ಕಿವೀಸ್ (Kiwis) ನೀಡಿದ್ದ 252 ರನ್ಗಳ ಗುರಿಯನ್ನ ಭಾರತ ತಂಡ ಇನ್ನು 6 ಎಸೆತಗಳಿರುವಂತೆ ತಲುಪುವ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಚೇಸಿಂಗ್ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ 76 ರನ್ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಶ್ರೇಯಸ್ ಅಯ್ಯರ್ 48, ಕೆಎಲ್ ರಾಹುಲ್ (KL Rahul) ಅಜೇಯ 34 ರನ್ಗಳಿಸಿದರು. ಈ ಪಂದ್ಯದಲ್ಲಿ ರೋಹಿತ್ ಸಿಡಿಸಿದ 76 ರನ್ ವಿಶೇಷವಾಗಿದೆ.
ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ನಲ್ಲಿ ರೋಹಿತ್ ಶರ್ಮಾ 76 ರನ್ಗಳ ಭರ್ಜರಿ ಇನ್ನಿಂಗ್ಸ್ ಆಡಿದರೆ, ಟಿ20 ವಿಶ್ವಕಪ್ 2024ರ ಫೈನಲ್ನಲ್ಲಿ ಭಾರತದ ಲೆಜೆಂಡರಿ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಸಹ 76 ರನ್ಗಳ ಗೆಲುವಿನ ಇನ್ನಿಂಗ್ಸ್ ಆಡಿದ್ದರು.
ಹಾಗಾಗಿ 76 ರನ್ ಭಾರತಕ್ಕೆ ಲಕ್ಕಿಯಾಗಿದೆ.ಭಾರತ ತಂಡದ ಬ್ಯಾಕ್ ಬೋನ್ ಆಗಿರುವ ಈ ಇಬ್ಬರು ಸ್ಟಾರ್ ಕ್ರಿಕೆಟಿಗರು ಎರಡು ಪ್ರಮುಖ ಪಂದ್ಯಗಳಲ್ಲಿ ತಂಡಕ್ಕೆ ನೆರವಾಗಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ರೋಹಿತ್ 83 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ಗಳೊಂದಿಗೆ 76 ರನ್ ಸಿಡಿಸಿ ಭಾರತಕ್ಕೆ 7ನೇ ಪ್ರಶಸ್ತಿ ತಂದುಕೊಟ್ಟರು.

ಇನ್ನು 2024ರ ಪ್ರಶಸ್ತಿ ನಿರ್ಣಾಯಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ 76 ರನ್ ಸಿಡಿಸಿದ್ದರು. ಇವರ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ 176ರನ್ಗಳ ಸವಾಲಿನ ಮೊತ್ತ ದಾಖಲಿಸಿತ್ತು. ನಂತರ ದಕ್ಷಿಣ ಆಫ್ರಿಕಾ (South Africa) ತಂಡವನ್ನ168 ರನ್ಗಳಿಗೆ ನಿಯಂತ್ರಿಸಿ 7ರನ್ಗಳ ರೋಚಕ ಜಯ ಸಾಧಿಸಿತು.
ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಅಂದು ಪಂದ್ಯದಲ್ಲಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಟ್ರೋಫಿಯನ್ನು ಮರಳಿ ಗೆದ್ದಿತು. ಇದೀಗ ತಾವೇ ಅದ್ಭುತ ಪ್ರದರ್ಶನ ತೋರಿಸ 12 ವರ್ಷಗಳ ಬಳಿಕ ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿ ತಂದುಕೊಟ್ಟಿದ್ದಾರೆ.ಈ ಸಾಧನೆಯೊಂದಿಗೆ ಇಬ್ಬರೂ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಇನ್ನು ಈ ಎರಡೂ ಪಂದ್ಯಗಳಲ್ಲೂ ಭಾರತದ ದಿಗ್ಗಜ ಬ್ಯಾಟರ್ಗಳು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿರುವುದು ಮತ್ತೊಂದು ವಿಶೇಷವಾಗಿದೆ. ಭಾರತ ತಂಡ 2002ರಲ್ಲಿ ಗಂಗೂಲಿ ನಾಯಕತ್ವದಲ್ಲಿ ಶ್ರೀಲಂಕಾ ಜೊತೆ ಜಂಟಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಗೆದ್ದಿತ್ತು.(Rohit-Kohli’s magic of 76) ನಂತರ 2013ರಲ್ಲಿ ಇಂಗ್ಲೆಂಡ್ (England) ಮಣಿಸಿ 2ನೇ ಟ್ರೋಫಿ ಗೆದ್ದಿತ್ತು. ಇದೀಗ ರೋಹಿತ್ ನೇತೃತ್ವದಲ್ಲಿ 3ನೇ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಒಟ್ಟಾರೆ ಭಾರತದ 7ನೇ ಐಸಿಸಿ ಟ್ರೋಫಿ ಇದಾಗಿದೆ. 1983 ಹಾಗೂ 2011ರಲ್ಲಿ ಏಕದಿನ ವಿಶ್ವಕಪ್, 2007 ಮತ್ತು 2024ರಲ್ಲಿ ಟಿ20 ವಿಶ್ವಕಪ್ (T20 World Cup), ಹಾಗೂ 2002, 2013, 2025ರಲ್ಲಿ ಚಾಂಪಿಯನ್ಸ್ ಟ್ರೋಪಿ ಗೆದ್ದಿದೆ. ಇನ್ನು ಆಸ್ಟ್ರೇಲಿಯಾ 10 ಪ್ರಶಸ್ತಿಗಳನ್ನ ಗೆದ್ದು ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಎಲ್ಲಾ ಮಾದರಿಯ ಐಸಿಸಿ ಟ್ರೋಫಿ ಗೆದ್ದ ಏಕೈಕ ತಂಡವಾಗಿದೆ.