ದುಬೈ ಅ 26 : ಪಾಕಿಸ್ತಾನ ವಿರುದ್ದ ಭಾರತ ಸೋತ ಹಿನ್ನಲೆಯಲ್ಲಿ ಪಾಕಿಸ್ತಾನ ಪತ್ರಕರ್ತನೊಬ್ಬ ರೋಹಿತ್ ಶರ್ಮಾ ಅವರ ಬದಲು ಇಶಾನ್ ಕಿಶನ್ ಅವರನ್ನು ಆಡಿಸಬೇಕಿತ್ತು ಎಂದು ನೀವು ಆಲೋಚಿಸಿದ್ದಿರಾ ಎಂಬ ಪ್ರಶ್ನೆಗೆ ತೀಕ್ಷ್ಣವಾಗಿಯೇ ತಿರುಗೇಟು ನೀಡಿದ ಕೊಹ್ಲಿ ಇದು ತುಂಬಾ ಧೈರ್ಯಶಾಲಿ ಪ್ರಶ್ನೆ. ನಿಮ್ಮ ಆಲೋಚನೆ ಏನು ಸರ್? ನಾನು ಅತ್ಯುತ್ತಮ ತಂಡದೊಂದಿಗೆ ಆಡಿದ್ದೇನೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎಂದು ಪತ್ರಕರ್ತನಿಗೆ ಮರು ಪ್ರಶ್ನೆ ಹಾಕಿದರು
ನಿಮ್ಮ ಪ್ರಕಾರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ರೋಹಿತ್ ಶರ್ಮಾ ಅವರನ್ನು ಕೈ ಬಿಡಬೇಕಾ? ನೀವು ರೋಹಿತ್ ಶರ್ಮಾರನ್ನು ಬಿಡುತ್ತೀರಾ? ಕಳೆದ ಪಂದ್ಯದಲ್ಲಿ ಅವರು ಏನು ಮಾಡಿದ್ದಾರೆಂದು ನಿಮಗೆ ಗೊತ್ತಿದೆಯೇ? ನಿಮಗೆ ವಿವಾದ ಬೇಕೆಂದರೆ, ಮೊದಲೇ ಹೇಳಿ, ಅದಕ್ಕೆ ತಕ್ಕಂತೆ ಉತ್ತರ ನೀಡುತ್ತೇನೆ,” ಎಂದು ಹೇಳಿದರು.
ನಂತರ ಪಂದ್ಯದ ಬಗ್ಗೆ ಮಾತನಾಡಿದ ಅವರು ಒಂದೇ ಒಂದು ಪಂದ್ಯದ ಸೋಲಿನೊಂದಿಗೆ ನಮ್ಮ ವಿಶ್ವಕಪ್ ಅಭಿಯಾನ ಅಂತ್ಯವಾಗಲಿದೆ ಎಂದು ನಾವು ಭಾವಿಸುವುದಿಲ್ಲ. ಈ ಹಾದಿಯಲ್ಲಿ ಬೇರೆ ಯಾವುದೇ ತಂಡ ಕೂಡ ಚಿಂತಿಸುವುದಿಲ್ಲ. ಇವತ್ತು ನಾವು ಉತ್ತಮ ಕ್ರಿಕೆಟ್ ಆಡಿಲ್ಲವಾದರೆ, ಇದನ್ನು ಒಪ್ಪಿಕೊಳ್ಳಬೇಕು ಹಾಗೂ ಎದುರಾಳಿ ತಂಡಕ್ಕೆ ಇದರ ಶ್ರೇಯವನ್ನು ಸಲ್ಲಿಸಬೇಕಾಗುತ್ತದೆ,” ಎಂದರು
ಭಾರತವು ತನ್ನ ಮುಂದಿನ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ದ ಅಕ್ಟೋಬರ್ 31 ರಂದು ಸೆಣೆಸಲಿದೆ.