Visit Channel

ನಾಯಕತ್ವ ಸ್ಥಾನದಿಂದ ಕೊಹ್ಲಿಗೆ ಗೇಟ್‌ಪಾಸ್‌ ನೀಡಿದ ಬಿಸಿಸಿಐ

ಮುಂಬೈ ಡಿ 10  : ಬಿಸಿಸಿಐ ನಾಯಕತ್ವ ತೊರೆಯುವಂತೆ ವಿರಾಟ್‌ ಕೊಹ್ಲಿಗೆ ಅವಕಾಶ ನೀಡಿದ್ದರೂ ಸಹ ಕೊಹ್ಲಿ ನಾಯಕತ್ವ ಬಿಟ್ಟುಕೊಡದ ಹಿನ್ನಲೆಯಲ್ಲಿ ಬಿಸಿಸಿಐ ಏಕದಿನ ತಂಡಕ್ಕೆ ರೋಹಿತ್ ಶರ್ಮಾರನ್ನು ನಾಯಕರನ್ನಾಗಿ ನೇಮಕ ಮಾಡಿದೆ. ಈ ಕುರಿತು ಟ್ವಿಟ್ ಮಾಡಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ BCCI ‘ರಾಷ್ಟ್ರೀಯ ಆಯ್ಕೆ ಸಮಿತಿಯು ರೋಹಿತ್ ಶರ್ಮಾರನ್ನು ಟಿ-20 ಮತ್ತು ಏಕದಿನ ತಂಡಗಳಿಗೆ ನಾಯಕರನ್ನಾಗಿ ನೇಮಕ ಮಾಡಲು ನಿರ್ಧರಿಸಿದೆ’ ಎಂದು ತಿಳಿಸಿದೆ.

ಮೂರು ಟೆಸ್ಟ್ ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಯನ್ನಾಡಲು ಸದ್ಯದಲ್ಲೇ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳಸಲಿದೆ. ಏಕದಿನ ಸರಣಿಯು ಪೂರ್ಣ ಪ್ರಮಾಣದ ನಾಯಕನಾಗಿ ರೋಹಿತ್’ಗೆ ಮೊದಲ ಸವಾಲಿನ ಸರಣಿಯಾಗಲಿದೆ. ಇದಕ್ಕೂ ಮೊದಲು ಟೆಸ್ಟ್ ಸರಣಿ ನಡೆಯಲಿದ್ದು, ಡಿಸೆಂಬರ್ 17ರಿಂದ ಮೊದಲ ಟೆಸ್ಟ್ ಜೋಹನ್ಸ್ ಬರ್ಗ್‌ನಲ್ಲಿ ಆರಂಭವಾಗಲಿದೆ. ಟೆಸ್ಟ್ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ಮುಂದುವರಿಯಲಿದ್ದಾರೆ.

ಯುಎಇಯಲ್ಲಿ ನಡೆದಿದ್ದ ಟಿ-20 ವಿಶ್ವಕಪ್ ಟೂರ್ನಿಯ ಬಳಿಕ ವಿರಾಟ್ ಕೊಹ್ಲಿ, ಟೀಮ್ ಇಂಡಿಯಾದ ಟಿ-20 ತಂಡದ ನಾಯಕತ್ವ ತ್ಯಜಿಸಿದ್ದರು. ಇದರ ಬೆನ್ನಲ್ಲೇ ಏಕದಿನ ನಾಯಕ ಸ್ಥಾನದಿಂದಲೂ ಕೊಹ್ಲಿಯನ್ನು ಕೈಬಿಡುವ ಬಗ್ಗೆ ಮಾತುಗಳು ಕೇಳಿ ಬಂದಿತ್ತು. ಇದೀಗ ಆಯ್ಕೆ ಸಮಿತಿಯು ವಿರಾಟ್ ಜೊತೆಗೆ ಚರ್ಚೆ ನಡೆಸಿದ ಬಳಿಕ ನಾಯಕತ್ವ ಬದಲಾಯಿಸುವ ತೀರ್ಮಾನ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

Latest News

BJP
ರಾಜಕೀಯ

ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಹಾಕಬಾರದಿತ್ತು ಎನ್ನಲು ಸಿದ್ದರಾಮಯ್ಯ ಯಾರು? : ಬಿಜೆಪಿ

ಮತ್ತೊಮ್ಮೆ ದೇಶ ವಿಭಜಿಸುವ ಕಾಂಗ್ರೆಸ್ ಪಕ್ಷದ(Congress Party) ಹಿಡನ್ ಅಜೆಂಡಾ ಸಿದ್ದರಾಮಯ್ಯ ಬಾಯಿಂದ ಬಹಿರಂಗವಾಗಿದೆ ಎಂದಿದೆ.

Fruit
ಮಾಹಿತಿ

ಬಿಪಿ, ಮದುಮೇಹ ಸೇರಿದಂತೆ ಅನೇಕ ಖಾಯಿಲೆಗಳಿಗೆ ರಾಮಬಾಣ ನೇರಳೆ ಹಣ್ಣು ; ಓದಿ ಈ ಉಪಯುಕ್ತ ಮಾಹಿತಿ

ಮಧುಮೇಹ, ಹೃದಯದ ಕಾಯಿಲೆ, ಸಂಧಿವಾತ, ಹೊಟ್ಟೆಯ ಖಾಯಿಲೆಗಳ ನಿಯಂತ್ರಣ ಮತ್ತು ನಿವಾರಣೆಗೂ ಇದು ರಾಮಬಾಣ ಎನ್ನುತ್ತದೆ ಆಯುರ್ವೇದ(Ayurveda).

Lal Singh Chadda
ಮನರಂಜನೆ

ಲಾಲ್ ಸಿಂಗ್ ಚಡ್ಡಾ ನಷ್ಟಕ್ಕೆ ವಿತರಕರಿಗೆ ಪರಿಹಾರ ಕೊಡಲು ಸಜ್ಜಾದ್ರಾ ನಟ ಅಮೀರ್ ಖಾನ್?

ಚಿತ್ರದ ವಿತರಕರಿಗೆ ಪರಿಹಾರದ ಮಾದರಿಯನ್ನು ರೂಪಿಸಲು ನಟ ಅಮೀರ್ ಖಾನ್ ಮಾತುಕತೆ ನಡೆಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.