ಬಾಹುಬಲಿ(Bahubali) ಖ್ಯಾತಿಯ(Fame) ನಿರ್ದೇಶಕ(Director) ಎಸ್ ಎಸ್ ರಾಜಮೌಳಿ(SS Rajamouli) ಅವರ ಬಿಗ್ ಬಜೆಟ್ ಚಿತ್ರ ಆರ್.ಆರ್.ಆರ್(RRR) ಒಂದರ ಹಿಂದೆ ಒಂದರಂತೆ ಬಾಕ್ಸ್ ಆಫೀಸ್ ದಾಖಲೆಗಳನ್ನು ಉಡೀಸ್ ಮಾಡುತ್ತಿದೆ.
ಹಿಂದಿಯಲ್ಲಿ ತೆರೆಕಂಡ ಆಲಿಯಾ ಭಟ್(Alia Bhat) ನಟನೆಯ ಗಂಗೂಬಾಯಿ ಕಟಿಯಾವಾಡಿ(Gangubai katiyavadi), ದಿ ಕಾಶ್ಮೀರ್ ಫೈಲ್ಸ್(The Kashmir Files) ಮತ್ತು ಬಾಹುಬಲಿ (Hindi) ಅನ್ನು ಬಾಕ್ಸ್ ಆಫೀಸ್ ದಾಖಲೆಯಲ್ಲಿ ಹಿಂದಿಕ್ಕಿದ ನಂತರ, RRR ಈಗ ಸೂಪರ್ಸ್ಟಾರ್ ರಜನಿಕಾಂತ್ ಅವರ 2.0 ಒಟ್ಟಾರೆ ಜೀವಮಾನದ ಸಂಗ್ರಹವಾದ 800 ಕೋಟಿ ರೂ (Gross Collection) ಬಾಕ್ಸ್ ಆಫೀಸ್ನಲ್ಲಿ ಮೀರಿಸಿದೆ. ಇದು RRR ಆರನೇ ಅತಿ ಹೆಚ್ಚು ಗಳಿಕೆಯ ಭಾರತೀಯ ಚಲನಚಿತ್ರವಾಗಿದ್ದು, RRR ಸೂಪರ್ಸ್ಟಾರ್ ರಜಿನಿಕಾಂತ್ ಅವರ 2.0 ಜೀವಮಾನದ ಸಂಗ್ರಹವನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ.
ಮಾರ್ಚ್ 25 ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾದ ಜೂನಿಯರ್ ಎನ್ಟಿಆರ್(Junior NTR) ಮತ್ತು ರಾಮ್ ಚರಣ್(Ramcharan teja) ಅಭಿನಯದ ಆರ್ಆರ್ಆರ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹಿಂದಿನ ದಾಖಲೆಗಳನ್ನು ಪುಡಿ ಮಾಡುವ ಮೂಲಕ ತನ್ನದೇ ನೂತನ ದಾಖಲೆಯನ್ನು ನಿರ್ಮಿಸುತ್ತಿದೆ. ಈ ಚಿತ್ರವು ಇತ್ತೀಚೆಗಷ್ಟೇ ವಿಶ್ವದಾದ್ಯಂತ 800 ಕೋಟಿ ರೂ.ಗಳ ಗಡಿ ದಾಟಿದೆ ಮತ್ತು ಇನ್ನೂ ಮುಂದುವರೆಯುತ್ತಲೇ ಇದೆ.
ಇದು ಆರ್ಆರ್ಆರ್ನ ಥಿಯೇಟ್ರಿಕಲ್ ರಿಲೀಸ್ ನಲ್ಲಿ ಸಾಧಿಸಿರುವ ಒಂದು ದೊಡ್ಡ ಮೈಲಿಗಲ್ಲು ಎಂದೇ ಹೇಳಬಹುದು. ಈ ದಾಖಲೆ ಕುರಿತು ಟ್ರೇಡ್ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಅವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು , “#RRR ರೂ. 819.06 ಕೋಟಿ ಬೀಟ್ಸ್ 2.0 ನ ಜೀವಿತಾವಧಿಯ ಒಟ್ಟು £800 ಕೋಟಿ ಗಳಿಸಿ ಸಾರ್ವಕಾಲಿಕ 6ನೇ ಅತಿ ಹೆಚ್ಚು ಗಳಿಕೆಯ ಭಾರತೀಯ ಚಲನಚಿತ್ರವಾಗಿದೆ” ಎಂದು ಹೇಳಿದ್ದಾರೆ. ಇದು RRR ಆರನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಗಿದೆ.
#RRR with ₹819.06 cr BEATS #2Point0's lifetime gross of ₹800 cr to become the 6th HIGHEST grossing Indian movie of all time.
— Manobala Vijayabalan (@ManobalaV) April 3, 2022
ದಂಗಲ್, ಬಾಹುಬಲಿ : ದಿ ಕನ್ಕ್ಲೂಷನ್, ಭಜರಂಗಿ ಭಾಯಿಜಾನ್, ಸೀಕ್ರೆಟ್ ಸೂಪರ್ಸ್ಟಾರ್ ಮತ್ತು ಪಿಕೆ ಟಾಪ್ 10 ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರಗಳಲ್ಲಿ ಮೊದಲ ಐದು ಸ್ಥಾನಗಳನ್ನು ಪಡೆದುಕೊಂಡಿವೆ. ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ಆರ್ಆರ್ಆರ್ ಸ್ವಾತಂತ್ರ್ಯ ಪೂರ್ವದ ಅವಧಿಯ ಯುದ್ಧದ ನಾಟಕವಾಗಿದ್ದು, ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ನಟಿಸಿರುವ ಈ ಚಿತ್ರವನ್ನು ಡಿವಿವಿ ದಾನಯ್ಯ ಅವರು 450 ಕೋಟಿ ರೂಪಾಯಿಗೂ ಹೆಚ್ಚು ಬಜೆಟ್ನಲ್ಲಿ ಪ್ರಥಮವಾಗಿ ನಿರ್ಮಿಸಿದ್ದಾರೆ.
ಸದ್ಯ ಈ ಚಿತ್ರವು ಜಗತ್ತಿನಾದ್ಯಂತ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ನಿರ್ದೇಶಕ ಶಂಕರ್ ಅವರ 2.0 ಸಮಾಜಕ್ಕೆ ಮಹತ್ವದ ಸಂದೇಶವನ್ನು ಹೊಂದಿರುವ ವೈಜ್ಞಾನಿಕ ಚಿತ್ರವಾಗಿತ್ತು. ಮೆಗಾ ಬಜೆಟ್ ಚಿತ್ರದಲ್ಲಿ ರಜನಿಕಾಂತ್, ಅಕ್ಷಯ್ ಕುಮಾರ್ ಮತ್ತು ಆಮಿ ಜಾಕ್ಸನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಒಟ್ಟಾರೆ RRR ಸಿನಿಮಾ ಈ ಹಿಂದೆ ಗುರುತಾಗಿದ್ದ ದಾಖಲೆಗಳನ್ನು ಉಡೀಸ್ ಮಾಡುವ ಮೂಲಕ ಮುನ್ನುಗ್ಗುತ್ತಿದೆ. ಈ ಸಂಗತಿಯನ್ನು ಚಿತ್ರತಂಡ ಸಂಭ್ರಮಿಸುತ್ತಿದೆ.