Prayagraj : ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬರುತ್ತಿರುವುದು ಮತ್ತು (RSS Leader Dattatreya Hosabale) ಧಾರ್ಮಿಕ ಮತಾಂತರ ಭಾರತದಲ್ಲಿ ಜನಸಂಖ್ಯಾ ಅಸಮತೋಲನಕ್ಕೆ ಪ್ರಮುಖ ಕಾರಣವಾಗುತ್ತಿದೆ,
ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಮತಾಂತರ ವಿರೋಧಿ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಪ್ರಯಾಗ್ರಾಜ್ನಲ್ಲಿ ಆರ್ಎಸ್ಎಸ್ನ (RSS Leader Dattatreya Hosabale) ನಾಲ್ಕು ದಿನಗಳ ಅಖಿಲ ಭಾರತ ಕಾರ್ಯಕಾರಿ ಸಮಿತಿ ಸಭೆಯ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು,
ನಮ್ಮ ಸಂಘಟನೆಯು ಮತಾಂತರದ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದೆ. ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳಿಗೆ ಮತಾಂತರಗೊಂಡ ಹಿಂದೂ ಜನರನ್ನು ಮರಳಿ ಮಾತೃಧರ್ಮಕ್ಕೆ ತರುವ ಸಂಘ ಪರಿವಾರದ ಪ್ರಯತ್ನದ ಪರಿಣಾಮವಾಗಿ ಅನುಕೂಲಕರ ಫಲಿತಾಂಶ ಬಂದಿದೆ.
ಆದರು ಧಾರ್ಮಿಕ ಮತಾಂತರ ತಡೆಗೆ ಈಗಿರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕಿದೆ.
https://youtu.be/rksTJlv1t1Y ರಸ್ತೆ ಕಾಣದ ಯಲಹಂಕ ಕ್ಷೇತ್ರ!
ಉತ್ತರ ಪ್ರದೇಶ (Uttar Pradesh) ಸೇರಿದಂತೆ ಕೆಲವು ರಾಜ್ಯಗಳಲ್ಲಿ ಬಲವಂತವಾಗಿ, ಆಮಿಷದಿಂದ ಮತ್ತು ವಿಶೇಷವಾಗಿ ಮದುವೆಯ ಮೂಲಕ ಮತಾಂತರವನ್ನು ನಿಷೇಧಿಸುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇನ್ನು ಧಾರ್ಮಿಕ ಮತಾಂತರದ ನಂತರ ಒಳನುಸುಳುವಿಕೆ ಜನಸಂಖ್ಯೆಯ ಅಸಮತೋಲನಕ್ಕೆ ಎರಡನೇ ಅತಿ ದೊಡ್ಡ ಕಾರಣವಾಗಿದೆ.
ಬಾಂಗ್ಲಾದೇಶೀಯರ ನುಸುಳುವಿಕೆಯಿಂದ ಉಂಟಾದ ಜನಸಂಖ್ಯೆಯ ಅಸಮತೋಲನವು ಉತ್ತರ ಬಿಹಾರದ ಜಿಲ್ಲೆಗಳಾದ ಪೂರ್ಣಿಯಾ ಮತ್ತು ಕತಿಹಾರ್ ಮತ್ತು ಇತರ ರಾಜ್ಯಗಳಲ್ಲಿ ಕಂಡುಬಂದಿದೆ. ಇನ್ನು ಧರ್ಮ ಬದಲಾಯಿಸಿದವರಿಗೆ ಮೀಸಲಾತಿಯ ಲಾಭ ಸಿಗಬಾರದು.
https://vijayatimes.com/7-dead-in-helicopter-crash/
ಇತರ ಧರ್ಮಗಳನ್ನು ಅಳವಡಿಸಿಕೊಂಡ ಸಮುದಾಯಗಳು ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಪಡೆಯಬೇಕೆ ಎಂದು ಪರಿಶೀಲಿಸಲು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಕೆ.ಜಿ ಬಾಲಕೃಷ್ಣನ್ ಅವರ ನೇತೃತ್ವದಲ್ಲಿ ರಚಿಸಲಾದ ಸಮಿತಿಯನ್ನು ಅವರು ಇದೇ ವೇಳೆ ಉಲ್ಲೇಖಿಸಿದರು.
ಹಿಂದೂ ಸಮಾಜದ ಸಾಮಾಜಿಕ ಚಟುವಟಿಕೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಹೊಸಬಾಳೆ ಹೇಳಿದರು.
ಮಹಿಳೆಯರು ಪ್ರತಿಯೊಂದು ಕ್ಷೇತ್ರಕ್ಕೂ ಕಾಲಿಡುತ್ತಿದ್ದಾರೆ. ಸಮಾಜ ಕಾರ್ಯದಲ್ಲಿ ನಿರ್ಧಾರ ಕೈಗೊಳ್ಳುವಲ್ಲಿ ಅವರ ಪಾತ್ರವೂ ಹೆಚ್ಚಾಗಬೇಕು ಎಂದರು.
- ಮಹೇಶ್.ಪಿ.ಎಚ್