Bengaluru : ಕಾಂಗ್ರೆಸ್ (Congress) ಭಾರತ್ ಜೋಡೋ (Bharat Jodo Yatra) ಮಾಡಲು ಶುರು ಮಾಡಿದ ಮೇಲೆ ದೇಶದ ಆರ್ಥಿಕತೆಯ ದುಸ್ಥಿತಿ, ಬಡತನ ನಿರುದ್ಯೋಗದ ಬಗ್ಗೆ ಆರ್ಎಸ್ಎಸ್ಗೆ (RSS) ಕಾಳಜಿ ಬಂದಿರುವುದು ಆಶ್ಚರ್ಯಕರ.
“ಸಬ್ ಚೆಂಗಾಸಿ” ಎನ್ನುತ್ತಿದ್ದ ಬಿಜೆಪಿ ನಾಯಕರು (BJP Leaders) ಆರ್ಎಸ್ಎಸ್ ಹೇಳಿಕೆ ಬಗ್ಗೆ ಬಾಯಿ ಬಿಡದಿರುವುದು ಇನ್ನೂ ಆಶ್ಚರ್ಯಕರ!
ಈ ಬೆಳವಣಿಗೆ ‘ಮೋದಿ ಹಠಾವೂ’ ಯೋಜನೆಯ ಮುನ್ನುಡಿಯೇ? ಮೋದಿ ಆಡಳಿತದ “ಅಚ್ಛೆ ದಿನ್”ಗಳನ್ನು ಆರ್ಎಸ್ಎಸ್ ವಿಮರ್ಶಿಸಲು ಶುರು ಮಾಡಿದೆ. ಪಾಕ್, ಬಾಂಗ್ಲಾದೇಶಗಳಿಗಿಂತಲೂ ಭಾರತ ಕಳಪೆ ಹಂತಕ್ಕೆ ತಲುಪುತ್ತಿದೆ ಎಂದಾಗ ಒಪ್ಪದಿದ್ದ ಬಿಜೆಪಿ ಈಗ ತಮ್ಮ ಮಾಲೀಕರ ಅಭಿಪ್ರಾಯ ಒಪ್ಪುವುದೇ?
ರಾಜ್ಯ ಬಿಜೆಪಿ ಸರ್ಕಾರ(RSS Speaks about BJP Govt) ಈಗ ಒಪ್ಪುವುದು ಯಾವುದನ್ನು? ಸಬ್ ಚೆಂಗಾಸಿ ಎಂದ ಮೋದಿ ಮಾತನ್ನೊ? ಆರ್ಎಸ್ಎಸ್ ಹೇಳಿದ ಮಾತನ್ನೊ? ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.
ಈ ಕುರಿತು ಟ್ವೀಟ್(Tweet) ಮಾಡಿರುವ ಕಾಂಗ್ರೆಸ್, ಒಂದು ಮಾರು ಮಲ್ಲಿಗೆ 200 ರೂ, ಒಂದು ಮಾರು ಸೇವಂತಿಗೆ 150, ಬಾಳೆಹಣ್ಣು 75, ತೆಂಗಿನಕಾಯಿ – 40,
ಇದನ್ನೂ ಓದಿ : https://vijayatimes.com/health-tips-for-dark-circle/
ಒಂದು ನಿಂಬೆ ಹಣ್ಣು 10, ಊದುಬತ್ತಿ, ಕರ್ಪೂರ 80, ಬಸ್ಸುಗಳ ಪೂಜೆಗೆ 40% ಸರ್ಕಾರ ಕೊಟ್ಟಿದ್ದು ಕೇವಲ 100 ರೂಪಾಯಿ. ಪೂಜೆ ಖರ್ಚಿನ 40% ಹಣವನ್ನೂ ಕೊಡದಿರುವುದೇ ನಿಮ್ಮ ಹಿಂದೂ ಧರ್ಮ ರಕ್ಷಣೆಯೇ ? ಎಂದು ಪ್ರಶ್ನಿಸಿದೆ.
ಇನ್ನು ಹಿಂದಿ ಎಂದರೆ ಮೋಹ, ಕನ್ನಡಕ್ಕೆ ದ್ರೋಹ. ಹಿಂದಿ ದಿವಸ್ ಮಾಡಲು ಎಲ್ಲಿಲ್ಲದ ಆಸಕ್ತಿ ತೋರಿದ್ದ ನಾಗಪುರದ ಗುಲಾಮಗಿರಿಯ ಬಿಜೆಪಿ ಸರ್ಕಾರಕ್ಕೆ ಕನ್ನಡವೆಂದರೆ ಅಸಡ್ಡೆ.
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ಕೊಡದಿರುವುದೇಕೆ ಪೇಸಿಎಂ ಅವರೇ, ಕನ್ನಡ ಕೊಲ್ಲಲು ವರಿಷ್ಠರ ಆದೇಶ ಬಂದಿದೆಯೇ? ಅಥವಾ 40% ಲೂಟಿಗೆ ಖಜಾನೆ ದಿವಾಳಿಯಾಗಿದೆಯೇ? 40% ಸರ್ಕಾರದಲ್ಲಿ ನಾಲ್ಕು ನಿಂಬೆಹಣ್ಣಿನ ಹಣದಲ್ಲಿ ಬಸ್ ಪೂಜೆ ಮಾಡಬೇಕಾಗಿದೆ.
ಇದನ್ನೂ ಓದಿ : https://vijayatimes.com/state-election-commission-announcement/
ಧರ್ಮ, ಸಂಸ್ಕೃತಿಗಳ ರಕ್ಷಣೆಯ ಮಾತಾಡುವ ಸರ್ಕಾರದವು ಸಂಸ್ಕೃತಿಗೆ ಕೇವಲ(RSS Speaks about BJP Govt) 100 ರೂಪಾಯಿ ಬೆಲೆ ಕಟ್ಟಿದ್ದು ವಿಪರ್ಯಾಸ. ಪೇಸಿಎಂ ಬೊಮ್ಮಾಯಿ ಅವರೇ, ನಿಜ ಹೇಳಿ 40% ಲೂಟಿಯಲ್ಲಿ ಖಜಾನೆ ದಿವಾಳಿಯಾಗಿದೆಯೇ? ಪೂಜೆಗೂ ಗತಿ ಇಲ್ಲದಾಗಿದೆಯೇ? ಎಂದು ಪ್ರಶ್ನಿಸಿದೆ.
- ಮಹೇಶ್.ಪಿ.ಎಚ್