ಆರ್‌ಟಿಓ ಅಂದ್ರೆ ಅದು ಸರ್ಕಾರಿ ಇಲಾಖೆಗಳಲ್ಲೇ ಅತ್ಯಂತ ಭ್ರಷ್ಟ ಇಲಾಖೆ ಅಂತ ಈಗಾಗ್ಲೇ ಕುಖ್ಯಾತಿಗೊಳಗಾಗಿದೆ. ಈ ಇಲಾಖೆಯ ಅಡಿಯಿಂದ ಮುಡಿಯವರೆಗೆ ಭ್ರಷ್ಟಾಚಾರ ತಾಂಡವಾಡುತ್ತಿದೆ. ಅದು ಜನರಿಗೆ ಲೈಸೆನ್ಸ್ ಕೊಡೋದ್ರಿಂದ ಹಿಡಿದು ಚೆಕ್‌ಪೋಸ್ಟ್ವರೆಗೂ ಬರೀ ಲಂಚದ್ದೇ ಕಾರುಬಾರು. ಈ ಇಲಾಖೆಯಲ್ಲಿ ಭ್ರಷ್ಟಾಚಾರವನ್ನ ಅಧಿಕೃತಗೊಳಿಸಿದಂತಿದೆ. ಇಲ್ಲಿ ಯಾರೇ ಎಷ್ಟೇ ಭ್ರಷ್ಟಾಚಾರವನ್ನ ಮಾಡಿದ್ರೂ ಈ ಬಗ್ಗೆ ಎಷ್ಟೇ ದಾಖಲೆಗಳನ್ನು ಒದಗಿಸಿದ್ರು ಈ ಇಲಾಖೆಯಲ್ಲಿ ಆ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳದಿರೋದೇ ಈ ಎಲ್ಲಾ ದುರಂತಕ್ಕೆ ಕಾರಣ. ಇದಕ್ಕೆ ಪಕ್ಕಾ ಸಾಕ್ಷಿ ವಿಜಯಟೈಮ್ಸ್ನ ಕವರ್‌ಸ್ಟೋರಿ ತಂಡಕ್ಕೆ ಸಿಕ್ಕಿದೆ.
ಯಸ್, ನಮ್ಮ ಕವರ್‌ಸ್ಟೋರಿ ತಂಡ ಕೋಲಾರದ ಕೆಜಿಎಫ್ ಆರ್‌ಟಿಓದಲ್ಲಿ ಭರ್ಜರಿ ಲೂಟಿ ಕಾರ್ಯ ನಡೀತಿದೆ, ಇದಕ್ಕೆ ಅಲ್ಲಿನ ಉಸ್ತುವಾರಿ ಏಆರ್‌ಟಿಓ ಎ.ಕೃಷ್ಣಮೂರ್ತಿಯವರ ಕುಮ್ಮಕ್ಕು ಇದೆ ಅನ್ನೋ ಪಕ್ಕಾ ಮಾಹಿತಿ ದಾಖಲೆ ಸಮೇತ ನಮಗೆ ಸಿಕ್ತು. ಇದರ ಸತ್ಯಾಸತ್ಯತೆಯನ್ನು ಪತ್ತೆಹಚ್ಚೋ ಸಲುವಾಗಿ ನಾವು ಕೆ.ಜಿಎಫ್ ಆರ್‌ಟಿಓ ಕಚೇರಿಗೆ ಹೋದೆವು. ಅಲ್ಲಿ ನಡೀತ್ತಿದ್ದ ಒಂದೊAದೇ ಹಗರಣಗಳ ಬಗ್ಗೆ ರಹಸ್ಯ ಕಾರ್ಯಾಚರಣೆ ಪ್ರಾರಂಭಿಸಿದ್ವಿ ಆಗ ನಮಗೆ ಅಲ್ಲಿನ ಭ್ರಷ್ಟಾಚಾರದ ದರ್ಶನವೇ ಆಯಿತು.
ಕಾಸು ಕೊಟ್ರೆ ಲೈಸೆನ್ಸ್: ನಮಗೆ ಒಂದು ಡ್ರೆöÊವಿಂಗ್ ಲೈಸೆನ್ಸ್ ಬೇಕಾದ್ರೆ, ಮೊದಲು ನಾವು ಪರೀಕ್ಷೆ ಬರೆದು ಲರ್ನಿಂಗ್ ಲೈಸೆನ್ಸ್ ಅಂದ್ರೆ ಕಲಿಕಾ ಪರವಾನಗಿಯನ್ನು ಪಡೀಬೇಕು. ಆ ಬಳಿಕ ನಾವು ವಾಹನವನ್ನು ಚಾಲನೆ ಮಾಡಿ ತೋರಿಸಿ ಟೆಸ್ಟ್ ಪಾಸ್ ಮಾಡಿದರೆ ನಮಗೆ ಡ್ರೆöÊವಿಂಗ್ ಲೈಸೆನ್ಸ್ ಸಿಗುತ್ತೆ. ಆದ್ರೆ ಕೆ.ಜಿ..ಎಫ್ ಆರ್‌ಟಿಓ ಕಚೇರಿಯಲ್ಲಿ ದಲ್ಲಾಳಿಗಳಿಗೆ ಮೂರು ಸಾವಿರ ರೂಪಾಯಿ ಕೊಟ್ರೆ ಸಾಕು ಯಾವ ಟೆಸ್ಟೂ ಇಲ್ಲ, ಯಾವ ಪರೀಕ್ಷೆನೂ ಇಲ್ಲದೆ ಡ್ರೈವಿಂಗ್ ಲೈಸೆನ್ಸ್ ಕೈಗೆ ಸಿಗುತ್ತೆ. ಈ ರೀತಿ ಲೈಸೆನ್ಸ್ ಪಡೆದವರು ನಾಳೆ ರಸ್ತೆಗಿಳಿದ್ರೆ ಅಪಘಾತ ಆಗದೇ ಇರುತ್ತಾ? ದುರಂತ ಗೊತ್ತಾ? ಇಲ್ಲಿ ಯಾರಾದ್ರೂ ಸರ್ಕಾರದ ನಿಯಮದ ಪ್ರಕಾರ ಆನ್‌ಲೈನ್ ಮೂಲಕ ದಲ್ಲಾಳಿಗಳಿಲ್ಲದೆ ಲೈಸೆನ್ಸ್ಗೆ ಅರ್ಜಿ ಹಾಕಿದ್ರೆ ಅವರ ಫೈಲ್‌ಗೆ ಡಿ ಅಂತ ಕೋಡ್ ಹಾಕಿ, ಪರೀಕ್ಷೆ ಫೇಲ್ ಮಾಡೋದ್ರಿಂದ ಹಿಡಿದು ಲೈಸೆನ್ಸ್ಗಾಗಿ ತಿಂಗಳಾನುಗಟ್ಟಲೆ ಅಲೆಸುತ್ತಾರೆ.
ಗಾಡಿ ನೋಡದೆ ಎಫ್‌ಸಿ: ಎ.ಕೃಷ್ಣಮೂರ್ತಿಯವರ ಚಮತ್ಕಾರ ಏನಪ್ಪಾ ಅಂದ್ರೆ ವಾಹನವನ್ನೇ ನೋಡದೆ ಅದಕ್ಕೆ ಫಿಟ್‌ನೆಸ್ ಕೊಡೋದು. ಕಾನೂನು ಪ್ರಕಾರ ಒಂದು ವಾಹನ ರಸ್ತೆಗಿಳೀಬೇಕಾದ್ರೆ ಅದನ್ನು ಆರ್‌ಟಿಓ ಇನ್ಸ್ಪೆಕ್ಟರ್ ಸರಿಯಾಗಿ ಚೆಕ್ ಮಾಡಿ, ಅದರ ಎಲ್ಲಾ ಭಾಗಗಳು ನಿಯಮ ಪ್ರಕಾರವಾಗಿಯೇ ಇದೆ ಅಂತ ಪಕ್ಕಾ ಆದ ಮೇಲೆಯೇ ಅದಕ್ಕೆ ಫಿಟ್‌ನೆಸ್ ಸರ್ಟಿಫಿಕೇಟ್ ಕೊಡಬೇಕು. ಆದ್ರೆ ಕೆಜಿಎಫ್ ಆರ್‌ಟಿಓ ಕಚೇರಿಗೆ ವಾಹನಗಳೇ ಬರಬೇಕಾಗಿಲ್ಲ. ದಲ್ಲಾಳಿಗಳ ಕೈಯಲ್ಲಿ ಕಾಸು ದಾಖಲೆಕೊಟ್ರೆ ವಾಹನದ ಎಫ್‌ಸಿ ರೆಡಿಯಾಗಿರುತ್ತೆ. ಇದನ್ನ ನಾವು ರಹಸ್ಯ ಕಾರ್ಯಾಚರಣೆ ಮಾಡಿದಾಗ ಎಲ್ಲಾ ದಲ್ಲಾಳಿಗಳು ಬಿಂದಾಸಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಕೃಷ್ಣಮೂರ್ತಿಯವರ ಕೈಚಳಕ ಹೆಂಗೆಲ್ಲಾ ಇರುತ್ತೆ ಅನ್ನೋದಕ್ಕೆ ನಮಗೆ ಒಂದು ಕ್ಲಾಸಿಕ್ ದಾಖಲೆ ಸಿಕ್ಕಿದೆ. ಅದೇನಂದ್ರೆ ಕೃಷ್ಣಗಿರಿಯಿಂದ ಕೆಜಿಎಫ್ ನಡುವೆ ಓಡಾಡೋ ಒಂದು ಬಸ್‌ಗೆ ಏಪ್ರಿಲ್ ೩೦ಕ್ಕೆ ಎಫ್‌ಸಿ ಕೊಡ್ತಾರೆ ಏಆರ್‌ಟಿಓ ಕೃಷ್ಣಮೂರ್ತಿ. ಆದ್ರೆ ತಮಾಷೆ ಗೊತ್ತಾ ಈ ಗಾಡಿ ಮಾರ್ಚ್ ೨೪ರಂದೇ ಲಾಕ್‌ಡೌನ್ ಇರೋದ್ರಿಂದ ನಮಗೆ ತೆರಿಗೆ ಕಟ್ಟೋಕೆ ಕಷ್ಟ ಆಗುತ್ತೆ ಹಾಗಾಗಿ ನಾವು ಈ ಗಾಡಿಯನ್ನ ಕೃಷ್ಣಗಿರಿಯಲ್ಲೇ ಇರಿಸ್ತೀವಿ ಅಂತ ಹೇಳಿ ಸರಂಡರ್ ಅರ್ಜಿ ಕೊಡ್ತಾರೆ. ಆದ್ರೆ ಇದೇ ಗಾಡಿಗೆ ಏಪ್ರಿಲ್ ೩೦ಕ್ಕೆ ಕೃಷ್ಣಮೂರ್ತಿ ಅದೂ ತಾನೂ ಕೋವಿಡ್ ಪಾಸಿಟಿವ್ ಆಗಿ ಹೋಂ ಕ್ವಾರಂಟೈನ್‌ನಲ್ಲಿದ್ದಾಗ ಎಫ್‌ಸಿ ಕೊಡ್ತಾರೆ. ಇದು ಹೇಗೆ ಸಾಧ್ಯ? ಇಂಥಾ ನೂರಾರು ಗಾಡಿಗಳು ಯಾವುದೇ ಚೆಕ್ ಆಗದೆ ಎಫ್‌ಸಿ ಪಡೆಯುತ್ತವೆ. ಇವು ರೋಡಿಗಿಳಿದು ಜನರ ಪ್ರಾಣಕ್ಕೆ ಕಂಟಕ ತರುತ್ತವೆ. ಆಗ ಇಂಥಾ ಭ್ರಷ್ಟ ಏಆರ್‌ಟಿಓಗಳು ಜವಾಬ್ದಾರಿಯಿಂದ ನುಣುಚಿಕೊಳ್ತಾರೆ.
ಬ್ಯಾನ್ ಆದ ಗಾಡಿನೂ ರಿಜಿಸ್ಟರ್: ಈ ಏಆರ್‌ಟಿಓ ಕಾಸು ಕೊಟ್ರೆ ಎಂಥಾ ಹೇಸಿಗೆ ಕೆಲಸಗಳನ್ನೂ ಮಾಡ್ತಾರೆ ಅನ್ನೋದಕ್ಕೆ ಇನ್ನೊಂದು ಉದಾಹರಣೆ ಇದೆ. ಬಿಸ್‌ಎಸ್ ೩ ಗಾಡಿಯನ್ನು ಸರ್ಕಾರ ೨೦೧೭ರಲ್ಲೇ ಬ್ಯಾನ್ ಮಾಡಿತ್ತು. ಈ ಗಾಡಿಗಳು ಎಲ್ಲೂ ರಿಜಿಸ್ಟರ್ ಆಗುತ್ತಿರಲಿಲ್ಲ. ಆದ್ರೆ ಬ್ಯಾನ್ ಆದ ಗಾಡಿಗಳನ್ನೂ ಕಾಸು ಪಡೆದು ರಿಜಿಸ್ಟರ್ ಮಾಡೋಕೆ ಹೊರಟಿದ್ರು ಕೃಷ್ಣಮೂರ್ತಿ. ಆದ್ರೆ ಯಾವಾಗ ಆರ್‌ಟಿಐ ಕಾರ್ಯಕರ್ತರು ದಾಖಲೆ ಪಡೆದು ಈ ಬಗ್ಗೆ ದೂರು ನೀಡಿದ್ರೋ ಆಗ ಗಾಡಿಗಳ ರಿಜಿಸ್ಟರ್ ಪ್ರಕಿಯೆಗೆ ಬ್ರೇಕ್ ಹಾಕಿದ್ರು. ಆದ್ರೂ ಬಿಎಸ್ ೩ ಟೂ ವೀಲ್ಹರ್ ಗಾಡಿಯನ್ನು ರಿಜಿಸ್ಟರ್ ಮಾಡಿಯೇ ಬಿಟ್ಟಿದ್ದಾರೆ.
ಪರ್ಮಿಟ್, ಓವರ್‌ಲೋಡ್‌ಗೂ ಜೈ: ಇನ್ನು ವಾಹನಗಳಿಗೆ ಪರ್ಮಿಟ್ ಪಡೀಬೇಕಾದ್ರೆ, ಕಾಸು ಕೊಟ್ರೆ ಸಾಕು ಪರ್ಮಿಟ್ ರೆಡಿಯಾಗಿರುತ್ತೆ. ಇನ್ನು ನೀವು ಓವರ್‌ಲೋಡ್ ಮಾಡಿಕೊಂಡು ಚೆಕ್‌ಪೋಸ್ಟ್ ದಾಟಬೇಕಾದ್ರೆ ತಿಂಗಳಿಗೆ ಇಷ್ಟು ಅಂತ ಏರ್‌ಟಿಓಗೆ ಫಿಕ್ಸ್ ಮಾಡಿದ್ರೆ ಸಾಕು, ಎಷ್ಟೇ ಹೆಚ್ಚುವರಿ ಲೋಡ್ ಹಾಕಿದ್ರೂ ಪಾಸ್. ಒಂದುವೇಳೆ ಕಾಸು ಕೊಡದಿದ್ರೆ ಗಾಡಿಯ ಲೈಸೆನ್ಸ್ ಸಸ್ಪೆಂಡ್ ಮಾಡೋ ಧಮ್ಕಿ ಕೊಡ್ತಾರೆ, ಈ ರೀತಿ ಏಜೆಂಟೊಬ್ಬ ಚಾಲಕನಿಗೆ ಧಮ್ಕಿ ಕೊಟ್ಟಿರುವ ಆಡಿಯೋ ವಿಜಯಟೈಮ್ಸ್ ಕವರ್‌ಸ್ಟೋರಿಗೆ ಸಿಕ್ಕಿದೆ. ಭ್ರಷ್ಟಾಚಾರ ಪ್ರಶ್ನಿಸಿದ್ರೆ ಹಲ್ಲೆಗೆ ಮುಂದಾಗ್ತಾರೆ: ನಾವು ಈ ಎಲ್ಲಾ ಹಗರಣಗಳ ಬಗ್ಗೆ ದಾಖಲೆ ಸಮೇತವಾಗಿ ಪ್ರಶ್ನೆ ಕೇಳಲು ಕೆಜಿಎಫ್ ಆರ್‌ಟಿಓ