RTO Warning to Darshan Fans: Attic Writing on Vehicles will no longer be Allowed.
Bengaluru: ಇತ್ತೀಚಿನ ದಿನಗಳಲ್ಲಿ ವಾಹನಗಳ ಮೇಲೆ ಬೇರೆ ಬೇರೆ ರೀತಿಯ ಬರಹಗಳನ್ನು ಚಿತ್ರಗಳನ್ನು ಅಳವಡಿಸಿಕೊಳ್ಳುವುದು ಹೆಚ್ಚಾಗಿ ಕಂಡುಬರುತ್ತಿದೆ. ಈ ಹಿಂದೆ ಈ ಮಟ್ಟಿಗೆ ಬರಹಗಳನ್ನ ವಾಹನಗಳ ಮೇಲೆ ಹಾಕಿರಲಿಲ್ಲ. ಈಗೆಲ್ಲಾ ಬರಹಗಳನ್ನು ಹಾಕೋದು ಟ್ರೆಂಡ್ (Trend) ಆಗಿದ್ದು ಈ ಬಗ್ಗೆ RTO ಇಲಾಖೆ ಹಾಗೂ ಪೊಲೀಸ್ ಇಲಾಖೆ ಗಮನಕ್ಕೆ ಬಂದಿದ್ದು, ಅನವಶ್ಯಕ ಬರಹಗಳು ಕಂಡುಬಂದಲ್ಲಿ ಕ್ರಮ ತೆಗೆದುಕೊಳ್ಳೂತ್ತೇವೆ.
ನೆಚ್ಚಿನ ನಟರ ಫೋಟೋಗಳನ್ನ ವಾಹನಗಳ ಮೇಲೆ ಹಾಕೋದು ಕಾನೂನು ಬಾಹಿರ ಎಂದು ಹೆಚ್ಚುವರಿ ಸಾರಿಗೆ ಆಯುಕ್ತ ಸಿ. ಮಲ್ಲಿಕಾರ್ಜುನ್ (C Mallikarjun) ಎಚ್ಚರಿಸಿದ್ದಾರೆ. ಇಷ್ಟು ದಿನಗಳ ಕಾಲ ನಂಬರ್ ಪ್ಲೇಟ್ ಮೇಲೆ ಮಾತ್ರ ಫೋಕಸ್ ಮಾಡ್ತಿದ್ವಿ. ಇನ್ನು ಮುಂದೆ ಕಾನೂನು ಪ್ರಕಾರ ಪ್ರಚೋದನೆ ಮಾಡುವ ಬರಹ ಮಾತ್ರವಲ್ಲ, ಯಾವುದೇ ಸ್ಟಿಕ್ಕರ್ಗಳಿಗೂ ಅವಕಾಶವಿಲ್ಲ.
ಹಾಗಾಗಿ ಇನ್ಮುಂದೆ ಅನಧಿಕೃತ ಬರಹ ಹಾಕಿದರೆ, ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತೆ. ಒಂದು, ಎರಡು ಬಾರಿ ಎಚ್ಚರಿಕೆ ಕೊಡ್ತೀವಿ. 3ನೇ ಬಾರಿ ಅದೇ ತಪ್ಪು ಮಾಡಿದ್ರೆ ಲೈಸೆನ್ಸ್ (License) ರದ್ದು ಮಾಡುತ್ತೇವೆ ಎಂದು ಮಲ್ಲಿಕಾರ್ಜುನ್ ಅವರು ಖಡಕ್ ವಾರ್ನಿಂಗ್ ಮಾಡಿದ್ದಾರೆ. ನಂಬರ್ ಪ್ಲೇಟ್ (Number Plate) ಯಾವ ರೀತಿ ಇರಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಆರ್ಟಿಒ ಇಲಾಖೆಗಳಿಗೆ ನಿರ್ದೇಶನ ಕೊಟ್ಟಿದೆ. ಅದರ ಅನ್ವಯವೇ ಅಧಿಕಾರಿಗಳು ಕೇಸು ದಾಖಲು ಮಾಡುತ್ತಾ ಬಂದಿದ್ದಾರೆ.
ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಾಗೂ ಪ್ರಚಾರ ಮಾಡುವ ಕೆಲಸ ಆರ್ಟಿಒ ಇಲಾಖೆ ಮಾಡಿದೆ. ಕಳೆದ 3 ವರ್ಷಗಳಲ್ಲಿ ಈ ಸಂಬಂಧ ಹಲವಾರು ಪ್ರಕರಣ ದಾಖಲು ಮಾಡಿದ್ದೇವೆ. ವಾಹನಗಳ ಮೇಲೆ ಬೇರೆ ಬೇರೆ ಬರಹಗಳನ್ನ ಬರೆಯುತ್ತಿದ್ದಾರೆ. ಪಂಚ್ ಲೈನ್ (Punch Line) ಹಾಕುತ್ತಿದ್ದಾರೆ.ಇನ್ನು ಮುಂದೆ ಯಾರೂ ಸಹ ಅನಾವಶ್ಯಕ ಬರಹಗಳನ್ನ ವಾಹನಗಳ ಮೇಲೆ ಹಾಕಬಾರದು.
ಇನ್ಮೇಲೆ ಈ ರೀತಿ ಸ್ಟಾರ್ ವಾರ್ ರೀತಿ ಅನಾವಶ್ಯಕ ಬರಹ, ಟಾಂಗ್ ಕೊಡೋ ಬರಹಗಳನ್ನ ತೆಗೆದು ಹಾಕಿ, ಇಲ್ಲ ನಮ್ಮ ಕಠಿಣ ಕ್ರಮ ಗ್ಯಾರಂಟಿ ಎಂದು ಎಚ್ಚರಿಕೆ ನೀಡಿದ್ದಾರೆ. ದರ್ಶನ್ಗೆ (Darshan) ನೀಡಿರುವ ಕೈದಿ ಸಂಖ್ಯೆ, ಸೇರಿದಂತೆ ವಾಹನಗಳ (Vehicles) ಮೇಲೆ ಪ್ರಚೋದನಕಾರಿ ಬರಹ ಕಂಡಲ್ಲಿ ಅಭಿಮಾನಿಗಳಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
RTO Warning to Darshan Fans Latest News
BENGALURU: These days it is more and more common to see different types of inscriptions and images on vehicles. In the past, writings to this extent were not put on vehicles. Now there is a trend of posting all the writings, the RTO department and the police department have noticed this and they will take action if any unnecessary writings are found.
Additional Transport Commissioner C said that putting photos of favorite actors on vehicles is illegal. C Mallikarjun warned. You have been focusing only on the number plate for so many days. No more provocative writing, no stickers allowed by law.
So if any unauthorized writing is done from now on, strict action will have to be taken. You will be warned once or twice. Mallikarjun has given a stern warning that if they do the same mistake for the 3rd time, they will cancel the license. The Supreme Court has directed the RTO departments as to how the Number Plate should be. Based on that, the authorities have been registering a case.
The RTO department has done the work of making people aware and promoting about this. We have registered several cases in this regard in the last 3 years. They are writing different writings on the vehicles. They are putting a punch line. No one should put unnecessary writings on the vehicles from now on.
He has warned that unnecessary writing like Star War, Tong Kodo should be removed, no, our strict action is guaranteed. Fans have been warned of legal action if they see provocative writing on vehicles, including the prisoner number given to Darshan.