- ಕ್ರೆಡಿಟ್ ಕಾರ್ಡ್‌ಗಳನ್ನು ಸ್ಮಾರ್ಟ್ ಆಗಿ ಬಳಸಲು (rules to use credit card) 5 ಪ್ರಮುಖ ತಂತ್ರಗಳು
- ಕ್ಯಾಶ್‌ಬ್ಯಾಕ್, ರಿವಾರ್ಡ್ ಪಾಯಿಂಟ್‌ಗಳು ಮತ್ತು ಸೀಸನಲ್ ಆಫರ್‌ಗಳಿಂದ ಗರಿಷ್ಠ ಲಾಭ ಪಡೆಯುವ ವಿಧಾನ ಗೊತ್ತಿರಲಿ
- ಕ್ರೆಡಿಟ್ ಕಾರ್ಡ್ ತಪ್ಪು ಮಾಡಿದ್ರೆ ದುಬಾರಿ, ಸರಿಯಾಗಿ ಮಾಡಿದ್ರೆ ಸೂಪರ್ ಸೇವಿಂಗ್
ಇಂದಿನ ಡಿಜಿಟಲ್ ಯುಗದಲ್ಲಿ ಕ್ರೆಡಿಟ್ ಕಾರ್ಡ್ (Credit Card) ಬಳಸಿದವರು (rules to use credit card) ಕಾಣಸಿಗುವುದು ಅಪರೂಪ.
ಹೌದು ಇದು ಬಹುತೇಕ ಭಾರತೀಯರ ದಿನನಿತ್ಯದ ಹಣಕಾಸಿನ ಜೀವನದ ಅವಿಭಾಜ್ಯ ಅಂಗವಾಗಿವೆ.
ಆನ್‌ಲೈನ್ ಶಾಪಿಂಗ್ (Online Shopping) , ಪ್ರಯಾಣ, ಯುಟಿಲಿಟಿ ಪಾವತಿಗಳು, ಆಹಾರ ವಿತರಣೆ ಸೇರಿದಂತೆ ಅನೇಕ ಖರ್ಚುಗಳಿಗೆ ಕ್ರೆಡಿಟ್ ಕಾರ್ಡ್ ಬಳಕೆ ಸಾಮಾನ್ಯವಾಗಿದೆ.
ಆದರೆ ಕಾರ್ಡ್ ಹೊಂದಿರುವ ಎಲ್ಲರೂ ಅದನ್ನು ಸ್ಮಾರ್ಟ್ (Smart) ಆಗಿ ನಿರ್ವಹಿಸುತ್ತಾರೆ ಎನ್ನುವುದಿಲ್ಲ. ಸರಿಯಾದ ಯೋಜನೆ ಇಲ್ಲದೆ ಕ್ರೆಡಿಟ್ ಕಾರ್ಡ್ ಬಳಸಿದರೆ ಅದು ಸಾಲದ ಬಲೆಗೆ ಸಿಲುಕುವ ಸಾಧ್ಯತೆಯೂ ಇದೆ.

ಅದೇ ಸಮಯದಲ್ಲಿ, ಸ್ಮಾರ್ಟ್ ಆಗಿ ಬಳಕೆ ಮಾಡಿದರೆ ಕ್ರೆಡಿಟ್ ಕಾರ್ಡ್ ಉಳಿತಾಯ ಹೆಚ್ಚಿಸುವ, ಕ್ರೆಡಿಟ್ ಸ್ಕೋರ್ ಸುಧಾರಿಸುವ ಮತ್ತು ಹಣಕಾಸಿನ ಶಿಸ್ತು ಬೆಳೆಸುವ ಶಕ್ತಿಶಾಲಿ ಸಾಧನವಾಗಬಹುದು.
ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಪಡೆಯುವಾಗ ಹೆಚ್ಚಿನ ಲಿಮಿಟ್ (Limit) ಅಥವಾ ಆಕರ್ಷಕ ಕ್ಯಾಶ್‌ಬ್ಯಾಕ್‌ಗಳನ್ನೇ (Cashback) ಆಧಾರವನ್ನಾಗಿ ಮಾಡಿಕೊಳ್ಳುವವರು ಹೆಚ್ಚು. ಆದರೆ ನಿಜವಾಗಿ ಪ್ರಯೋಜನ ಪಡೆಯಲು (rules to use credit card) ನಿಮ್ಮ ಖರ್ಚಿನ ಅಭ್ಯಾಸಕ್ಕೆ ತಕ್ಕ ಕಾರ್ಡ್ ಆಯ್ಕೆ ಮಾಡುವುದು ಅತ್ಯಂತ ಮುಖ್ಯ.
ಉದಾಹರಣೆಗೆ, ಹೆಚ್ಚಾಗಿ ವಿಮಾನ ಪ್ರಯಾಣ ಮಾಡುವವರು ಲಾಂಜ್ ಪ್ರವೇಶ, ಮೈಲೇಜ್ ಪಾಯಿಂಟ್‌ಗಳು ಮತ್ತು ಪ್ರಯಾಣ ವಿಮೆ ನೀಡುವ ಕಾರ್ಡ್‌ಗಳನ್ನು ಆರಿಸಿಕೊಳ್ಳಬಹುದು.
ಆನ್‌ಲೈನ್ ಶಾಪಿಂಗ್ ಅಥವಾ ಆಹಾರ ಆರ್ಡರ್ ಮಾಡುವವರು ಇ-ಕಾಮರ್ಸ್ (E-Commerce) ಮತ್ತು ಫುಡ್ ಡೆಲಿವರಿ (Food Delivery) ಮೇಲೆ ಹೆಚ್ಚಿನ ರಿವಾರ್ಡ್ ನೀಡುವ ಕಾರ್ಡ್‌ಗಳಿಗೆ ಆದ್ಯತೆ ನೀಡಬಹುದು.
ಅದೇ ರೀತಿ, ದಿನನಿತ್ಯ ವಾಹನ ಬಳಸುವವರು ಇಂಧನ ಸರ್ಚಾರ್ಜ್ ವಿನಾಯಿತಿ ಮತ್ತು ಫ್ಯೂಯೆಲ್ ರಿವಾರ್ಡ್‌ಗಳನ್ನು (Fuel Reward) ನೀಡುವ ಕಾರ್ಡ್‌ಗಳಿಂದ ಹೆಚ್ಚಿನ ಲಾಭ ಪಡೆಯಬಹುದು.
ನಿಮ್ಮ ಅಗತ್ಯಕ್ಕೆ ತಕ್ಕ ಕಾರ್ಡ್ ಆಯ್ಕೆ ಮಾಡಿದರೆ, ಪ್ರತಿಯೊಂದು ಖರ್ಚಿನಿಂದಲೂ ಹೆಚ್ಚುವರಿ ಮೌಲ್ಯ ಸಿಗುತ್ತದೆ.
ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ವರ್ಷಪೂರ್ತಿ ಹಲವು ಆಫರ್‌ಗಳು, ಕ್ಯಾಶ್‌ಬ್ಯಾಕ್ ಯೋಜನೆಗಳು ಮತ್ತು ಹಬ್ಬದ ಸೀಸನ್ ಕೊಡುಗೆಗಳನ್ನು ಪರಿಚಯಿಸುತ್ತಿರುತ್ತವೆ. ಆದರೆ ಅವುಗಳ ಬಗ್ಗೆ ಮಾಹಿತಿ ಇಲ್ಲದಿದ್ದರೆ ಆ ಪ್ರಯೋಜನ ಕೈ ತಪ್ಪುತ್ತದೆ.
ಆದ್ದರಿಂದ ನಿಮ್ಮ ಬ್ಯಾಂಕ್ ಅಪ್ಲಿಕೇಶನ್ (Bank Application) , SMS ಅಲರ್ಟ್‌ಗಳು ಮತ್ತು ಇಮೇಲ್ ಸೂಚನೆಗಳನ್ನು ನಿಯಮಿತವಾಗಿ ಪರಿಶೀಲಿಸುವ ಅಭ್ಯಾಸ ಬೆಳೆಸಬೇಕು.
ಕೆಲವೊಮ್ಮೆ ಲಿಮಿಟೆಡ್ ಅವಧಿಗೆ ಮಾತ್ರ ಲಭ್ಯವಿರುವ ರಿವಾರ್ಡ್ ಆಕ್ಸಿಲರೇಟರ್‌ಗಳು (Reward Accelerator) ಮತ್ತು ಡಿಸ್ಕೌಂಟ್‌ಗಳು (Discounts) ದೊಡ್ಡ ಉಳಿತಾಯಕ್ಕೆ ಕಾರಣವಾಗುತ್ತವೆ.
ಯಾವುದೇ ಕೊಡುಗೆಗಳ ಬಗ್ಗೆ ಗೊಂದಲ ಇದ್ದರೆ, ನೇರವಾಗಿ ಬ್ಯಾಂಕ್ ಕಸ್ಟಮರ್ ಕೇರ್ ಸಂಪರ್ಕಿಸುವುದು ಉತ್ತಮ.
ಮಾಹಿತಿ ಹೊಂದಿರುವ ಗ್ರಾಹಕನಾಗಿದ್ದರೆ ಮಾತ್ರ ಕ್ರೆಡಿಟ್ ಕಾರ್ಡ್‌ನ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯ.
ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿನ ಮತ್ತೊಂದು ಪ್ರಮುಖ ಅಂಶ ಎಂದರೆ ಕ್ರೆಡಿಟ್ ಯೂಟಿಲೈಜೇಶನ್ ರೇಷಿಯೋ (Credit utilization ratio).
ಇದು ನಿಮ್ಮ ಒಟ್ಟು ಲಿಮಿಟ್‌ನ ಎಷ್ಟು ಶೇಕಡಾವನ್ನು ನೀವು ಬಳಸುತ್ತಿದ್ದೀರಿ ಎಂಬುದನ್ನು ತೋರಿಸುತ್ತದೆ. ಹಣಕಾಸು ತಜ್ಞರ ಪ್ರಕಾರ, ಈ ಅನುಪಾತವನ್ನು 30 ಶೇಕಡಕ್ಕಿಂತ ಕಡಿಮೆ ಇಡುವುದು ಉತ್ತಮ.
ಉದಾಹರಣೆಗೆ, ನಿಮ್ಮ ಕಾರ್ಡ್ ಲಿಮಿಟ್ ₹2 ಲಕ್ಷ ಇದ್ದರೆ, ₹60,000 ಕ್ಕಿಂತ ಹೆಚ್ಚು ಬಳಸದೇ ಇರುವುದು ಕ್ರೆಡಿಟ್ ಸ್ಕೋರ್‌ಗೆ (Credit Score) ಒಳ್ಳೆಯದು. ಜೊತೆಗೆ, ಬಿಲ್ ಬಂದ ತಕ್ಷಣ ಅಥವಾ ಡ್ಯೂ ಡೇಟ್‌ಗೂ (Due Date) ಮುನ್ನ ಸಂಪೂರ್ಣ ಮೊತ್ತ ಪಾವತಿಸುವುದು ಬಹಳ ಮುಖ್ಯ.
ಕನಿಷ್ಠ ಮೊತ್ತ ಮಾತ್ರ ಪಾವತಿಸಿದರೆ ಬಡ್ಡಿ ಹೆಚ್ಚಾಗುತ್ತಾ ಹೋಗುತ್ತದೆ ಮತ್ತು ಸಾಲದ ಹೊರೆ ಹೆಚ್ಚುತ್ತದೆ. ಸಮಯಕ್ಕೆ ಸರಿಯಾದ ಪಾವತಿ ಉತ್ತಮ ಕ್ರೆಡಿಟ್ ಇತಿಹಾಸ ನಿರ್ಮಿಸಬಹುದಾಗಿದೆ.
ದೊಡ್ಡ ಮೊತ್ತದ ಖರೀದಿಗಳಿಗೆ ಕ್ರೆಡಿಟ್ ಕಾರ್ಡ್ EMI ಆಯ್ಕೆ ಒಂದು ಅನುಕೂಲಕರ ವ್ಯವಸ್ಥೆಯಾಗಿದೆ. ಆದರೆ EMI ಆಯ್ಕೆ ಮಾಡುವ ಮೊದಲು ಬಡ್ಡಿದರ, ಪ್ರೊಸೆಸಿಂಗ್ ಫೀಸ್ ಮತ್ತು ಇತರ ಶುಲ್ಕಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು.
ಸಾಧ್ಯವಾದಷ್ಟು ‘ನೋ-ಕಾಸ್ಟ್ EMI’ ಆಯ್ಕೆಗಳಿಗೆ ಆದ್ಯತೆ ನೀಡುವುದು ಒಳಿತು. ಜೊತೆಗೆ, ಪ್ರತಿ ತಿಂಗಳು ಸ್ಟೇಟ್‌ಮೆಂಟ್ ಬಂದ ಬಳಿಕ ವ್ಯವಹಾರಗಳನ್ನು ಪರಿಶೀಲಿಸುವ ಅಭ್ಯಾಸ ಸುರಕ್ಷತೆಗೆ ಅಗತ್ಯ.
ಅನಗತ್ಯ ಅಂತಾರಾಷ್ಟ್ರೀಯ ವ್ಯವಹಾರಗಳನ್ನು ತಪ್ಪಿಸಲು ಅಂತಾರಾಷ್ಟ್ರೀಯ ಟ್ರಾನ್ಸಾಕ್ಷನ್ (Transcation) ಆಯ್ಕೆಯನ್ನು ನಿಷ್ಕ್ರಿಯಗೊಳಿಸುವುದೂ ಉತ್ತಮ ಕ್ರಮ.
ಒಟ್ಟಿನಲ್ಲಿ, ಕ್ರೆಡಿಟ್ ಕಾರ್ಡ್ ಅನ್ನು ಶಿಸ್ತಿನಿಂದ ಮತ್ತು ಯೋಜಿತವಾಗಿ ಬಳಸಿದರೆ ಅದು ಸಾಲವಲ್ಲ, ಬದಲಾಗಿ ನಿಮ್ಮ ಹಣಕಾಸಿಗೆ ಬಲವಾದ ಸಹಾಯಕವಾಗುತ್ತದೆ.
ಇದನ್ನು ಓದಿ : https://vijayatimes.com/dk-shivakumar-slams-on-centre/