- ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳೇ ಸರ್ಕಾರಕ್ಕೆ ಹೊರೆ: ಆರ್.ವಿ ದೇಶಪಾಂಡೆ ಎಚ್ಚರಿಕೆ
- ಜನರಿಗೆ ಉಪಯೋಗವಾದರೂ, ರಾಜ್ಯದ ಅಭಿವೃದ್ಧಿ ನಿಧಾನಗತಿಯಲ್ಲಿ ಸಾಗುತ್ತಿದೆ (RV Deshpande shocking statement)
- ಸರ್ಕಾರ ನಡೆಸುವುದು ಕಷ್ಟವಾಗಿದೆ, ಸಮಿತಿಗಳ ನಿರ್ವಹಣೆಯೇ ಸವಾಲು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಆರ್ . ವಿ ದೇಶಪಾಂಡೆ
Uttara kannada: ಹಿರಿಯ ಕಾಂಗ್ರೆಸ್ ಶಾಸಕ ಆರ್.ವಿ. ದೇಶಪಾಂಡೆ, ತಮ್ಮದೇ ಪಕ್ಷದ ಐದು ಗ್ಯಾರಂಟಿ ಯೋಜನೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಹಂತ ಹಂತವಾಗಿ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಹಾಗೂ ಶಕ್ತಿ ಯೋಜನೆಗಳನ್ನು ಜಾರಿಗೆ ತಂದಿತ್ತು. ಈಗ ಸುಮಾರು ಎರಡುವರೆ ವರ್ಷಗಳಾದ ಬಳಿಕ,
ಈ ಯೋಜನೆಗಳು ಸರ್ಕಾರದ ಆರ್ಥಿಕ ಸ್ಥಿತಿಗೆ ಭಾರವಾದ ಹೊರೆ ಆಗಿವೆ ಎಂದು ದೇಶಪಾಂಡೆ ಸ್ಪಷ್ಟವಾಗಿ ಹೇಳಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಂಬೇವಾಡಿ ನವಗ್ರಾಮದಲ್ಲಿ ನಡೆದ ಕಾಂಗ್ರೆಸ್
ಸಮಿತಿಯ “ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹ ಅಭಿಯಾನ”ದಲ್ಲಿ ಭಾಗವಹಿಸಿದ ಅವರು ಮಾತನಾಡುತ್ತಾ,
“ನಾನು ಮುಖ್ಯಮಂತ್ರಿ ಆಗಿದ್ದರೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರಲಿಲ್ಲ” ಎಂದು ಹೇಳಿದರು. ಅವರ ಈ ಮಾತುಗಳು ಪಕ್ಷದೊಳಗೆ ಹೊಸ ಚರ್ಚೆಗೆ ಕಾರಣವಾಗಿವೆ.

ಇನ್ನು ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ ಜನರ ಮುಂದೆ ಐದು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿತ್ತು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಉಚಿತ ಅಕ್ಕಿ, ವಿದ್ಯುತ್ ಸೌಲಭ್ಯ,
ಹಣಕಾಸು ನೆರವು ಮುಂತಾದ ಸೌಲಭ್ಯಗಳಿಂದ ಸಾರ್ವಜನಿಕರಲ್ಲಿ ಪ್ರಾರಂಭದಲ್ಲಿ ಉತ್ಸಾಹ ಮೂಡಿತ್ತು. ಆದರೆ, ಕೆಲ ತಿಂಗಳುಗಳ ನಂತರ ಈ ಯೋಜನೆಗಳ ಹಣಕಾಸು ಹೊರೆ ಸರ್ಕಾರಕ್ಕೆ ತಲೆನೋವು
ಉಂಟುಮಾಡಿದೆ.ದೇಶಪಾಂಡೆ ಅವರ ಪ್ರಕಾರ, ಜನರಿಗೆ ತಕ್ಷಣದ ಉಪಯೋಗ ದೊರೆತರೂ, ಸರ್ಕಾರದ ಕಾರ್ಯನಿರ್ವಹಣೆಯ ವೇಗ ಕುಂದಿದೆ. ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಿರುವ ಹಣವನ್ನು ಮೀಸಲಿಡಲು ಕಷ್ಟವಾಗಿದೆ.
ಸರ್ಕಾರವು ಜನೋಪಯೋಗಿ ಯೋಜನೆಗಳನ್ನು ನಿಭಾಯಿಸಲು ಅನೇಕರನ್ನು ಒಳಗೊಂಡ ಸಮಿತಿಗಳನ್ನು ರಚಿಸಿದೆ. ಆದರೆ ಆ ಸಮಿತಿಗಳ ನಿರ್ವಹಣೆಯೇ ದೊಡ್ಡ ಸವಾಲಾಗಿದೆ ಎಂದಿದ್ದಾರೆ.
ಅಲ್ಲದೆ ದೇಶಪಾಂಡೆ ಮತ್ತೊಂದು ಪ್ರಮುಖ ವಿಷಯವನ್ನೂ ಉಲ್ಲೇಖಿಸಿ ಈ ಯೋಜನೆಗಳ ಬಹುಭಾಗ ಮಹಿಳೆಯರ ಪರವಾಗಿದೆ. ಪುರುಷರಿಗೆ ಯಾವುದೇ ನೇರ ಸೌಲಭ್ಯ ಲಭ್ಯವಾಗುತ್ತಿಲ್ಲ.
ಇದು ಸಮಾಜದಲ್ಲಿ ಅಸಮತೋಲನದ ಭಾವನೆಯನ್ನುಂಟುಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ರಾಜ್ಯ ಸರ್ಕಾರದ ಆದಾಯದಲ್ಲಿ ತೆರಿಗೆ ಸಂಗ್ರಹಣೆ ಕಡಿಮೆ ಆಗುತ್ತಿರುವ ಸಮಯದಲ್ಲಿ ಈ ಗ್ಯಾರಂಟಿ
ಯೋಜನೆಗಳು ಸರ್ಕಾರದ ಖಜಾನೆಗೆ ದೊಡ್ಡ ಹೊರೆ ಆಗಿವೆ. ಹಣಕಾಸು ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಈ ಯೋಜನೆಗಳ ನಿರ್ವಹಣೆಗೆ ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿಗಳ ವೆಚ್ಚವಾಗುತ್ತಿದೆ.
ಇದರಿಂದ ಇತರ ಅಭಿವೃದ್ಧಿ ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತಿವೆ.ನಮ್ಮ ಉದ್ದೇಶ ಜನರ ಹಿತಾಸಕ್ತಿ ಎಂಬುದು ನಿಜ.
ಆದರೆ ಅಭಿವೃದ್ಧಿಯ ದಿಕ್ಕಿನಲ್ಲಿ ಮುಂದುವರೆಯಲು ಸರ್ಕಾರಕ್ಕೆ ಬಲವಾದ ಆರ್ಥಿಕ ಮೂಲಾಧಾರ ಬೇಕು. ಸದ್ಯದ ಯೋಜನೆಗಳು ಜನಪ್ರಿಯವಾದರೂ,
ಇದನ್ನು ಓದಿ : ಸರ್ಕಾರಿ ಸ್ಥಳಗಳಲ್ಲಿ RSS ಚಟುವಟಿಕೆ ನಿರ್ಬಂಧಿಸುವಂತೆ ಪ್ರಿಯಾಂಕ್ ಖರ್ಗೆ ಮನವಿಗೆ ಸಿಎಂ ಸಿದ್ದರಾಮಯ್ಯ ಸ್ಪಂದನೆ
ದೀರ್ಘಾವಧಿಯಲ್ಲಿ ಸರ್ಕಾರದ ಶಕ್ತಿ ಕುಂದಿಸುವಂತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. (RV Deshpande shocking statement)