ಬೆಂಗಳೂರು, ಡಿ. 15: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಕೆಲವು ಸೇವೆಗಳು ಮತ್ತೆ ನಿರ್ವಹಣೆ ಕೊರತೆಗೆ ಒಳಗಾಗಿವೆ. ಆದರೆ ಈ ಬಾರಿ ಇದು ಎಲ್ಲಾ ಗ್ರಾಹಕರ ಮೇಲೆ ಪರಿಣಾಮ ಬೀರುವುದಿಲ್ಲ. ಎನ್ ಆರ್ ಐ ಸೇವೆಗಳಿಗೆ ಮಾತ್ರ ತೊಂದರೆಯಾಗಲಿದ್ದು, ಈ ಬಗ್ಗೆ ಎಸ್ ಬಿಐ ತನ್ನ ಟ್ವಿಟರ್ ಹ್ಯಾಂಡಲ್ ಮೂಲಕ ಮಾಹಿತಿ ನೀಡಿದೆ. ಬ್ಯಾಂಕ್ʼನ ಟ್ವೀಟ್ ಪ್ರಕಾರ, ಎಸ್ ಬಿ ಐ ನ ಎನ್ ಆರ್ ಐ ಸೇವೆಗಳು 2020ರ ಡಿಸೆಂಬರ್ 15ರಿಂದ 2020ರ ಡಿಸೆಂಬರ್ 17ರವರೆಗೆ ತೊಂದರೆಯಾಗಲಿದೆ.
ಈ ಅವಧಿಯಲ್ಲಿ ಗ್ರಾಹಕರಿಗೆ ಆಗುತ್ತಿರುವ ಅನಾನುಕೂಲಕ್ಕೆ ಬ್ಯಾಂಕ್ ಕ್ಷಮೆಯಾಚಿಸಿದ್ದು, ಬ್ಯಾಂಕ್ʼನ ಇತರ ಡಿಜಿಟಲ್ ಪ್ಲಾಟ್ ಫಾರ್ಮ್ʼಗಳನ್ನ ಬಳಸುವಂತೆ ಮನವಿ ಮಾಡಿದೆ. ಗ್ರಾಹಕರಿಗೆ ಬ್ಯಾಂಕಿಂಗ್ ಅನುಭವವನ್ನು ಒದಗಿಸುವ ನಿಟ್ಟಿನಲ್ಲಿ ಸೇವೆಗಳನ್ನ ಸುಧಾರಿಸುವ ನಿಟ್ಟಿನಲ್ಲಿ ಈ ಚಟುವಟಿಕೆಯನ್ನ ನಡೆಸಲಾಗುತ್ತಿದೆ ಎಂದು ಎಸ್ ಬಿ ಐ ತಿಳಿಸಿದೆ.
ತಿಂಗಳ ಆರಂಭದಲ್ಲಿ YONO SBI ಸೇವೆಯನ್ನ ನಿಲ್ಲಿಸಲಾಗಿತ್ತು..!ಡಿಸೆಂಬರ್ ಮೊದಲ ವಾರದಲ್ಲಿ YONO SBI Appನ ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಇದರಿಂದ ಗ್ರಾಹಕರು ತೊಂದರೆ ಅನುಭವಿಸಬೇಕಾಯಿತು ಮತ್ತು ಬ್ಯಾಂಕಿನ ಟ್ವಿಟರ್ ಹ್ಯಾಂಡಲ್ ನಲ್ಲಿ ನಿರಂತರವಾಗಿ ದೂರುಗಳು ಬರುತ್ತಲೇ ಇದ್ದವು. ಸಿಸ್ಟಮ್ ನ ದೋಷದಿಂದಾಗಿ YONO SBI ಮೊಬೈಲ್ ಆಪ್ʼಗೆ ತೊಂದರೆಯಾಯಿತು ಎಂದು ಬ್ಯಾಂಕ್ ಹೇಳಿತ್ತು. ಈ ಹಿಂದೆ ನವೆಂಬರ್ 22ರಂದು ಎಸ್ ಬಿ ಐ ತನ್ನ ಅಂತರ್ಜಾಲ ಬ್ಯಾಂಕಿಂಗ್ ವೇದಿಕೆಯನ್ನು ಮೇಲ್ದರ್ಜೆಗೇರಿಸಿತ್ತು. ಇದರಿಂದಾಗಿ ಬ್ಯಾಂಕ್ ಈಗಾಗಲೇ ಗ್ರಾಹಕರಿಗೆ ಇಂಟರ್ ನೆಟ್ ಬ್ಯಾಂಕಿಂಗ್, YONO, YONO ಲೈಟ್ ಬಳಕೆಯಲ್ಲಿಕೆಲವು ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ನೀಡಿತ್ತು.