ಕನ್ನಡದ ಖ್ಯಾತ ನಿರ್ದೇಶಕ(Director) ಎಸ್.ನಾರಾಯಣ್(S. Narayan) ಅವರು ಕರ್ನಾಟಕ(Karnataka) ಪ್ರದೇಶ ಕಾಂಗ್ರೆಸ್(Congress) ಅಧ್ಯಕ್ಷ(President) ಡಿ.ಕೆ.ಶಿವಕುಮಾರ್(D.K Shivkumar) ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಬೆಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಡಿಜಿಟಲ್ ಸದಸ್ಯತ್ವವನ್ನು ಪಡೆಯವ ಮೂಲಕ ಎಸ್.ನಾರಾಯಣ್ ಕಾಂಗ್ರೆಸ್ ಸೇರಿದರು.

ಇನ್ನು ಈ ಕುರಿತು ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕನ್ನಡದ ಖ್ಯಾತ ನಿರ್ದೇಶಕರಾಗಿರುವ ಬಹುಮುಖ ಪ್ರತಿಭೆ ಎಸ್. ನಾರಾಯಣ್ ಅವರು ನಮ್ಮ ಪಕ್ಷವನ್ನು ಸೇರಿರುವುದು ನಮಗೆ ತುಂಬಾ ಸಂತೋಷ ನೀಡಿದೆ. ಅವರು ಕಾಂಗ್ರೆಸ್ ಪಕ್ಷದ ತತ್ವ-ಸಿದ್ದಾಂತವನ್ನು ಒಪ್ಪಿ ನಮ್ಮೊಂದಿಗೆ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ. ಇಂದಿನಿಂದ ಎಸ್. ನಾರಾಯಣ್ ಅವರು ವಾಣಿಜ್ಯ ಮಂಡಳಿ ಮತ್ತು ಸಮುದಾಯದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಲಿದ್ದಾರೆ. ಎಸ್.ನಾರಾಯಣ್ ಅವರಂತೆ ಕಾಂಗ್ರೆಸ್ ಪಕ್ಷದ ತತ್ವಗಳನ್ನು ಮೆಚ್ಚಿ ಪಕ್ಷ ಸೇರಲು ಚಿತ್ರರಂಗದ ಅನೇಕ ಗಣ್ಯರು ಸಿದ್ದರಿದ್ದಾರೆ.
ಕೆಲವರು ಅರ್ಜಿಯನ್ನು ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ಸೇರ್ಪಡೆಗೆ ಅವರಿಗೆಲ್ಲ ಅವಕಾಶ ಮಾಡಿಕೊಡಲಾಗುವುದು. ಆ ಮೂಲಕ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲಾಗುವುದು ಎಂದರು. ಇನ್ನು ಕಾಂಗ್ರೆಸ್ ಪಕ್ಷದ ಸೇರ್ಪಡೆ ನಂತರ ಮಾತನಾಡಿದ ನಿರ್ದೇಶಕ ಎಸ್. ನಾರಾಯಣ್, ನಾನು ಕಾಂಗ್ರೆಸ್ ಪಕ್ಷದ ತತ್ವಸಿದ್ದಾಂತಗಳನ್ನು ಬಹುವಾಗಿ ಮೆಚ್ಚಿಕೊಂಡು ಪಕ್ಷಕ್ಕೆ ಸೇರಿದ್ದೇನೆ. ೨೦೨೩ಕ್ಕೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಮುಂದಿರುವ ಮುಖ್ಯ ಗುರಿ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವದಿಂದಲೂ ತ್ಯಾಗ, ಬಲಿದಾನಕ್ಕೆ ಹೆಸರಾಗಿದೆ.
ಈ ದೇಶದ ಬಡವರು, ದಲಿತರು,ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗಾಗಿ ಕಾಂಗ್ರೆಸ್ ಪಕ್ಷವು ಸಾಕಷ್ಟು ಕೆಲಸ ಮಾಡಿದೆ. ಅವರಿಗಾಗಿ ಅನೇಕ ಉತ್ತಮ ಯೋಜನೆಗಳನ್ನು ನೀಡಿದೆ. ಹೀಗಾಗಿ ನಾನು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದರು. ಇನ್ನು ಎಸ್. ನಾರಾಯಣ್ ಅವರು ಕನ್ನಡದ ಖ್ಯಾತ ನಟ ಮತ್ತು ನಿರ್ದೇಶಕರಾಗಿದ್ದು, ಅನೇಕ ಸದಭಿರುಚಿಯ ಚಿತ್ರಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರ ಚೆನ್ನಾಂಬಿಕಾ ಫಿಲ್ಮ್ಸ್ಅಡಿಯಲ್ಲಿ ಎಸ್. ನಾರಾಯಣ್ ಅವರು ಸಾಕಷ್ಟು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಹೀಗಾಗಿ ಎಸ್.ನಾರಾಯಣ್ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ನಡುವೆ ಉತ್ತಮ ಒಡನಾಟವಿದ್ದು, ಎಸ್. ನಾರಾಯಣ್ ಜೆಡಿಎಸ್ ಸೇರುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಇತ್ತೀಚೆಗೆ ಎಸ್.ನಾರಾಯಣ್ ನಿರ್ದೇಶನದ ಹೊಸ ಸಿನಿಮಾ ‘5D’ ಪೋಸ್ಟರ್ ಬಿಡುಗಡೆಗೆ ಬಂದಿದ್ದ ವೇಳೆ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನಾರಾಯಣ್ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದರು ಎನ್ನಲಾಗಿದೆ.