ಹೆಣ್ಣು ಯಾವಾಗ ನಮ್ಮ ದೇಶದಲ್ಲಿ ಒಂಟಿಯಾಗಿ ರಾತ್ರಿಯಲ್ಲಿ ಯಾರ ನಿರ್ಭೀತಿಯಿಲ್ಲದೆ ಓಡಾಡಲು ಸಾಧ್ಯವೋ ಆವಾಗ ನಮಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಂತೆ ಎಂದು ಗಾಂಧೀಜಿ ಹೇಳಿದ್ದಾರೆ. ಹಾಗಾದ್ರೆ ನಮ್ಮ ದೇಶದಲ್ಲಿ ಅಂಥಾ ಯಾವುದಾದ್ರೂ ನಗರ ಇದೆಯಾ? ವಿಶ್ವದಲ್ಲೇ ಮಹಿಳೆಯರಿಗೆ (safest cities in world) ಅತ್ಯಂತ ಸುರಕ್ಷಿತ ನಗರ ಯಾವುದು ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ.
ಇಡೀ ಪ್ರಪಂಚದಲ್ಲಿ ಮಹಿಳೆಯರಿಗೆ ಅತ್ಯಂತ ಸುರಕ್ಷಿತ ಪಟ್ಟಣ ಅನ್ನೋ ಖ್ಯಾತಿಯನ್ನು ಮದಿನಾ (Madinah)ಪಡೆದುಕೊಂಡದಿದೆ. ಎರಡನೇ ಸ್ಥಾನವನ್ನು ಚಿಯಾಂಗ್ ಮಾಯ್(Chiang Mai)ಮತ್ತು ಮೂರನೆಯ ಸ್ಥಾನವನ್ನು ದುಬೈ ಮುಡಿಗೇರಿಸಿಕೊಂಡಿದೆ.

ನಮ್ಮಲ್ಲಿ ಅನೇಕ ಜನ ಕುಟುಂಬ ಸಮೇತವಾಗಿ ಅಥವಾ ಸ್ನೇಹಿತರ ಜೊತೆ ಪ್ರಯಾಣಿಸಲು ಇಚ್ಚಿಸುತ್ತೇವೆ. ಆದರೆ ಕೆಲವೊಬ್ಬರು ಒಂಟಿಯಾಗಿ ಪ್ರಯಾಣಿಸುವುದನ್ನು ಇಷ್ಟ ಪಡುತ್ತಾರೆ.
ಆದರೆ ಒಂಟಿಯಾಗಿ ಒಬ್ಬಳು ಮಹಿಳೆ ಪ್ರಯಾಣ ಮಾಡುವುದು ಅಷ್ಟು ಸುರಕ್ಷಿತವಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ.
ಆದರೆ ಈ ಮಾತನ್ನು ಸುಳ್ಳಾಗಿಸುವ ಮತ್ತು ಮಹಿಳೆಯರು ನಿರ್ಭಯವಾಗಿ ರಾತ್ರಿಯೂ ಕೂಡ ಯಾವುದೇ ಭೀತಿ ಇಲ್ಲದೆ ಓಡಾಡಲು ಸಾಧ್ಯವಾಗುವ ನಗರಗಳ (safest cities in world) ಪೈಕಿ ಮದೀನಾ (Madinah) ನಗರವು 9.29 ಅಂಕ ಪಡೆಯುವುದರೊಂದಿಗೆ ಮೊದಲನೇ ಸ್ಥಾನ ಪಡೆದಿದೆ,
ಎರಡನೇ ಸ್ಥಾನ ಪಡೆದ ಥಾಯ್‌ಲ್ಯಾಂಡ್‌ನ (Thailand) ಚಿಯಾಂಗ್ ಮಾಯ್ ನಗರ 8.96 ಅಂಕ ಪಡೆದರೆ ದುಬೈ 8.95 ಅಂಕ ಗಳಿಸಿದೆ.
ಸುರಕ್ಷಿತವಲ್ಲದ ನಗರಗಳು ಯಾವುವು?: ಸುರಕ್ಷಿತವಲ್ಲದ ಸ್ಥಳಗಳ ಪಟ್ಟಿ ನೋಡುವುದಾದರೆ ಜೋಹಾನ್ಸ್ಬರ್ಗ್ ದಕ್ಷಿಣ ಆಫ್ರಿಕಾ(Africa) (0.55) ಮತ್ತು ಕೌಲಾಲಂಪುರ್ ಮಲೇಷ್ಯಾ (Malaysia) (3.36),
ಮೂರನೇ ಅತ್ಯಂತ ಅಸುರಕ್ಷಿತ ಪ್ರದೇಶ ಪ್ಯಾರಿಸ್ (Paris) ನಗರ (3.62) ಎಂದೆನಿಸಿಕೊಂಡಿದೆ.
ಪ್ರವಾಸೋದ್ಯಮಕ್ಕೆ ಅತ್ಯುತ್ತಮ ನಗರಗಳು : ಅತ್ಯುತ್ತಮ ಪ್ರವಾಸಿ ನಗರಿ ಅನ್ನೋ ಖ್ಯಾತಿಯನ್ನು ಕಳೆದ ಬಾರಿ ಮೊದಲನೇ ಸ್ಥಾನದಲ್ಲಿದ್ದ ನ್ಯೂಯಾರ್ಕ್(New York)ಅನ್ನು ಹಿಂದಿಕ್ಕೆ ದುಬೈ ಮೊದಲನೇ ಸ್ಥಾನಕ್ಕೇರಿದೆ ,
ಎರಡನೆಯ ಸ್ಥಾನವನ್ನು ನ್ಯೂಯಾರ್ಕ್ ನಗರ ಪಡೆದರೆ ಬಾರ್ಸಿಲೋನಾ(Barcelona)ಮೂರನೇ ಸ್ಥಾನವನ್ನು ಪಡೆದಿದೆ.

ಜನರಿಗೆ ಕೈಗೆಟುಕುವ ನಗರ: ಇನ್ನು ಜನರಿಗೆ ಜೀವಿಸಲು ಮತ್ತು ಪ್ರವಾಸಿಗರಿಗೆ ಕೈಗೆಟುಕುವ ನಗರಗಳ ಪೈಕಿ ನಮ್ಮ ಭಾರತದ ಜೈಪುರ (Jaipur) ಮೊದಲನೇ ಸ್ಥಾನದಲ್ಲಿದೆ .
ಸಮೀಕ್ಷೆಯ ಪ್ರಕಾರ ಜೈಪುರದಲ್ಲಿ $15 ದೈನಂದಿನ ವೆಚ್ಚವಾಗಿದೆ. ಎರಡನೆಯ ಸ್ಥಾನದಲ್ಲಿ ಭಾರತದ ಚೆನ್ನೈ (Chennai) ಇದೆ.
ಇಲ್ಲಿನ ದೈನಂದಿನ ವೆಚ್ಚ $24 ಆಗಿದೆ. ಮೂರನೆಯ ಸ್ಥಾನವನ್ನು ಟರ್ಕಿಯ ಅಂಟಲ್ಯ ತನ್ನದಾಗಿಸಕೊಂಡಿದ್ದು ಇಲ್ಲಿ ಸರಾಸರಿ ದೈನಂದಿನ ವೆಚ್ಚಕ್ಕೆ 25$ ಗಳು ಬೇಕಾಗುತ್ತದೆ.
ಖರ್ಚು ವೆಚ್ಚ ಮತ್ತು ಜೀವನ ನಿಭಾಯಿಸಲು ಅತ್ಯಂತ ಉತ್ತಮ ನಗರ ನಮ್ಮ ಭಾರತದಲ್ಲಿ ಇದ್ದರೂ ,ಮಹಿಳೆಯರ ಸುರಕ್ಷತೆಯಲ್ಲಿ ಭಾರತ ಇನ್ನೂ ಹಿಂದೆಯೇ ಉಳಿದಿದೆ. ಈ ಎಲ್ಲ ಮಾಹಿತಿಯನ್ನು ‘INSURE MY TRIP’ ನಡೆಸಿದ ಸಮೀಕ್ಷೆಯ ವರದಿಯಿಂದ ಸಂಗ್ರಹಿಸಲಾಗಿದೆ.
ಮೊಹಮ್ಮದ್ ಶರೀಫ್