The state government has come forward to make safety belts mandatory for taking children on two-wheelers.
Bengaluru: ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಂಬತ್ತು ತಿಂಗಳ ಮಗುವಿನಿಂದ ತೊಡಗಿ ನಾಲ್ಕು ವರ್ಷದೊಳಗಿನ ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದೊಯ್ಯುವಾಗ ಶಿಶು ಸುರಕ್ಷಾ ಕವಚ ಅಥವಾ ಸುರಕ್ಷತಾ ಬೆಲ್ಟ್ (Safety Harness Belt) ಧರಿಸುವುದನ್ನು ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಕೇಂದ್ರ ಸರ್ಕಾರ ಈಗಾಗಲೇ ಈ ನಿಯಮವನ್ನು ಕಡ್ಡಾಯಗೊಳಿಸಿದ್ದರೂ, ಕರ್ನಾಟಕದಲ್ಲಿ ಇದು ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿರಲಿಲ್ಲ. ಈ ಕುರಿತು ಈಗಾಗಲೇ ಜಾಗೃತಿ ಅಭಿಯಾನ ಆರಂಭವಾಗಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಸುರಕ್ಷತಾ ಬೆಲ್ಟ್ ಹೆಲ್ಮೆಟ್ ಅಷ್ಟೇ ಪ್ರಯೋಜನಕಾರಿ. ಏಕೆಂದರೆ ಇಲ್ಲದೆ ದ್ವಿಚಕ್ರ ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುವಾಗ ಅವರು ರಸ್ತೆಗೆ ಬೀಳುವ ಅಪಾಯ ಹೆಚ್ಚಿದೆ. ಅನೇಕ ಸವಾರರು ತಮ್ಮ ಮಕ್ಕಳನ್ನು ಬೈಕ್ಗಳ ಪೆಟ್ರೋಲ್ ಟ್ಯಾಂಕ್ಗಳ ಮೇಲೆ ಕೂರಿಸುತ್ತಾರೆ ಅಥವಾ ಫುಟ್ರೆಸ್ಟ್ ಪ್ರದೇಶದಲ್ಲಿ ನಿಲ್ಲಲು ಅವಕಾಶ ನೀಡುತ್ತಾರೆ. ಅಂತಹ ಸಂದರ್ಭಗಳಲ್ಲಿ, ಮಕ್ಕಳು ತಮ್ಮ ಸಮತೋಲನವನ್ನು ಕಳೆದುಕೊಳ್ಳಬಹುದು ಮತ್ತು ಬೀಳಬಹುದು.
ವಿಶೇಷವಾಗಿ ಹಠಾತ್ ಬ್ರೇಕ್ ಹಾಕಿದಾಗ ಇಂಥ ಘಟನೆಗಳಾಗುವ ಸಾಧ್ಯತೆ ಹೆಚ್ಚಿದೆ. ಇನ್ನು ಕೆಲವು ಸಂದರ್ಭಗಳಲ್ಲಿ, ಸವಾರಿ ಮಾಡುವಾಗ ಮಕ್ಕಳು ನಿದ್ರಿಸಬಹುದು. ಅನೇಕ ಸವಾರರು ತಮ್ಮ ಶಿಶುಗಳನ್ನು ಒಂದು ಕೈಯಿಂದ ಹಿಡಿದುಕೊಂಡು ಮತ್ತೊಂದು ಕೈಯಿಂದ ವಾಹನವನ್ನು ಚಲಾಯಿಸುತ್ತಾರೆ, ಇದು ಮಗುವಿನ ಸುರಕ್ಷತೆಗೆ ಮತ್ತಷ್ಟು ಅಪಾಯಕರ ಎಂದು ಅಧಿಕಾರಿಗಳು ಅಭಿಪ್ರಾಯ ತಿಳಿಸಿದ್ದಾರೆ.
ಹಾಗಾಗಿ ಹೆಲ್ಮೆಟ್ ಹೇಗೆ ಕಡ್ಡಾಯವೋ ಅದೇ ರೀತಿಯಲ್ಲಿ ಸುರಕ್ಷತಾ ಬೆಲ್ಟ್ ಕೂಡ ಕಡ್ಡಾಯ ಮಾಡುವ ಕುರಿತಾಗಿ ರಾಜ್ಯ ಸರ್ಕಾರ ನಿರ್ಧರಿಸಿದೆ.ಕರ್ನಾಟಕದಾದ್ಯಂತ ಸಾರಿಗೆ ಇಲಾಖೆ ಅಧಿಕಾರಿಗಳು ಈಗ ಸೇಫ್ಟಿ ಹಾರ್ನೆಸ್ ಬೆಲ್ಟ್ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ (DC) ಕಚೇರಿಗಳಲ್ಲಿ ಕೆಲವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಎಲ್ಲಾ ಡಿಸಿ ಕಚೇರಿಗಳಲ್ಲಿ ಇದೇ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುವುದು.
Safety Belts Mandatory for Children on Bike
ಶಿಕ್ಷಣ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಗಳಿಗೂ ಜಾಗೃತಿ ಅಭಿಯಾನಗಳನ್ನು ವಿಸ್ತರಿಸುವ ಯೋಜನೆಗಳು ನಡೆಯುತ್ತಿವೆ. ಈ ಕಾರ್ಯಕ್ರಮಗಳು ಪೂರ್ಣಗೊಂಡ ಬಳಿಕ ನಿಯಮ ಉಲ್ಲಂಘಿಸುವ ಸವಾರರಿಗೆ ದಂಡ ವಿಧಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
Bengaluru: In recent days, in the wake of increasing road accidents, the government is thinking of making it mandatory for children from nine months to four years old to wear child safety harness or safety harness belt while taking them on two-wheelers. Although the central government has already made this rule mandatory, it is yet to be fully implemented in Karnataka. Sources in the transport department said that an awareness campaign has already started in this regard.
A safety belt helmet is just as beneficial. Because without it, the risk of children falling on the road is high when they are taken on two-wheelers. Many riders let their children sit on the bike’s petrol tanks or stand on the footrest area. In such cases, children may lose their balance and fall.
Such incidents are more likely to happen especially when braking suddenly. In other cases, children may fall asleep while riding. Many riders hold their babies with one hand while driving with the other, further endangering the child’s safety, officials said.
So the state government has decided to make safety belt mandatory in the same way as helmet is mandatory. Transport department officials across Karnataka are now working to create awareness about the importance of safety harness belt. Some awareness programs are being conducted in District Collector (DC) offices and soon similar programs will be conducted in all DC offices.
Plans are underway to extend awareness campaigns to educational institutions and police departments as well. After the completion of these programs, the authorities are thinking of penalizing the riders who violate the rules.