Hyderabad : ನ್ಯಾಚುರೆಲ್ ಬ್ಯೂಟಿ ಎಂದೇ ಟಾಲಿವುಡ್ ಅಂಗಳದಲ್ಲಿ ಖ್ಯಾತರಾಗಿರುವ ನಟಿ ಸಾಯಿ ಪಲ್ಲವಿ (sai pallavi in pushpa2) ಅವರು ಇದೀಗ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಮುಂಬರುವ ಚಿತ್ರ ಪುಷ್ಪ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದು ವರದಿಯಾಗಿದೆ.
ಅಲ್ಲು ಅರ್ಜುನ್, ಫಹದ್ ಫಾಸಿಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವ ಆಕ್ಷನ್-ಥ್ರಿಲ್ಲರ್, ಪುಷ್ಪ: ದಿ ರೂಲ್ ಭಾಗ 2 ಚಿತ್ರದಲ್ಲಿ ನಟಿ ಸಾಯಿ ಪಲ್ಲವಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸಬಹುದು ಎಂದು ಹಲವಾರು ವರದಿಗಳು ಹೇಳುತ್ತಿವೆ.
ಈ ಬಗ್ಗೆ ವರದಿಗಳೊಡನೆ ವದಂತಿಗಳು ಹೆಚ್ಚಾಗಿದ್ದು, ಸದ್ಯ ನಟಿ ಸಾಯಿ ಪಲ್ಲವಿ ಅವರಿಂದ (sai pallavi in pushpa2) ಈ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ ಜೊತೆಗೆ ಪುಷ್ಪ 2 ಚಿತ್ರತಂಡದಿಂದ ಕೂಡ ದೊರೆತಿಲ್ಲ!
ತಮಿಳಿನ ಗಾರ್ಗಿ (Gargi) ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟಿ ಸಾಯಿ ಪಲ್ಲವಿ, ಪುಷ್ಪ ಚಿತ್ರದಲ್ಲಿ ನಟ ಅಲ್ಲು ಅರ್ಜುನ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು,
ಚಿತ್ರದಲ್ಲಿ ಸಾಯಿ ಪಲ್ಲವಿ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪುಷ್ಪ 2 : ದಿ ರೂಲ್‌ಗೆ ಹೊಸದಾಗಿ ಸೇರಿಸಲಾದ ಪಾತ್ರವನ್ನು ಮಾಡಲು ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ವರದಿಗಳು ಉಲ್ಲೇಖಿಸಿವೆ. ಆದಾಗ್ಯೂ,
ಚಿತ್ರತಂಡದಿಂದ ಅಧಿಕೃತ ಮಾಹಿತಿಗಾಗಿ ಹೆಚ್ಚು ನಿರೀಕ್ಷಿಸಲಾಗಿದೆ.
ಸದ್ಯ ಚಿತ್ರೀಕರಣ ಹಂತದಲ್ಲಿರುವ ಪುಷ್ಪ ೨ ಚಿತ್ರದಲ್ಲಿ ಫಹಾದ್ ಫಾಸಿಲ್ಗೆ (Fahadh Faasil) ಜೋಡಿಯಾಗಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂದು ವರದಿಯಾಗಿದೆ.
ಹಲವು ವರದಿಗಳ ಪ್ರಕಾರ ತಿಳಿಯುವುದಾದರೆ, ನಟಿ ಸಾಯಿ ಪಲ್ಲವಿ ಪುಷ್ಪ 2 : ದಿ ರೂಲ್‌ನಲ್ಲಿ ಸಾಯಿ ಪಲ್ಲವಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅವರು ಮುಂದಿನ ಶೆಡ್ಯೂಲ್‌ನಲ್ಲಿ ಸೆಟ್‌ಗೆ ಸೇರುತ್ತಾರೆ ಮತ್ತು ಒಂದು ವಾರದ ಅವಧಿಯಲ್ಲಿ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸುತ್ತಾರೆ.
ಪುಷ್ಪ 2 ಚಿತ್ರಕ್ಕೆ ಸಾಯಿ ಪಲ್ಲವಿ ಸಹಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಈ ವರದಿಗಳಿಗೆ ಪ್ರತಿಕ್ರಿಯಿಸಿರುವ ಹಲವಾರು ಅಭಿಮಾನಿಗಳು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಸಾಯಿ ಪಲ್ಲವಿ (Sai Pallavi) ಅವರ ಎಂಟ್ರಿಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಕೆಲವರು ಸಾಯಿ ಪಲ್ಲವಿ ಅವರು ಬಂದರೆ ಸಿನಿಮಾ ಮತ್ತಷ್ಟು ಅದ್ದೂರಿಯಾಗಿರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬರು ಇದು ನಿಜವಾಗಿದ್ದರೆ, ಖಂಡಿತ ಇದು ರೋಮಾಂಚನಕಾರಿಯಾಗಿದೆ. ಸಾಯಿ ಪಲ್ಲವಿ ಅವರು ನೆಗಟಿವ್ (Negative)ಪಾತ್ರವನ್ನು ನಿರ್ವಹಿಸಿದರೆ ಅದು ಇನ್ನಷ್ಟು ಆಸಕ್ತಿದಾಯಕವಾಗಿರುತ್ತದೆ ಎಂದು ಹೇಳಿದ್ದಾರೆ.
ಅಲ್ಲು ಅರ್ಜುನ್ ಅಭಿನಯದ ಚಿತ್ರದಲ್ಲಿ ಸಾಯಿ ಪಲ್ಲವಿ ಅವರು ಅಭಿನಯಿಸಿದರೇ, ಇದೇ ಮೊದಲ ಬಾರಿಗೆ ಅವರು ಅಲ್ಲು ಅರ್ಜುನ್ ಅವರೊಂದಿಗೆ ನಟಿಸಲಿರುವ ಚಿತ್ರವಾಗಲಿದೆ. ಪುಷ್ಪ 2 ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು
ಅನಸೂಯಾ ಭಾರದ್ವಾಜ್ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ಅವರು ವಿಶಾಖಪಟ್ಟಣದಲ್ಲಿ ಪುಷ್ಪ 2 ಚಿತ್ರದ ತಮ್ಮ ವೇಳಾಪಟ್ಟಿಯ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.