ಮರಗೆಣಸು ತಿನ್ನೋದರಿಂದ ಅನೇಕ ಆರೋಗ್ಯ ಲಾಭಗಳು ಇವೆ. ಹಲವಾರು ಪೋಷಕಾಂಶಗಳನ್ನು ಹೊಂದಿರುವುದರಿಂದ ಇದು ಆರೋಗ್ಯಕ್ಕೆ ಉತ್ತಮವಾಗಿದೆ. ವಿಟಮಿನ್ ಸಿ, ವಿಟಮಿನ್ ಎ, ಪೊಟಾಷಿಯಂ, ಮೆಗ್ನೇಶಿಯಂ, ಪೈಬರ್, ಕಾರ್ಬೋ ಹೈಡ್ರೇಟ್ ಹಾಗೂ ಮಿನರಲ್ಸ್ ಯಥೆಷ್ಟವಾಗಿ ಸಿಗುತ್ತವೆ. ಹಲವು ಕಾಯಿಲೆಗಳಿಗೂ ಇವು ಮನೆಮದ್ದಾಗಿ ಉಪಯೋಗವಾಗಿದೆ. ವಿಟಮಿನ್ ಸಿ ಇದರಲ್ಲಿ ಯಥೇಷ್ಟವಾಗಿ ಇರುವುದರಿಂದ ಮೂಳೆಗಳು ಗಟ್ಟಿಯಾಗಲು ಸಹಕಾರಿಯಾಗಿದೆ.
ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ಮಾಡಲು ಹಾಗೂ ರಕ್ತದೊತ್ತಡವನ್ನು ನಿಯಂತ್ರಿಸಲು ಮರಗೆಣಸನ್ನು ನಿತ್ಯ ತಿನ್ನಬಹುದು. ಇದರ ಸಿಪ್ಪೆಯನ್ನು ಸುಲಿದು ಕಟ್ ಮಾಡಿ ಉಪ್ಪು ಹಾಕಿ ಬೇಯಿಸಿ ತಿನ್ನಬಹುದು , ಇದನ್ನು ಪಲ್ಯ, ಮಾಡಿಯೂ ತಿನ್ನಬಹುದು ಹಾಗೂ ಅನೇಕ ಖಾದ್ಯಗಳ ರೂಪದಲ್ಲೂ ತಿನ್ನಬಹುದು. ಆದರೆ ಉಪ್ಪು ಹಾಕಿ ಬೇಯಿಸಿ ತಿನ್ನುವುದರಿಂದ ಹೆಚ್ಚು ಪೋಷಕಾಂಶಗಳು ಸಿಗುತ್ತವೆ