Visit Channel

ಒಂದೇ ಓವರ್‌ನಲ್ಲಿ 50 ರನ್‌ !

ಒಂದು ಓವರ್ 36 ರನ್ ಬಾರಿಸಬಹುದು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅದರೆ ಒಂದೇ ಓವರ್‌ ನಲ್ಲಿ 50 ರನ್‌ ಬಾರಿಸುವುದು ಕಷ್ಟಕರ. ಆದರೆ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಒಬ್ಬರು ಒಂದೇ ಓವರ್‌ ನಲಲ್ಲಿ 50 ರನ್‌ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ.

ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಯಾಮ್ ಹ್ಯಾರಿಸನ್ (Sam Harrison), ಸೊರೆಂಟೊ ಡನ್‌ಕ್ರೇಗ್ ಸೀನಿಯರ್ ಕ್ಲಬ್‌ಗಾಗಿ ಆಡುತ್ತಿದ್ದಾರೆ, ನಾಥನ್ ಬೆನೆಟ್ ಅವರ ಒಂದು ಓವರ್‌ನಲ್ಲಿ 50 ರನ್ ಬಾರಿಸಿದ್ದಾರೆ. ಬೆನೆಟ್ ತನ್ನ ಒಂದು ಓವರ್ ನಲ್ಲಿ 8 ಎಸೆತಗಳನ್ನು ಎಸೆದಿದ್ದಾರೆ ಏಕೆಂದರೆ ಅದರಲ್ಲಿ ಒಟ್ಟು 2 ನೋ ಬಾಲ್‌ಗಳು ಸೇರಿದ್ದವು. ಆಟದ 39 ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಈ ಕರಾಮತ್ತಿನ  ಆಸ್ಟ್ರೇಲಿಯಾ ಆಟಗಾರ ತನ್ನ 39 ನೇ ಒಂದೇ  ಓವರ್‌ನಲ್ಲಿ ಅರ್ಧಶತಕ ಪೂರೈಸಿದ್ದಾರೆ ಮತ್ತು 40 ನೇ ಓವರ್‌ನಲ್ಲಿ ಶತಕ ಗಳಿಸಿದ್ದಾರೆ. ಸ್ಯಾಮ್ 80 ರನ್ ಗಳಿಸಿ ಆಟವಾಡುತ್ತಿದ್ದ ವೇಳೆ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಅವರು ಬಿರುಗಾಳಿಯ ರೀತಿಯಲ್ಲಿ ಬ್ಯಾಟ್ ಬೀಸಿ 22 ರನ್ ಗಳಿಸಿದ್ದಾರೆ. ಸೊರೆಂಟೊ ಡನ್‌ಕ್ರೇಗ್ 40 ಓವರ್‌ಗಳಲ್ಲಿ 276 ರನ್ ಗಳಿಸಿದೆ. ಇದರಲ್ಲಿ ಸ್ಯಾಮ್ ಅವರ ಅದ್ಭುತ ಶತಕ ಕೂಡ ಸೇರಿದೆ.

Latest News

Lal singh chadda
ಮನರಂಜನೆ

“ಲಾಲ್ ಸಿಂಗ್ ಚಡ್ಡಾ” ಚಿತ್ರ ಭಾರತೀಯ ಸೇನೆ ಮತ್ತು ಸಿಖ್ಖರನ್ನು ಅವಮಾನಿಸಿದೆ! : ಕ್ರಿಕೆಟಿಗ ಮಾಂಟಿ ಪನೇಸರ್

ಲಾಲ್ ಸಿಂಗ್ ಚಡ್ಡಾ  ಚಿತ್ರ ನಿಷೇಧಕ್ಕೆ ಮಾಂಟಿ ಪನೇಸರ್ ಕರೆ.  ಕ್ರಿಕೆಟಿಗ ಮಾಂಟಿ ಪನೇಸರ್ ಅವರು ಟ್ವಿಟರ್ನಲ್ಲಿ “ಲಾಲ್ ಸಿಂಗ್ ಚಡ್ಡಾ ಚಿತ್ರ ನಾಚಿಕೆಗೇಡಿನದು.

Medical Test
ಮಾಹಿತಿ

ಮದುವೆಗೂ ಮುನ್ನ ಈ ವೈದ್ಯಕೀಯ ಪರೀಕ್ಷೆಗಳನ್ನು ತಪ್ಪದೇ ಮಾಡಿಸಿಕೊಳ್ಳಿ ; ಅನುವಂಶಿಕ ಕಾಯಿಲೆಗಳನ್ನು ಪತ್ತೆ ಮಾಡಿ

ಕೆಲ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದರಿಂದ ಆನುವಂಶಿಕ ಕಾಯಿಲೆಗಳು ಪತ್ತೆ ಮಾಡಿ, ಅವುಗಳಿಗೆ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳಬಹುದು.

Siddaramaiah
ರಾಜಕೀಯ

ಲೋಕಾಯುಕ್ತವೇ ಇದ್ದಿದ್ದರೆ ಮಜಾವಾದಿ ಸಿದ್ದರಾಮಯ್ಯ ಜೈಲೂಟ ತಿನ್ನುತ್ತಿದ್ದರು : ಬಿಜೆಪಿ

ಲೋಕಾಯುಕ್ತವೇ ಇದ್ದಿದ್ದರೆ ಮಜಾವಾದಿ ಸಿದ್ದರಾಮಯ್ಯ(Siddaramaiah) ಜೈಲೂಟ ತಿನ್ನುತ್ತಿದ್ದರು ಎಂದು ರಾಜ್ಯ ಬಿಜೆಪಿ(State BJP) ವ್ಯಂಗ್ಯವಾಡಿದೆ.

Gaalipata 2
ಮನರಂಜನೆ

ತೆರೆಯ ಮೇಲೆ ಹಾರಿದ ‘ಗಾಳಿಪಟ-2’; ಗಣಿ-ಭಟ್ರು ಕಾಂಬಿನೇಷನ್‍ಗೆ ಶಿಳ್ಳೆ-ಚಪ್ಪಾಳೆ

ಯೋಗರಾಜ್ ಭಟ್ ಮತ್ತು ‘ಗೋಲ್ಡನ್ ಸ್ಟಾರ್’ ಗಣೇಶ್ ಅವರ ಕಾಂಬಿನೇಷನ್ ಹೇಗೆ ಮೂಡಿಬಂದಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕುತೂಹಲದಿಂದ ಚಿತ್ರಮಂದಿರದತ್ತ ಹೆಜ್ಜೆ ಹಾಕಿದ್ದಾರೆ.