ಫೆಬ್ರವರಿ 2ಕ್ಕೆ ಬಿಡುಗಡೆ ಹೊಂದಲಿದೆ ಸ್ಯಾಮ್ ಸಂಗ್ M02

ನವದೆಹಲಿ, ಜ. 28:  ಸ್ಯಾಮ್‌ಸಂಗ್, ಸ್ಮಾರ್ಟ್ ಫೋನ್ ಸಾಮಾನ್ಯರ ಕೈಗೆಟುಕುವ ದರದಲ್ಲಿ ಹೊಸದೊಂದು ಹ್ಯಾಂಡ್ ಸೆಟ್ ನ್ನು ಹೊರ ತರುತ್ತಿದೆ. ಫೆಬ್ರವರಿ 2 ರಂದು 7,000 ರೂ ಮೌಲ್ಯದ ಗ್ಯಾಲಕ್ಸಿ M02 ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ ಸ್ಯಾಮ್ ಸಂಗ್.

ಗ್ಯಾಲಕ್ಸಿ M02 6.5 ಇಂಚಿನ ಇನ್ಫಿನಿಟಿ-ವಿ ಡಿಸ್ಪ್ಲೇ ಮತ್ತು ಹಿಂಭಾಗದಲ್ಲಿ ಡ್ಯುಯಲ್-ಕ್ಯಾಮೆರಾ ಸೆಟಪ್ ಮತ್ತು 5,000 mAh ಬ್ಯಾಟರಿಯನ್ನು ಹೊಂದಿದೆ. ಈ ಫೋನ್ ಗ್ಯಾಲಕ್ಸಿ M02ನ ಹೊಸ ಆವೃತ್ತಿಯಾಗಿದ್ದು, ಇದನ್ನು ನವೆಂಬರ್‌ನಲ್ಲಿ 3 ಜಿಬಿ + 32 ಜಿಬಿ ಮತ್ತು 6 ಜಿಬಿ + 128 ಜಿಬಿ ಮಾಡೆಲ್ ಗಳಲ್ಲಿ ಬಿಡುಗಡೆ ಮಾಡಲಾಗಿದೆ.

ಸ್ಯಾಮ್‌ ಸಂಗ್ ಗ್ಯಾಲಕ್ಸಿ M02 ಕ್ವಾಲ್ಕಾಮ್ ಸ್ನಾಪ್‌ ಡ್ರಾಗನ್ 450 SoC ಯನ್ನು ಹೊಂದಿದ್ದು, 3GB RAM ಮತ್ತು 32GB ಆನ್‌ ಬೋರ್ಡ್ ಸ್ಟೋರೇಜನ್ನು ಹೊಂದಿದೆ. ಅಷ್ಟಲ್ಲದೇ, ಫೋನ್ 13 ಎಂಪಿ ಪ್ರೈಮರಿ ಸೆನ್ಸಾರ್ ಮತ್ತು 5 ಎಂಪಿ ಸೆಲ್ಫಿ ಕ್ಯಾಮೆರಾ ಸೆನ್ಸಾರ್ ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ಹೊಂದಿರುವ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಒಳಗೊಂಡಿದೆ.

ಸ್ಯಾಮ್‌ ಸಂಗ್ 2020 ರಲ್ಲಿ ಭಾರತದಲ್ಲಿ 15 ಮಿಲಿಯನ್ `MO` ಸರಣಿಯ ಸ್ಮಾರ್ಟ್‌ ಫೋನ್‌ ಗಳನ್ನು ಮಾರಾಟ ಮಾಡಿದೆ ಎಂದಿ ಕಂಪೆನಿ ಹೇಳಿಕೊಂಡಿದೆ.

Latest News

ಆರೋಗ್ಯ

ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ

ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.