Bollywood : ಸಮಂತಾ-ಅನುಷ್ಕಾ ಶರ್ಮಾ (Samantha, Anushka Sharma) ಅಭಿಮಾನಿಗಳಿಗೆ ಇದೊಂದು ಸಂತಸದ ಸುದ್ದಿ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಸ್ಯಾಮ್ ಮತ್ತು ಅನುಷ್ಕಾ (Samantha new project with Anushka) ಇದೀಗ ವೆಬ್ ಸರಣಿಯಲ್ಲಿ ಸಹಕರಿಸಲಿದ್ದಾರೆ. ಅನುಷ್ಕಾ ಶರ್ಮಾ ಜೊತೆ ಸಮಂತಾ ಹೊಸ ಯೋಜನೆಯಲ್ಲಿ ಕೆಲಸ ಮಾಡಲಿದ್ದಾರೆ.
ಬ್ಯೂಟಿ ಕ್ವೀನ್ ಅನುಷ್ಕಾ ಶರ್ಮಾ ಬಾಲಿವುಡ್‌ನಲ್ಲಿ (Bollywood) ಫೇಮಸ್ ಆಗಿದ್ದರೆ, ಸಮಂತಾ ಸೌತ್‌ನಲ್ಲಿ ಹಾಟ್ ನಟಿ. ಇಬ್ಬರೂ ಒಟ್ಟಿಗೆ ಕೆಲಸ ಮಾಡಿದರೆ ಹೇಗೆ?
ಇದೀಗ ಈ ಜೋಡಿ ವಿಭಿನ್ನ ಚಿತ್ರಕ್ಕೆ ರೆಡಿಯಾಗಿದೆ. ಮಹಿಳಾ ಕೇಂದ್ರಿತ ವೆಬ್ ಸರಣಿಯಲ್ಲಿ ಅನುಷ್ಕಾಗೆ ಸಮಂತಾ ಬೆಂಬಲ ನೀಡಲಿದ್ದಾರೆ.
ಅನುಷ್ಕಾ ಮತ್ತು ಸ್ಯಾಮ್ ಇಬ್ಬರೂ ಹಲವು ಬಾರಿ ಭೇಟಿಯಾಗಿದ್ದಾರೆ ಮತ್ತು ವೆಬ್ ಸರಣಿಯ (Samantha new project with Anushka) ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಸಮಂತಾ ರುತ್ ಪ್ರಭು ದಕ್ಷಿಣ ಭಾರತದ (South India) ಖ್ಯಾತ ನಟಿ, ತೆಲುಗು ಸಿನಿಮಾ ಇಂಡಸ್ಟ್ರಿಯ ಜನಪ್ರಿಯ ತಾರೆ.
ಮಾಜಿ ಪತಿ ನಾಗಚೈತನ್ಯ ಜೊತೆಗಿನ ಡಿವೋರ್ಸ್‌ನಿಂದ ಬಹಳ ಸುದ್ದಿಯಾದ ಬಳಿಕ ಸಮಂತಾ,
ಬಳಿಕ ಅಲ್ಲೂ ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾದಲ್ಲಿ “ಊ ಅಂಟಾವಾ ಮಾವ” ಅಂತ ಮೈಚಳಿ ಬಿಟ್ಟು ಕುಣಿದು, ಸುದ್ದಿ ಮಾಧ್ಯಮಗಳ ಹಾಟ್ ಫೆವರೇಟ್ ಆಗಿದ್ದಾರೆ ಸ್ಯಾಮ್.
ಇದನ್ನೂ ಓದಿ : http://ಧೋನಿ RCB ಕ್ಯಾಪ್ಟನ್ ಆಗಿದ್ದಿದ್ದರೆ ಮೂರು ಬಾರಿ ಕಪ್ ಗೆಲ್ಲುತ್ತಿತ್ತು: ಪಾಕ್ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್
ಕ್ರಿಕೆಟರ್ ವಿರಾಟ್ ಕೊಹ್ಲಿ (Virat Kohli) ಪತ್ನಿಯಾಗಿರುವ ನಟಿ ಅನುಷ್ಕಾ ಶರ್ಮಾ ಬಾಲಿವುಡ್‌ನಲ್ಲಿ ಜನಪ್ರಿಯ ನಟಿ.
ಹಿಂದಿ ಚಿತ್ರರಂಗದಲ್ಲಿ (Hindi cinema) ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ನಾಯಕಿ. ಸಮಂತಾ ಕೂಡ ಕಥೆಯನ್ನು ಎಂಜಾಯ್ ಮಾಡಿ ಓಕೆ ಅಂದಿದ್ದಾರೆ.
ಅನುಷ್ಕಾ ಮತ್ತು ಸಮಂತಾ ಅವರನ್ನು ಒಳಗೊಂಡ ವೆಬ್ ಸರಣಿಯನ್ನು ಅನುಷ್ಕಾ ಸಹೋದರ ಕರ್ಣೇಶ್ ಶರ್ಮಾ (Karnesh Sharma) ನಿರ್ದೇಶಿಸಲಿದ್ದಾರೆ.
ಕರ್ಣೇಶ್ ಸಾಯಿ ಅವರು ಪಟಾಲ್ ಲೋಕ್, ಬುಲ್ ಬುಲ್, ಪ್ಯಾರಿ ವೆಬ್ ಸರಣಿಗಳನ್ನು ನಿರ್ದೇಶಿಸಿದ್ದಾರೆ.
ದಿ ಫ್ಯಾಮಿಲಿ ಮೆನ್ 2’ (The Family Men 2) ವೆಬ್ ಸರಣಿಯಲ್ಲಿ ಸಮಂತಾ ಈಗಾಗಲೇ ‘ ಮನಗೆದ್ದಿದ್ದಾರೆ. ಸದ್ಯ ಇವರು ಬಾಲಿವುಡ್‌ನ ‘ಸಿಟಾಡೆಲ್’ (Citadel) ಎಂಬ ವೆಬ್ ಸರಣಿಯಲ್ಲಿಒಂದರಲ್ಲಿ ಸ್ಯಾಮ್ ನಟಿಸುತ್ತಿದ್ದಾರೆ.
ಸದ್ಯ ಅನುಷ್ಕಾ- ಸಮಂತಾ ಒಟ್ಟಾಗಿ ನಟಿಸೋ ಪ್ರಾಜೆಕ್ಟ್ ಗೆ ಫ್ಯಾನ್ಸ್ ನಿರೀಕ್ಷೆ ಹೆಚ್ಚಾಗಿದೆ. ಇವರಿಬ್ಬರ ಕಾಂಬಿನೇಷನ್ ವೆಬ್ ಸರಣಿ ನೋಡಲು ಅಭಿಮಾನಿಗಳು ಕಾತರದಿಂದ ಎದುರು ನೋಡ್ತಿದ್ದಾರೆ.