ಸಂಭಾವನೆ ಪಡೆಯದೆ ಕೃಷಿ ಇಲಾಖೆ ರಾಯಭಾರಿಯಾಗಲು ಒಪ್ಪಿಗೆ ನೀಡಿದ ಚಾಲೆಂಜಿಂಗ್ ಸ್ಟಾರ್

ಮೈಸೂರು: ಕೆಲವು ತಿಂಗಳುಗಳ ಹಿಂದಷ್ಟೇ ಅರಣ್ಯ ಇಲಾಖೆ ರಾಯಭಾರಿಯಾಗಿ ವನ್ಯಜೀವಿ ಸಂರಕ್ಷಣೆ ಕುರಿತು ಅರಿವು ‌ಮೂಡಿಸುತ್ತಿರುವ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್, ಇದೀಗ ಕೃಷಿ ಇಲಾಖೆಯ ರಾಯಭಾರಿಯಾಗಿದ್ದಾರೆ.

ಕಾರ್ಯ ನಿಮಿತ್ತ ಮೈಸೂರು ಪ್ರವಾಸ ‌ಕೈಗೊಂಡಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್, ಮೈಸೂರಿನಲ್ಲಿರುವ ದರ್ಶನ್ ಅವರ ಫಾರ್ಮ್ ಹೌಸ್‌ಗೆ ಭೇಟಿ ನೀಡಿದ್ದರು. ‌ಈ ವೇಳೆ ಕೃಷಿ ಇಲಾಖೆ ರಾಯಭಾರಿ ಆಗುವಂತೆ ನಟ ದರ್ಶನ್ ಅವರನ್ನು ಕೃಷಿ ಸಚಿವ ಬಿಸಿ ಪಾಟೀಲ್ ಮನವಿ ಮಾಡಿದರು ಎನ್ನಲಾಗಿದೆ.

ಸಚಿವ ಬಿ.ಸಿ.ಪಾಟೀಲ್ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ನಟ ದರ್ಶನ್ ಯಾವುದೇ ಸಂಭಾವನೆ ಪಡೆಯದೇ, ಕೃಷಿ ಇಲಾಖೆಯ ರಾಯಭಾರಿಯಾಗಲು ಒಪ್ಪಿಕೊಂಡಿದ್ದಾರೆ. ಈ ಮೂಲಕ ನಟ ದರ್ಶನ್‌, ಮತ್ತೊಮ್ಮೆ ಕನ್ನಡಿಗರ ಮನ ಗೆದ್ದಿದ್ದಾರೆ.

ಈ ಕುರಿತಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾಹಿತಿ ನೀಡಿದ್ದು, ಮೈಸೂರಿನ ದರ್ಶನ್ ಫಾರ್ಮ್ ಹೌಸ್ ನಲ್ಲಿ ನಟ ದರ್ಶನ್ ಭೇಟಿ ಯಾಗಿ, ಕೃಷಿ ಇಲಾಖೆಯ ರಾಯಭಾರಿ ಆಗುವಂತೆ ಮನವಿ ಮಾಡಲಾಯಿತು. ಇಂತಹ ಮನವಿಗೆ ಪ್ರತಿಸ್ಪಂದಿಸಿರುವ ನಟ ದರ್ಶನ್, ಯಾವುದೇ ಸಂಭಾವನೇ ಇಲ್ಲದೇ ರಾಯಭಾರಿಯಾಗಲು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.

Latest News

ರಾಜಕೀಯ

“ಕಾಂಗ್ರೆಸ್ ಬಸ್‍ಗೆ ಎರಡು ಸ್ಟೇರಿಂಗ್” : ಸಚಿವ ಡಾ. ಸುಧಾಕರ್

“ಪ್ರಸ್ತುತ ಕಾಂಗ್ರೆಸ್ ಪಕ್ಷ ಈಗ ಡಂಬಲ್ ಡೋರ್ ಬಸ್‍ನಲ್ಲಿ ಪ್ರಯಾಣಿಸುತ್ತಿದೆ. ಈ ಬಸ್‍ನಲ್ಲಿರುವ ಅವರ ಪಕ್ಷದವರ ಪೈಕಿ ಯಾರನ್ನು ಪ್ರಥಮವಾಗಿ ಕೆಳಗಿಳಿಸುತ್ತಾರೋ ತಿಳಿಯದು.

ದೇಶ-ವಿದೇಶ

ಮನೆ ಮತ್ತು ಕಾರ್ಪೊರೇಟ್ ಕಚೇರಿಗಳ ಮೇಲೆ ಶೇ.18 ರಷ್ಟು ಜಿಎಸ್‌ಟಿ ? ; ಏನಿದು ಗೊಂದಲ ಇಲ್ಲಿದೆ ಮಾಹಿತಿ

ಹೊಸ ನಿಯಮಗಳ ಪ್ರಕಾರ, ಜಿಎಸ್‌ಟಿ ನೋಂದಾಯಿತ ಹಿಡುವಳಿದಾರನು ರಿವರ್ಸ್ ಚಾರ್ಜ್ ಮೆಕ್ಯಾನಿಸಂ (RCM) ಅಡಿಯಲ್ಲಿ ತೆರಿಗೆಯನ್ನು ಪಾವತಿಸಲು ಹೊಣೆಗಾರನಾಗಿರುತ್ತಾನೆ.

ಪ್ರಮುಖ ಸುದ್ದಿ

ತಾಜುದ್ದೀನ್ಜುನೈದೀ ಮತ್ತು  ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಗಣ್ಯರ ಸಂತಾಪ

ಪ್ರಖ್ಯಾತ ಗಾಯಕರು, ತಮ್ಮ ಸುಸ್ವರದ ಮೂಲಕ ಕವಿ ಗೀತೆಗಳಿಗೆ ಮೆರುಗು ತಂದುಕೊಟ್ಟಿದ್ದ ಶ್ರೀ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಗಿದೆ.