ಬೆಂಗಳೂರು, ನ. 30: ಸಂಪುಟ ವಿಸ್ತರಣೆಗೆ ಮತ್ತು ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಗೆ ಯಾವುದೇ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಗೆ ಮತ್ತು ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಗೂ ಯಾವುದೇ ಸಂಬಂಧವಿಲ್ಲ, ಗ್ರಾಮ ಪಂಚಾಯ್ತಿ ಚುನಾವಣೆ ಹಿನ್ನಲೆಯಲ್ಲಿ ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಭಿವೃದ್ಧಿ ಕೆಲಸ, ಇತರ ಚಟುವಟಿಕೆ ಮಾಡುವಂತಿಲ್ಲ ಎಂದರು.
ಸಂಘಟನೆ ದೃಷ್ಟಿಯಿಂದ ಪಂಚಾಯ್ತಿ ಚುನಾವಣೆಯೂ ಮುಖ್ಯವಾಗಿದ್ದು, ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಒಳ್ಳೆಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು. ಇದು ಲೋಕಸಭೆ, ವಿಧಾನಸಭೆ ಚುನಾವಣೆಯಷ್ಟೇ ಮಹತ್ವವಾದುದು ಎಂದು ಹೇಳಿದ್ದಾರೆ.

ಮಾಹಿತಿ
ಬೆಂಗಳೂರಿನಲ್ಲಿ ಬಿಬಿಎಂಪಿ ಯಿಂದ ಮಕ್ಕಳಿಗೆ ಉಚಿತ ಟ್ಯೂಷನ್ ಮತ್ತು ಕೌಶಲ್ಯ ತರಬೇತಿ
ಈ ಕೌಶಲ್ಯ ತರಬೇತಿ ಬಡ ಸರಕಾರಿ ಶಾಲೆ ಮಕ್ಕಳಿಗೆ ಮತ್ತು ಕೊಳಗೇರಿ ಯಲ್ಲಿ ವಾಸ ಮಾಡತ್ತಿರುವ ಮಕ್ಕಳಿಗೆ ಉಪಯೋಗವಾಗಲಿದೆ.