ನವದೆಹಲಿ, ನ. 23: ಡಾ ಬಿ ಡಿ ಮಾರ್ಗದಲ್ಲಿ ಸಂಸದರಿಗೆ ನಿರ್ಮಾಣಗೊಂಡಿರುವ ಬಹು ಮಹಡಿಯ ಫ್ಲ್ಯಾಟ್ಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದಾರೆ. ಈ ಫ್ಲ್ಯಾಟ್ಗಳು ನವದೆಹಲಿಯ. 80 ವರ್ಷಗಳಿಗಿಂತ ಹಳೆಯದಾದ ಎಂಟು ಹಳೆಯ ಬಂಗಲೆಗಳನ್ನು 76 ಫ್ಲ್ಯಾಟ್ಗಳನ್ನು ನಿರ್ಮಿಸಲು ಪುನರಾಭಿವೃದ್ಧಿ ಮಾಡಲಾಗಿದೆ.
ಎಂದು ಪ್ರಧಾನಮಂತ್ರಿಗಳ ಕಚೇರಿ ಪ್ರಕಟಣೆಯಲ್ಲಿ ಉಲ್ಲೇಖಿಸಿರುವ ಪ್ರಕಾರ ಈ ಫ್ಲ್ಯಾಟ್ಗಳ ನಿರ್ಮಾಣವು ಮಂಜೂರಾದ ವೆಚ್ಚಕ್ಕಿಂತಲೂ ಶೇಕಡಾ 14 ರಷ್ಟು ಉಳಿತಾಯದೊಂದಿಗೆ ಪೂರ್ಣಗೊಂಡಿದ್ದು, ಕೊರೋನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ಸಮಯ ವ್ಯರ್ಥಗೊಳ್ಳದೆ, ನಿಗದಿತ ಸಮಯದಲ್ಲಿಯೇ ನಿರ್ಮಾಣಗೊಂಡಿದೆ ಎನ್ನಲಾಗಿದೆ.
ನಿರ್ಮಾಣವಾಗಿರುವ ಕಟ್ಟಡಗಳಲ್ಲಿ ಪರಿಸರ ರಕ್ಷಣೆಯ ಹಲವು ಉಪಕ್ರಮಗಳಿಂದ ನಿರ್ಮಾಣ ಮಾಡಲಾಗಿದೆ. ಕಡಿಮೆ ವಿದ್ಯುತ್ ಬಳಕೆಗಾಗಿ ವಿಆರ್’ವಿ ವ್ಯವಸ್ಥೆ, ನೀರಿನ ಕಡಿಮೆ ಬಳಕೆಗಾಗಿ ಹಲವು ವ್ಯವಸ್ಥೆಗಳು, ಮಳ ನೀರು ಕೊಯ್ಲು ವ್ಯವಸ್ಥೆ, ಸೌರ ಸ್ಥಾಪರಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.