Sand attack: Double Game by the Mining Department in Mangalore, Supported by the District Administration itself
Mangalore: ಮಂಗಳೂರಿನಲ್ಲಿ (Mangalore) ಮರಳು ಮಾಫಿಯಾ ದಂಧೆ ಹೆಚ್ಚಾಗಿದ್ದು, ಅಕ್ರಮದ ವಿರುದ್ಧ ದನಿ ಎತ್ತಿದರೆ ಯಾವ ರೀತಿ ಹಲ್ಲೆ ಮಾಡುತ್ತಾರೆ? ಜೀವ ಬೆದರಿಕೆ ಹಾಕುತ್ತಾರೆ ಎನ್ನುವುದಕ್ಕೆ ಇತ್ತೀಚೆಗೆ ಉಳಿಯ ಪಾವೂರಿನಲ್ಲಿ ವಿಜಯಟೈಮ್ಸ್ (Vijayatimes) ತಂಡದವರ ಮೇಲೆ ನಡೆದ ಹಲ್ಲೆಯೇ ಸಾಕ್ಷಿಯಾಗಿದೆ. ಈ ಹಲ್ಲೆ ಯಾಕೆ ನಡೆಯಿತು? ಹಲ್ಲೆ ಮಾಡಿದವರು ಯಾರು? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಧಿಕಾರಿಗಳ ಸಹಾಯದಿಂದಲೇ ಸೀಝಾದ ಇಂಜಿನ್ನನ್ನು ಅಕ್ರಮವಾಗಿ ಸಾಗಿಸುತ್ತಿದ್ದ ದಂಧೆಕೋರರು, ವಿಜಯಟೈಮ್ಸ್ ತಂಡಕ್ಕೆ ಮಾರ್ಗದರ್ಶನ ಮಾಡುತ್ತಿದ್ದ, ಹೋರಾಟಗಾರ ಅಲ್ವಿನ್ ಡಿಸೋಜಾ (Alwin D-Souza) ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ದುರುಳರು ನಡೆಸಿದ ಹಲ್ಲೆಯಿಂದ ಅಲ್ವಿನ್ ಎಂಬುವವರ ಬಲಗೈಗೆ ಗಾಯವಾಗಿದ್ದು, ನಾವು ತಕ್ಷಣ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿದೆವು. ಎಂಎಲ್ಸಿ ಮಾಡಿಸಿದೆವು. ಆಗ ಮಂಗಳೂರು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಫ್ಐಆರ್ (FIR) ದಾಖಲಿಸಿ ಇಬ್ಬರನ್ನು ಬಂಧಿಸಿದರು.
ಖುಷಿಯ ವಿಚಾರ ಏನೆಂದರೆ ನಮ್ಮ ಮೇಲೆ ನಡೆದ ಹಲ್ಲೆಯಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಉಳಿಯ ಪಾವೂರು (Uliya Pavur) ಸುತ್ತ ಮುತ್ತ 2ಕಿ.ಮೀ ಮರಳುಗಾರಿಕೆಯನ್ನು (Sand Mafia) ನಿಷೇಧಿಸಿ ಮಂಗಳೂರಿನ ಸಹಾಯಕ ಆಯುಕ್ತರು ಆದೇಶವನ್ನೂ ಹೊರಡಿಸಿದ್ರು. ಆದರೆ ಈ ಆದೇಶಕ್ಕೆ ಮುನ್ನ ಇಷ್ಟೆಲ್ಲಾ ಗಲಾಟೆ ಆಗೋದಕ್ಕೆ ಒಂದು ಬಲವಾದ ಕಾರಣ ಇದೆ. ಅದೇನು ಗೊತ್ತಾ? ಈ ದಾಳಿ ಆಗುವ ಎರಡು ದಿನದ ಹಿಂದೆಯೇ ವಿಜಯಟೈಮ್ಸ್ ತಂಡ ಈ ಮರಳು ದಂಧೆಕೋರರ ಬೇಟೆಗೆ ಇಳಿದಿತ್ತು.
ಮಾಫಿಯಾ ಮಂದಿಯ ಅಟ್ಟಹಾಸದಿಂದ ನೊಂದ ಉಳಿಯ ಪಾವೂರು ಹಾಗೂ ಉಳಿಯ ಉಲ್ಲಾಳ (Ullal) ಮತ್ತು ಉಲ್ಲಾಳ ಹೊಯಿಗೆ ಮಂದಿ ಪರವಾಗಿ ಹೋರಾಟಕ್ಕೆ ಧುಮುಕಿತ್ತು. ಅವರ ಬದುಕಿನ ಕರಾಳತೆಯನ್ನು ಹೊರ ಜಗತ್ತಿಗೆ ತೋರಿಸುವ ಸಲುವಾಗಿ ನಾವು ಧೈರ್ಯವಾಗಿ ಫೀಲ್ಡಿಗೆ ಇಳಿದಿದ್ದೆವು. ಮರಳು ಮಾಫಿಯಾದ ಈ ಬರ್ಬರತೆಯನ್ನು ಬಿಂಬಿಸಿದ ವಿಜಯಟೈಮ್ಸ್ ತಂಡದ ಮೇಲೆ ಹಲ್ಲೆ ಮಾಡಿದರು ಪ್ರಾಣ ಬೆದರಿಕೆ ಒಡ್ಡಿದರು ನಾವು ಹೆದರಲಿಲ್ಲ, ಬೆದರಿಲಿಲ್ಲ. ನಮ್ಮ ಹೋರಾಟವನ್ನು ಮುಂದುವರೆಸಿದೆವು
Sand Mafia In Mangalore Breaking News
Mangalore: In Mangalore (Mangalore) sand mafia has increased, if you raise your voice against the illegality, how will they attack you? The recent attack on the team of Vijayatimes in Jalan Pavur is a proof that they threaten their lives. Why did this attack take place? Who did the attack? Here is the complete information.
With the help of the authorities, the smugglers who were illegally transporting Seiza’s engine attacked Alwin D-Souza, a fighter who was guiding the Vijaytimes team. Alvin’s right hand was injured due to the attack by these miscreants. We immediately admitted him to Father Mullers Hospital, Mangalore. We did MLC. Then the Mangalore police took the case seriously and registered an FIR and arrested the two.
The happy thing is that the district administration woke up to the attack on us and the Assistant Commissioner of Mangalore also issued an order banning 2 km sand mining (Sand Mafia) around Uliya Pavur. But there is a strong reason why there was so much fuss before this order. Do you know that? Two days before this attack took place, the team of Vijaya Times had hunted these sand smugglers.
Aggrieved by the mafioso’s audacity, Jalana Pavur and Jalana Ullal and Ullal’s Hoigue jumped into the fight. We bravely went down to the field to show the darkness of their lives to the outside world. We were not afraid, we were not intimidated and attacked the team of Vijayatimes who depicted the brutality of the sand mafia. We continued our struggle