ಸ್ಯಾಂಡಲ್ ವುಡ್ ನಲ್ಲಿ ಧೂಳೆಬ್ಬಿಸಲಿದೆ ತ್ರಿವಿಕ್ರಮ

ತ್ರಿವಿಕ್ರಮ….ಸ್ಯಾಂಡಲ್ ವುಡ್ ನ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ.. ಟೀಸರ್ ಮೂಲಕ ಹವಾ ಸೃಷ್ಟಿಸಿರೋ ತ್ರಿವಿಕ್ರಮ . ಇದೇ ವರ್ಷ ತೆರೆ ಮೇಲೆ ಲಗ್ಗೆ ಇಡಲಿದೆಯಂತೆ ..ವಿಕ್ರಮ್ ಸ್ಯಾಂಡಲ್ ವುಡ್ ಗೆ ಹೊಸ ನಾಯಕ.. ಕ್ರೇಜಿ ಸ್ಟಾರ್ ರವಿಚಂದ್ರ ಅವರ ಪುತ್ರ. ಇದೇ ಮೊದಲ ಬಾರಿಗೆ ಸಾಕಷ್ಟು ಕನಸುಗಳನ್ನು ಹೊತ್ತು ತ್ರಿವಿಕ್ರಮನಾಗಿ ಬೆಳ್ಳಿತೆರೆಯಲ್ಲಿ ರಾರಾಜಿಸಲಿದ್ದಾರೆ ..

ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾ ಅಂದ್ರೆ ಅದರ ಗತ್ತೆ ಬೇರೆ ಗಮ್ಮತ್ತೆ ಬೇರೆ . ತಾವು ನಟಿಸಿದ ಸಾಕಷ್ಟು ಸಿನಿಮಾಗಳು ಸೂಪರ್ ಹಿಟ್ .. ಜೊತೆಗೆ ಅನೇಕ ಹೆಂಗಳೆಯರ ಮನ ಕದ್ದ ಚೋರನಾಗಿ ಕಾಣಿಸಿಕೊಂಡವರು ಇದೇ ರವಿಚಂದ್ರನ್ . ಇದೀಗ ಅವರ ಮಕ್ಕಳು ಸಿನಿ ರಂಗದಲ್ಲಿ ಮೋಡಿ ಮಾಡಲು ರೆಡಿಯಾಗಿದ್ದಾರೆ ..

ತ್ರಿವಿಕ್ರಮ ಚಿತ್ರದ ಹಾಡೊಂದು ರಿಲೀಸ್ ಆಗಿದ್ದು;ಪ್ರತಿಯೊಬ್ಬರ ಬಾಯಲ್ಲು ಈ ಹಾಡು ಗುನುಗುಡುತ್ತಿದೆ. ಮಮ್ಮಿ ಪ್ಲೀಸ್ ಮಮ್ಮಿ ಹಾಡು ಎ೨ ಮ್ಯೂಸಿಕ್ ಮೂಲಕ ರಿಲೀಸ್ ಆಗಿದ್ದೆ ತಡ ೭ ಲಕ್ಷಕ್ಕೂ ಹೆಚ್ಚಿನ ವ್ಯೂವನ್ನು ಪಡೆದಿದೆ..ಅಂದಹಾಗೆ ಈ ಹಾಡಿನ ಮೈನ್ ಹೈಲೆಟ್ ಅಂದ್ರೆ ಮಗ ತನ್ನ ಪ್ರೀತಿಯ ಬಗ್ಗೆ ತಾಯಿಯ ಬಳಿ ವಿನೂತನ ಶೈಲಿಯಲ್ಲಿ ಹೇಳಿಕೊಳ್ಳೋ ರೀತಿ. ಇದು ಸಖತ್ ಆಗೆ ವರ್ಕೌಟ್ ಆಗಿದೆ . ಇನ್ನು ಈ ಹಾಡಿಗೆ ವಿಜಯ ಪ್ರಕಾಶ್ ಕಂಠನೀಡಿದ್ದು ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಹಸ್ತ ನೀಡಿದ್ದಾರೆ..

ತ್ರಿವಿಕ್ರಮ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು ಚಿತ್ರದ ಚಿತ್ರೀಕರಣ ಈಗಾಗಲೇ ಬಹುತೇಕ ಮುಗಿದಿದೆ ಇನ್ನುಳಿದಂತೆ ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ .. ಗೌರಿ ಎಂಟರ್ ಟೈನರ್ ಲಾಂಛನದಲ್ಲಿ ಸಿನಿಮಾ ನಿರ್ಮಾಣಗೊ,ಡಿದ್ದು ಸೋಮಣ್ಣ ರ್ಯಾಮ್ಕೋ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ ..ಇನ್ನು ಚಿತ್ರದಲ್ಲಿ ವಿಕ್ರಮಗೆ ನಾಯಕಿಯಾಗಿ ಆಕಾಂಕ್ಷ ಶರ್ಮ ಕಾಣಿಸಿಕೊಂಡಿದ್ದು . ಇವರ ಕೆಮಸ್ಟ್ರಿ ಸೂಪರ್ ಆಗೆ ಮೂಡಿ ಬಂದಿದೆ. ಇನ್ನುಳಿದಂತೆ ಚಿತ್ರದಲ್ಲಿ ತುಳಸಿ, ಶಿವಮಣಿ, ಸುಚೇಂದ್ರ ಪ್ರಸಾದ್ , ಸಾಧುಕೋಕಿಲ, ಚಿಕ್ಕಣ್ಣ, ಆದಿಲೋಕೇಶ್ ಸೇರಿದಂತೆ ತ್ರಿವಿಕ್ರಮ ಸಿನಿಮಾಕ್ಕೆ ಸಹನಾ ಮೂರ್ತಿ ಆಕ್ಷನ್ ಕಟ್ ಹೇಳಿದ್ದು ಚಿತ್ರದ ಕಥೆ ಹಾಗೂ ಸಂಭಾಷಣೆಯನ್ನು ಇವರೇ ಬರೆದಿದ್ದಾರೆ , ಸಂತೋಷ್ ರೈ ಪಾತಾಜೆ , ಗುರು ಪ್ರಶಾಂತ್ ರೈ ಛಾಯಾಗ್ರಹಣ ಕಣ್ಣುಕುಕ್ಕುವಂತಿದ್ದು ಚಿತ್ರಕ್ಕೆ ಕೆ ಎಂ ಪ್ರಕಾಶ್ ಸಂಕಲನವಿದೆ ..

  • ದೀಪಿಕಾ ವಿಜಯ ಟೈಮ್ಸ್ .. ಬೆಂಗಳೂರು

Latest News

ರಾಜಕೀಯ

ನಿತೀಶ್‌ ಕುಮಾರ್‌ ಪ್ರಧಾನಿಯಾಗುವ ಭ್ರಮೆಯಲ್ಲಿದ್ದಾರೆ, ಅದಕ್ಕಾಗಿ ವಿಪಕ್ಷಗಳ ಕೂಟ ಸೇರಿದ್ದಾರೆ : ಬಿಜೆಪಿ

ಇದು ‘ಆಯಾ ರಾಮ್, ಗಯಾ ರಾಮ್ʼ ಕಾಯಿಲೆಗೆ ಉದಾಹರಣೆ. ಹಡಗು ಜಿಗಿದು ದಾಖಲೆ ನಿರ್ಮಿಸಿದ್ದಾರೆ. ಅವರು ಉನ್ನತ ಕುರ್ಚಿಗೆ ಹಾತೊರೆಯುತ್ತಿದ್ದಾರೆ.

ದೇಶ-ವಿದೇಶ

“ನಮ್ಮ ಮೆಸ್ ಊಟವನ್ನು ಪ್ರಾಣಿಗಳೂ ಸಹ ತಿನ್ನಲು ಸಾಧ್ಯವಿಲ್ಲ”; ಕಣ್ಣೀರಿಟ್ಟ ಪೇದೆ, ವೀಡಿಯೋ ವೈರಲ್

ಅಷ್ಟೇ ಅಲ್ಲದೇ ನನ್ನನ್ನು ಕೆಲಸದಿಂದ ವಜಾಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ದಾರಿಹೋಕರ ಬಳಿ ಮನೋಜ್ ಕುಮಾರ್ ಅಳಲು ತೋಡಿಕೊಂಡಿದ್ದಾರೆ.

ದೇಶ-ವಿದೇಶ

ರೇಷನ್ ಕಾರ್ಡ್ ಹೊಂದಿರುವ ಬಡವರಿಗೆ ರಾಷ್ಟ್ರಧ್ವಜ ಖರೀದಿಸುವಂತೆ ಒತ್ತಾಯಿಸುತ್ತಿದ್ದಾರೆ : ರಾಹುಲ್ ಗಾಂಧಿ

ಇದು ಬಿಜೆಪಿ ಸರ್ಕಾರದ ಪ್ರಚಾರ ಪಿತೂರಿ. ಈ ರೀತಿ ಮಾಡುವ ಮೂಲಕ ಬಿಜೆಪಿಯು “ರಾಷ್ಟ್ರೀಯತೆ”ಯನ್ನು ಮಾರಾಟ ಮಾಡುತ್ತಿದೆ ಮತ್ತು ಬಡವರ ಆತ್ಮಗೌರವಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾರೆ.

ರಾಜಕೀಯ

`ಬ್ಲ್ಯಾಕ್‌ ಮೇಲ್‌ ಕುಮಾರಸ್ವಾಮಿʼ ; ಕಣ್ಣೀರ ಕೋಡಿಯಿಂದ ಕುಟುಂಬಕ್ಕೆ ಲಾಭವೇ ಹೊರತು ಜನತೆಗೇನು ಲಾಭ? : ಅಶ್ವಥ್ ನಾರಾಯಣ್‌

ನೀವು ಈವರೆಗೆ ಹೇಳಿದ ಸುಳ್ಳುಗಳನ್ನು ಎಣಿಸಲು ಸಾಧ್ಯವೇ? ಎಂದು ಸಚಿವ(Minister) ಅಶ್ವಥ್‌ ನಾರಾಯಣ್(Ashwath Narayan) ಪ್ರಶ್ನಿಸಿದ್ದಾರೆ.