ಸಿನಿಮಾಗೆ ಯಾವುದೇ ರೀತಿಯ ಸೀಸನ್ ಇಲ್ಲ ಬದಲಾಗಿ ಒಳ್ಳೆ ಕಥೆ ಇದ್ದರೆ ಸಾಕು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ವೀಕ್ಷಿಸುತ್ತಾರೆ. ಸಿನಿಮಾ ಎಂಬುದು ಒಂದು ವರ್ಗಕ್ಕಲ್ಲ ಎಲ್ಲಾ ವರ್ಗಕ್ಕೂ ಸೀಮಿತವಾಗಿದ್ದು, ಕೆಲವರು ಹಾಸ್ಯಸ್ಪದ ಚಿತ್ರ ಇಷ್ಟಪಟ್ಟರೆ ಇನ್ನೂ ಕೆಲವರು ರೋಮ್ಯಾಂಟಿಕ್ ಮೂವಿ (Romantic Movie)ಯನ್ನು ಪ್ರೀತಿಸುತ್ತಾರೆ. ಮತ್ತೋರ್ವರು ಹಾರರ್, ಆಕ್ಷನ್ ಥ್ರಿಲ್ಲರ್ ಫ್ಯಾಮಿಲಿ ಎಂಟರ್ಟೈನ್ಮೆಂಟ್ (Horror, Action Thriller Family Entertainment)ನತ್ತ ಮುಖ ಮಾಡುತ್ತಾರೆ ಹಾಗೆ ರಿ-ರಿಲೀಸ್ ಚಿತ್ರಗಳ ಹಾವಳಿ ಹೇಗಿದೆ ಎಂಬುವ ಮಾಹಿತಿ ಈ ಕೆಳಕಂಡಂತಿದೆ.
ಆಗಿನ ಕಾಲದಲ್ಲಿ ‘ಓಂ’ (OM) ಚಿತ್ರ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು. ಸೆಂಚುರಿ ಸ್ಟಾರ್, ಕರ್ನಾಟಕ ಚಕ್ರವರ್ತಿ ‘ಶಿವಣ್ಣ’ (Shivanna) ಅವರು ಈ ಚಿತ್ರದಲ್ಲಿ ಅಭಿನಯಿಸಿದ್ದು, ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶಿಸಿದ್ದಾರೆ. ಆದರೆ ಅಭಿಮಾನಿಗಳಿಗೆ ಇದು ಡಬಲ್ ಧಮಾಕ. ಚಿತ್ರ ತೆರೆ ಕಾಣುತ್ತಿದ್ದಂತೆ ಅಭಿಮಾನಿಗಳು ಚಲನಚಿತ್ರವನ್ನು ವೀಕ್ಷಿಸಿ ಬಹುಪರಾಕ್ ಎಂದಿದ್ದರು. ಈಗಲೂ ‘ಓಂ’ ಚಿತ್ರ ರೀರಿಲೀಸ್ ಆದರೆ ಥಿಯೇಟರ್ ಹೌಸ್ಫುಲ್ (Theatre Houseful) ಆಗುವುದರಲ್ಲಿ ಎರಡು ಮಾತಿಲ್ಲ.
ಸಿನಿಮಾ ಚೆನ್ನಾಗಿ ಇದ್ದಾರೆ ಸಾಕು ಸಿನಿ ರಸಿಕರು ಜೈಕಾರ ಹಾಕುವುದರಲ್ಲಿ ಯಾವುದೇ ಸಂಶಯ ಬೇಡ, ಸಿನಿಮಾ ಎನ್ನುವುದೇ ಹಾಗೆ ಒಂದು ತರಹದ ಮಾಯಾ ಜಗತ್ತು. ಪ್ರೇಕ್ಷಕ ಮಹೋದಯನ ಭಾವನೆಯನ್ನು ನಿರ್ದೇಶಕರು ಕಥೆ ರೂಪದಲ್ಲಿ ಪರದೆ ಮೇಲೆ ತಂದಿಡುತ್ತಾರೆ. ಈಗಲೂ ಕೆಲವರು ತಮ್ಮ ನೆಚ್ಚಿನ ನಟನ ಹಳೆಯ ಸಿನಿಮಾವನ್ನು ಟಿವಿಯಲ್ಲಿ ನೋಡಿ ಆನಂದಿಸುತ್ತಾರೆ ಅಂತದರಲ್ಲಿ ಅಚ್ಚು ಮೆಚ್ಚಿನ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡಿದರೆ ಥಿಯೇಟರ್ ನಲ್ಲಿ ಸಿನಿಮಾವನ್ನು ವೀಕ್ಷಿಸಿ ಶಿಳ್ಳೆ ,ಚಪ್ಪಾಳೆ ತಟ್ಟಿ ತಾವು ಈಗಾಗಲೇ ನೋಡಿರುವ ಚಿತ್ರಕ್ಕೆ ಹೊಸ ರೀತಿಯ ಮೆರುಗು ನೀಡಿ ಖುಷಿಪಡುತ್ತಾರೆ .
ಇತ್ತೀಚಿಗಷ್ಟೇ ಕೆಲವು ಕನ್ನಡದ ಹಳೆಯ ಚಿತ್ರಗಳು ಮರು ಬಿಡುಗಡೆಯಾಗಿವೆ , ಅದರಲ್ಲಿ ಸ್ಯಾಂಡಲ್ವುಡ್ನ (Sandalwood) ‘ಬುದ್ಧಿವಂತ’ ನೆಂದೇ ಹೆಸರುವಾಸಿಯಾಗಿರುವ ರಿಯಲ್ ಸ್ಟಾರ್ ಉಪೇಂದ್ರರವರ 1998ರ ಸೂಪರ್ ಹಿಟ್ ಕನ್ನಡದ ಚಲನಚಿತ್ರ ಉಪೇಂದ್ರ ಅವರು ನಾಯಕನಾಗಿ ಅಭಿನಯಿಸಿರುವ ಚೊಚ್ಚಲ ಸಿನಿಮಾ ‘A’ ಚಿತ್ರ ಮೇ 17 ರಂದು ಥಿಯೇಟರ್ನಲ್ಲಿ ಮರು ಬಿಡುಗಡೆಯಾಗಿದ್ದಲ್ಲದೆ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಸುವಂತೆ ಮಾಡಿತ್ತು , ಎಲ್ಲರು ಮೂವಿಯನ್ನು ವೀಕ್ಷಿಸಿ ಉಪೇಂದ್ರ (Upendra) ಅವರ ನಟನೆ ಮತ್ತು ಅವರು ನಿರ್ದೇಶಿಸಿರುವ ರೀತಿಗೆ ಫ್ಯಾನ್ಸ್ ಭೇಷ್ ಎಂದಿದ್ದರು.
ಹಾಗೆ ಪುನೀತ್ ರಾಜಕುಮಾರ (Punith Rajkumar) ಅಭಿನಯಿಸಿರುವ ‘ಪವರ್’ ಚಿತ್ರ ಮೇ 10 ರಂದು ರಿ-ರಿಲೀಸ್ ಆಗಿ ಅದ್ದೂರಿ ಪ್ರದರ್ಶನ ಕಂಡಿತ್ತು ಅದೆರೀತಿಯಲ್ಲಿ ಮುದ್ದು ನಗುವಿನ ಅಪ್ಪು ಅವರನ್ನು ನೆನೆದು ಭಾವುಕರಾಗಿ ಅಪ್ಪು ಅವರ ಹಾಡಿಗೆ ಕೆಲ ಅಭಿಮಾನಿಗಳು ಹೆಜ್ಜೆ ಹಾಕಿದ್ದರು. ಇನ್ನು ಕೆಲ ಚಿತ್ರಗಳು ಮರು ಬಿಡುಗಡೆಯಾದರೆ ಅಭಿಮಾನಿಗಳು ಮತ್ತೆ ಚಿತ್ರಮಂದಿರಕ್ಕೆ (Theatre) ಹೋಗುವುದರಲ್ಲಿ ಯಾವುದೇ ಅನುಮಾನ ಬೇಡ. ಏನೇ ಹೇಳಿ ಹಳೆ ಚಿತ್ರಗಳ ಮರು ಬಿಡುಗಡೆಯ ಗಮ್ಮತ್ತು ಫ್ಯಾನ್ಸ್ ಗೆ ಖುಷಿ ಕೊಟ್ಟಿತ್ತು. ಮುಂದಿನ ದಿನಗಳಲ್ಲಿ ಯಾವ ಯಾವ ಚಿತ್ರಗಳು ರಿ-ರಿಲೀಸ್ ಆಗಿ ಸಿನಿಪ್ರೇಕ್ಷಕರ ಮನಕ್ಕೆ ಮುದನೀಡುತ್ತವೆಯೋ ಕಾದು ನೋಡಬೇಕಾಗಿದೆ?
ವೈಷ್ಣವಿ ರೆಡ್ಡಿ