Sandur By-Election: Sriramulu-Janardhana Reddy Reunited
Bellary: ಕಳೆದ ಕೆಲ ದಿನಗಳಿಂದ ಸಂಡೂರು ಉಪಚುನಾವಣೆ (Sandur By-Election) ಅಖಾಡ ರಂಗೇರಿದ್ದು, ಬಿಜೆಪಿ ಅಭ್ಯರ್ಥಿ ಬಂಗಾರು ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಇದುವರೆಗೂ ಪ್ರಚಾರದಿಂದ ದೂರವೇ ಉಳಿದಿದ್ದ ಮಾಜಿ ಸಚಿವ ಶ್ರೀರಾಮುಲು ಕೊನೆಗೂ ಸಂಡೂರು ಉಪಚುನಾವಣೆ ಪ್ರಚಾರಕ್ಕೆ ಎಂಟ್ರಿ ಕೊಟ್ಟಿದ್ದು, ಜನಾರ್ದನ ರೆಡ್ಡಿ (Janardhan Reddy) ಜೊತೆ ಜಂಟಿ ಪ್ರಚಾರ ಆರಂಭಿಸಿದ್ದಾರೆ. ಇಬ್ಬರು ನಾಯಕರು ಸೇರಿ ಮಾಡುತ್ತಿರುವ ಜಂಟಿ ಪ್ರಚಾರ ಹಲವರ ಹುಬ್ಬೇರುವಂತೆ ಮಾಡಿದೆ.
ಇನ್ನು 2023ರ ಚುನಾವಣೆ ವೇಳೆ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಆಂತರಿಕ ಭಿನ್ನಾಭಿಪ್ರಾಯದಿಂದ ದೂರವಾಗಿದ್ದರು. ಬಳಿಕ ರೆಡ್ಡಿಯವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (KRPP) ಸ್ಥಾಪನೆ ಮಾಡಿದರು. ಬಳಿಕ ಪಕ್ಷವನ್ನು ಬಿಜೆಪಿ ಜೊತೆಗೆ ವಿಲೀನ ಮಾಡಿದರು. ಈ ನಡುವೆ 14 ವರ್ಷಗಳ ನಂತರ ರೆಡ್ಡಿಯವರು ಬಳ್ಳಾರಿಗೆ ಮರಳಲು ಸುಪ್ರೀಂಕೋರ್ಟ್ ಅನುಮತಿ ನೀಡಿದ್ದು, ಇದೀಗ ರೆಡ್ಡಿಯವರು ಜಿಲ್ಲೆಗೆ ಮರಳಿದ್ದಾರೆ. ಈ ಮೂಲಕ ಜಿಲ್ಲಾ ಬಿಜೆಪಿ (BJP) ಘಟಕಕ್ಕೆ ಬಹುದೊಡ್ಡ ಶಕ್ತಿ ದೊರಕಿದಂತಾಗಿದೆ. ದೂರವಾಗಿದ್ದ ದೋಸ್ತಿಗಳು ಇಬ್ಬರೂ ಜೊತೆ ಅಗುವಂತೆ ಆಗಿದೆ.
ಪ್ರಚಾರದ ವೇಳೆ ಮಾತನಾಡಿದ ಜನಾರ್ಧನ ರೆಡ್ಡಿ ನಾನು ಮತ್ತು ಶ್ರೀರಾಮುಲು (Shri Ramulu) ಉತ್ತಮ ಗೆಳೆಯರು. ನಾಮಪತ್ರ ಸಲ್ಲಿಸಿದ ನಂತರ ಪ್ರಚಾರಕ್ಕೆ ಬರುವುದಾಗಿ ಕೆಲ ದಿನಗಳ ಹಿಂದೆ ಹೇಳಿದ್ದರು. ಇದರಂತೆ ನಾವಿಬ್ಬರೂ ಕಳೆದ ಎರಡು ದಿನಗಳಿಂದ ಸಂಡೂರು ತಾಲೂಕಿನ ಗ್ರಾಮಗಳಿಗೆ ಚುನಾವಣಾ ಪ್ರಚಾರಕ್ಕೆ ಭೇಟಿ ನೀಡುತ್ತಿದ್ದೇವೆ. ಉಪಚುನಾವಣೆಯಲ್ಲಿ ಗೆದ್ದು ಇತಿಹಾಸ ಸೃಷ್ಟಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ. ಈ ಕುರಿತಾಗಿ ಶ್ರೀರಾಮುಲು ಮಾತನಾಡಿ, ಉಪಚುನಾವಣೆ ಗೆಲ್ಲುವ ಸಮಯ ಬಂದಿದೆ. ಸ್ನೇಹಿತ ರೆಡ್ಡಿ ಜೊತೆಗೆ ಪ್ರತಿದಿನ ಪ್ರಚಾರದಲ್ಲಿ ಭಾಗವಹಿಸುತ್ತೇನೆ. ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುವಂತೆ ಮಾಡುತ್ತೇವೆಂದು ತಿಳಿಸಿದ್ದಾರೆ.
Sandur By-Election Live Updates In Vijayatimes Kannada
Bellary: Sandur By-Election has been going on for the past few days and BJP candidate Bangaru has started campaigning vigorously. Former minister Sriramulu, who had stayed away from the campaign until now, has finally entered the campaign for the Sandur by-election and has started a joint campaign with Janardhan Reddy. The joint campaign of the two leaders has made many people nervous.
During the 2023 elections, Sriramulu and Janardhana Reddy were away from internal differences. Later, Reddy founded the Kalyana Rajya Pragati Party (KRPP). Later he merged the party with BJP. Meanwhile, the Supreme Court allowed Reddy to return to Bellary after 14 years Now Reddy has returned to the district. By this, the district BJP (BJP) unit has got a lot of power. The friends who were far away have become friends with both of them.
Janardhana Reddy who spoke during the campaign said that Shri Ramulu and I are good friends. He had said a few days ago that he would campaign after submitting his nomination papers. Like this, both of us have been visiting the villages of Sandur taluk for election campaign for the last two days. He said that our aim is to create history by winning the by-elections. Speaking about this, Sriramulu said that the time has come to win the by-election. Along with my friend Reddy, I participate in the campaign every day. He said that he will make BJP win in the by-elections.