Bengaluru : ರಾಜ್ಯದಲ್ಲಿ ಭಾರೀ ಸುದ್ದಿ ಮಾಡುತ್ತಿರುವ ರಾಜಕೀಯ ದಲ್ಲಾಳಿ ಸ್ಯಾಂಟ್ರೋ ರವಿಯ (Santro Ravi investigation) ರಹಸ್ಯಲೀಲೆಗಳು ಬಗೆದಷ್ಟು ಮುಗಿಯುತ್ತಲೆ ಇಲ್ಲ.
ತನಿಖೆಗಿಳಿದಷ್ಟು ಕರಾಳ ಮುಖವಾಡ ಬಯಲಾಗುತ್ತಲೇ ಇವೆ. ಈತನ ರಾಸಲೀಲೆಯ ಬಣ್ಣಗಳು ಬಯಲಾಗುತ್ತಿದ್ದಂತೆ ದೊಡ್ಡ ದೊಡ್ಡ ರಾಜಕಾರಣಿಗಳ,

ಅಧಿಕಾರಿಗಳ ಎದೆಯಲ್ಲಿ ನಡುಕ ಪ್ರಾರಂಭ ಆಗಿದೆ. ಅಷ್ಟೇ ಅಲ್ಲ ಇವನ ಕುರಿತ ತನಿಖೆ ಚುರುಕಾಗುತ್ತಿದ್ದಂತೆ ಈತನ ರಂಗಿನಾಟ ಪುಟದಲ್ಲಿ ನಾನಾ ಮಾಡೆಲ್‌ಗಳ ಹೆಸರುಗಳು ಕಾಣಿಸಿಕೊಳ್ಳುತ್ತಿವೆ.
ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಸರ್ವಿಸ್ ಹಿಂದೆ ಅಡಗಿದೆ ದೊಡ್ಡ (Santro Ravi investigation) ದೊಡ್ಡ ಸೀಕ್ರೆಟ್.
ಕುಮಾರಕೃಪಾದ ಬಳಿ ಧೀರನಂತೆ ಓಡಾಡ್ತಿದ್ದವನ ದಗ್ಬಾಲಜಿತನ ಒಂದೊಂದಾಗಿ ಹೊರ ಬೀಳ್ತಿದ್ದು ಅದು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ. ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡವನ ಕಥೆಯೇ ರಣ ರೋಚಕವಾಗಿದೆ. ಸ್ಯಾಂಟ್ರೋ ರವಿಯ ಪತ್ನಿ ದೂರು ನೀಡಿದ್ದೆ ತಡ, ಇವನ ಮತಿಗೇಡಿ ಕೆಲಸ ಒಂದೇ ಸಮ ಬಯಲಾಗುತ್ತಾ ಹೋಗುತ್ತಿದೆ.
ಇದನ್ನೂ ಓದಿ : https://vijayatimes.com/ajiths-film-overtook-warisu/
ಈತ ಮಾಡಿದ ಮೋಸ ಒಂದಾ ಎರಡಾ? ಪೊಲೀಸ್ ತನಿಖಾ ವರದಿಯಿಂದ (Police investigation report) ಒಂದಷ್ಟು ಸತ್ಯಗಳು ಹೊರಬೀಳುತ್ತಿದ್ದರೆ, ಮತ್ತೊಂದು ಕಡೆ ಈತನಿಗೆ ಮನೆ ಕೊಟ್ಟ ಮಾಲೀಕನಿಂದ ದೊಡ್ಡ ದೊಡ್ಡ ಬಾಂಬ್ಗ ಳೇ ಸಿಡಿಯುತ್ತಿದೆ.
ಸ್ಯಾಂಟ್ರೋ ರವಿ ಅಪಾರ್ಟ್ಮೆಂಟ್ ಒಂದರಲ್ಲಿ ಬಾಡಿಗೆ ಇದ್ದ ಆ ಮನೆಗೆ ನಟಿಯರು, ಮಾಡೆಲ್, ಸರ್ಕಾರಿ ಅಧಿಕಾರಿಗಳು ಬರುತ್ತಿದ್ದ ಎಂದು ಮನೆ ಮಾಲೀಕ ಆರೋಪ ಮಾಡಿದ್ದಾರೆ.
ಅಷ್ಟೆ ಅಲ್ಲದೆ ಸ್ಯಾಂಟ್ರೋ ರವಿ ಆರ್.ಆರ್ ನಗರ ಪೊಲೀಸರ ಎದುರೇ ” ನಾನು ಬಿಜೆಪಿ(BJP) ಕಾರ್ಯಕರ್ತ, ಸರಿ ಸುಮಾರು 3-4 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಸೇವೆ ಮಾಡುತ್ತಿದ್ದೇನೆ ” ಎಂದು ಹೇಳಿಕೊಂಡಿದ್ದನಂತೆ.
ರವಿ ಏನೆಲ್ಲಾ ಹೇಳಿದ್ದಾನೋ ಅವೆಲ್ಲವನ್ನೂ ಪೊಲೀಸರು ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ತನಿಖಾ ವರದಿ ತಿಳಿಸಿದೆ.

ಇದು ಒಂದು ಕಡೆ ಆದರೆ, ಇದೇ ರವಿ ವಿರುದ್ಧ ಆರ್.ಆರ್ ನಗರ ನಿವಾಸಿ ಜಗದೀಶ್ ಎಂಬಾತ 2022ರಲ್ಲಿ ದೂರು ನೀಡಿದ್ದು, ಈ ದೂರಿನ ಅಂಶಗಳು ಈಗ ದಂಗು ಬಡಿಸುವಂತ್ತಿವೆ.
2000ರಿಂದ 2005ರವರೆಗೆ ಮಂಡ್ಯ, ಮೈಸೂರಿನಲ್ಲಿ ವೃತ್ತಿ ಆರಂಭಿಸಿದ್ದ ಸ್ಯಾಂಟ್ರೋ ರವಿ, ಗಣ್ಯ ವ್ಯಕ್ತಿಗಳಿಗೆ ಹುಡುಗಿಯರನ್ನ ಕಳುಹಿಸುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಈತನ ಅನೈತಿಕ ಚಟುವಟಿಕೆಗಳಿಂದ ಮುಖಂಡರ ಗೌರವಕ್ಕೆ ಧಕ್ಕೆ ತಂದಿದ್ದಲ್ಲದೇ, ಅಕ್ರಮ ದಂಧೆಗಳಿಂದ ಕೋಟ್ಯಂತರ ರೂ. ಆಸ್ತಿ ಮಾಡಿದ್ದಾನೆ ಎಂದು ರವಿ ವಿರುದ್ಧ ಜಗದೀಶ್ ದೂರಿದ್ದಾರೆ.
ಇಷ್ಟೇ ಅಲ್ಲ ತನ್ನ ಪತ್ನಿ ವಕೀಲೆ ಎಂದು ಹೇಳಿಕಂಡು ಹಲವರಿಗೆ ವಂಚಿಸಿದ್ದಾನೆ. ಶೋಕಿಗಾಗಿ ಮೂರ್ನಾಲ್ಕು ಕಾರುಗಳನ್ನ ಇಟ್ಟುಕೊಂಡಿದ್ದಾನೆ ಎಂದು ಆರೋಪ ಮಾಡಿದ್ದಾರೆ.
ಇದನ್ನೂ ಓದಿ : https://vijayatimes.com/santro-ravi-bjp-worker/
ಈ ಹೆಣ್ಣುಬಾಕ ರವಿಯ ಕಥೆಗಳು ಇಷ್ಟಕ್ಕೆ ನಿಂತಿಲ್ಲ ಬದಲಾಗಿ, ಪೊಲೀಸರ ವರ್ಗಾವಣೆಯಲ್ಲಿ ಭಾಗಿಯಾಗಿರೋದಕ್ಕೆ ಸಾಕಷ್ಟು ಸಾಕ್ಷಿ ಸಿಕ್ಕಿವೆಯಂತೆ.
ಇದಕ್ಕೆಲ್ಲ ಸಾಕ್ಷಿಯಾಗಿ ಆಡಿಯೋಗಳು ಇರುವುದ್ದಲ್ಲದೆ ಈತನೇ ಖುದ್ದಾಗಿ R.R. ನಗರದಲ್ಲಿ ಈ ಬಗ್ಗೆ ಬಾಯ್ಬಿಟ್ಟಿದ್ದಾನಂತೆ. ಸ್ಯಾಂಟ್ರೋ ರವಿ ನಾಪತ್ತೆಯಾಗಿ ಇವತ್ತಿಗೆ 9 ದಿನಗಳೇ ಕಳೆದಿವೆ.
ಆದರು ಸಹ ರವಿ ಎಲ್ಲಿದ್ದಾನೆ ಎಂಬುದು ಪೊಲೀಸ್ ಅಧಿಕಾರಿಗಳಿಗೆ ಇನ್ನೂ ಪತ್ತೆಗೆ ಸಿಕ್ಕಿಲ್ಲ. ಈ ನಡುವೆ ಸ್ಯಾಂಟ್ರೋ ರವಿಗೆ ಅನಾರೋಗ್ಯ ಕಾಡುತ್ತಿದೆ, ಮತ್ತೊಂದು ಕಡೆ ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಮೈಸೂರಿಗೆ ಹೋಗಿ ಬಂದಾಗಿನಿಂದ ರವಿಗೆ ಎನ್ಕೌಂಟರ್ ಭಯ ಕಾಡುತ್ತಿದೆಯಂತೆ.
ಈ ಎಲ್ಲ ಹಿನ್ನೆಲೆಯಿಂದಾಗಿ ನ್ಯಾಯಾಲಯದ ಮೂಲಕ ಸ್ಯಾಂಟ್ರೋ ರವಿ ಶರಣಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
- ಪಂಕಜಾ.ಎಸ್