Belagavi : ‘ಹಿಂದೂ’ ಎಂಬ ಪದದ ಅರ್ಥ ಬಹಳ ಅಶ್ಲೀಲವಾಗಿದೆ. ಅದರ ಅರ್ಥ ತಿಳಿದರೆ ನಿಮಗೆ ನಾಚಿಕೆ ಆಗುತ್ತೇ ಎಂದು ಕಾಂಗ್ರೆಸ್ ನಾಯಕ(Congress Leader) ಸತೀಶ್ ಜಾರಕಿಹೊಳಿ(Sathish Jarkiholi About Hindu) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬೆಳಗಾವಿ(Sathish Jarkiholi About Hindu) ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಆಯೋಜಿಸಿದ್ದ ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರ್ ಎನ್ನುವ ಕಾರ್ಯಕ್ರಮದಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ,
ಹಿಂದೂ ಎಂಬ ಪದದ ಮೂಲ ಭಾರತವಲ್ಲ. ಆ ಪದ ಭಾರತೀಯ ಪದವೇ ಅಲ್ಲ.
ಹಿಂದೂ ಪದದ ಮೂಲ ಪರ್ಶಿಯನ್. ಇದೀಗ ಆ ಪದ ನಮ್ಮದು ಹೇಗಾಯಿತು ಎನ್ನುವುದರ ಕುರಿತು ಚರ್ಚೆಯಾಗಬೇಕಿದೆ. ಹಿಂದೂ ಎಂಬ ಪದವೇ ಭಾರತೀಯ ಪದವಲ್ಲ.
ಹೀಗಾಗಿ ಅದು ಭಾರತೀಯ ಮೂಲದಲ್ಲ. ಎಲ್ಲಿಂದಲೋ ಬಂದವರು ತಂದಿರುವ ಧರ್ಮವನ್ನು ಬಲವಂತವಾಗಿ ನಮ್ಮ ಮೇಲೆ ಹೇರಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
https://fb.watch/gEwHz-w2oG/ ಕತ್ತಲಲ್ಲಿ ಕಳೆದು ಹೋದ ವಿದ್ಯೆ
ಇದೇ ವೇಳೆ ಛತ್ರಪತಿ ಶಿವಾಜಿ ಮಹಾರಾಜ ಕುರಿತು ಮಾತನಾಡಿದ ಅವರು, ಶಿವಾಜಿ ಅವರ ಇತಿಹಾಸವನ್ನು ಮುಚ್ಚಿಡಲಾಗಿತ್ತು.
ಶಿವಾಜಿಯವರ ಇತಿಹಾಸವನ್ನು ಜಗತ್ತಿಗೆ ಸಾರಿದ ಕೀರ್ತಿ ಮಹಾತ್ಮಾ ಜ್ಯೋತಿಬಾ ಫುಲೆ(Jyothiba Phule) ಅವರಿಗೆ ಸಲ್ಲುತ್ತದೆ. ಜ್ಯೋತಿಬಾ ಫುಲೆ ಇಲ್ಲದಿದ್ದರೇ ಛತ್ರಪತಿ ಶಿವಾಜಿ ಅವರ ಇತಿಹಾಸ ಹೊರಗೆ ಬರುತ್ತಿರಲಿಲ್ಲ.
ಇದನ್ನೂ ಓದಿ : https://vijayatimes.com/dks-skips-ed-enquiry/
ಜ್ಯೋತಿಬಾ ಫುಲೆ ಅವರು ಸತ್ಯ ಶೋಧಕ ಸಮಾಜದ ಮೂಲಕ ಶಿವಾಜಿ ಅವರ ಇತಿಹಾಸವನ್ನು ಜಗತ್ತಿಗೆ ತಿಳಿಸಿದರು. ಛತ್ರಪತಿ ಶಿವಾಜಿ ಅವರು ಸಮಾನತೆಯ ಪರವಾಗಿದ್ದರು.
ಶಿವಾಜಿ ಮಸೀದಿ ನಿರ್ಮಾಣ ಮಾಡಿರುವ ಇತಿಹಾಸವಿದೆ. ಆದರೆ ಇಂದು ಬಿಜೆಪಿಯವರು ಬೇರೆ ಇತಿಹಾಸವನ್ನು ಹೇಳುತ್ತಿದ್ದಾರೆ.

ಹೀಗಾಗಿಯೇ ಈಗ ಮರಾಠಾ, ಮುಸ್ಲಿಂ, ದಲಿತರ ನಡುವೆ ದಿನನಿತ್ಯ ಘರ್ಷಣೆಗಳಾಗುತ್ತಿವೆ. ಬಸವಣ್ಣನವರ ಕಾಲದಲ್ಲಿಯೂ ಸಾಕಷ್ಟು ಹತ್ಯೆಗಳಾದವು.
ಅವೆಲ್ಲವನ್ನೂ ಮುಸ್ಲಿಮರು ಮಾಡಿದ್ರಾ? ಅದಕ್ಕೂ ಹಿಂದೆ ಲಕ್ಷಾಂತರ ಜೈನರ ಹತ್ಯೆಗಳಾದವು, ಅವುಗಳನ್ನು ಆದಿಲ್‌ಶಾಹಿಗಳು ಮಾಡಿಸಿದ್ರಾ? ಈ ಎಲ್ಲದರ ಕುರಿತು ಚರ್ಚೆಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
- ಮಹೇಶ್.ಪಿ.ಎಚ್