ಸೌದಿ ಡಿ 11 : ಭಯೋತ್ಪಾದಕ ಸಂಘಟನೆಯಾದ ತಬ್ಲಿಘಿ ಜಮಾತ್ ಸಂಘಟನೆಗೆ ಸೌದಿ ಸರ್ಕಾರ ನಿಷೇಧ ಹೇರಿದೆ ಸೌದಿ ಸರ್ಕಾರವು ಸುನ್ನಿ ಇಸ್ಲಾಮಿಕ್ ಸಂಘಟನೆಯಾದ ತಬ್ಲಿಘಿ ಜಮಾತ್ ಅನ್ನು “ಭಯೋತ್ಪಾದನೆಯ ಹೆಬ್ಬಾಗಿಲು” ಎಂದು ಕರೆದಿದೆ
ತಬ್ಲೀಘಿ ಜಮಾತ್ ಬಗ್ಗೆ ಜನರಿಗೆ ಎಚ್ಚರಿಕೆಯನ್ನು ನೀಡಲು ಮುಂದಿನ ಶುಕ್ರವಾರದ ಬೋಧನೆಯನ್ನು ಮೀಸಲಿಡುವಂತೆ ಮಸೀದಿಯಲ್ಲಿರುವ ಬೋಧಕರಿಗೆ ಸೂಚಿಸಲಾಗಿದೆ ಎಂದು ಸೌದಿ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಟ್ವೀಟ್‌ನಲ್ಲಿ ತಿಳಿಸಿದೆ.
“ತಬ್ಲೀಘಿ ಜಮಾತ್ ತಪ್ಪು ಮಾರ್ಗದರ್ಶನ ಮತ್ತು ಅಪಾಯಕಾರಿ ಬೋಧನೆಗಳನ್ನು ಹೊಂದಿದ್ದು, ಇದು ಭಯೋತ್ಪಾದನೆಗೆ ದಾರಿ ಮಾಡುತ್ತಿದೆ. ತಬ್ಲೀಘಿಗಳು ಏನೇ ಹೇಳಿಕೊಂಡರೂ ಅವರ ಕೃತ್ಯಗಳು ತಪ್ಪು ಮಾರ್ಗದಲ್ಲಿದೆ”ಎಂದು ಅದು ಹೇಳಿದೆ.
“ಸಮಾಜಕ್ಕೆ ತಬ್ಲಿಘಿ ಮತ್ತು ದಾವಾ ಗುಂಪುಗಳ ಅಪಾಯವನ್ನು ಪರಿಗಣಿಸಿ ಸೌದಿ ಅರೇಬಿಯಾದಲ್ಲಿ ಅದನ್ನು ನಿಷೇಧಿಸಲಾಗಿದೆ” ಎಂದು ಸಚಿವಾಲಯವು ತಿಳಿಸಿದೆ.
1926 ರಲ್ಲಿ ಭಾರತದಲ್ಲಿ ಹುಟ್ಟಿಕೊಂಡ ತಬ್ಲಿಘಿ ಜಮಾತ್ ಸುನ್ನಿ ಇಸ್ಲಾಮಿಕ್ ಮಿಷನರಿ ಚಳುವಳಿಯಾಗಿದ್ದು, ಮುಸ್ಲಿಮರಿಗೆ ಸುನ್ನಿ ಇಸ್ಲಾಂನ ಶುದ್ಧ ರೂಪಕ್ಕೆ ಮರಳಲು ಮತ್ತು ಧಾರ್ಮಿಕವಾಗಿ ಅನುಸರಿಸುವಂತೆ ಪ್ರೇರೇಪಿಸುತ್ತದೆ. ವಿಶೇಷವಾಗಿ ಉಡುಪು, ವೈಯಕ್ತಿಕ ನಡವಳಿಕೆ ಮತ್ತು ಆಚರಣೆಗಳಿಗೆ ಸಂಬಂಧಿಸಿದಂತೆ ಸುನ್ನಿ ಇಸ್ಲಾಂ ಅನ್ನು ಅನುರಿಸುವಂತೆ ಮಾಡುವುದು ಇದರ ಉದ್ದೇಶ. ಇದು ಜಗತ್ತಿನಾದ್ಯಂತ 350 ರಿಂದ 400 ಮಿಲಿಯನ್ ಸದಸ್ಯರನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.