ಬೆಂಗಳೂರು, ಜ. 11: ಕೊರೊನಾ ಲಸಿಕೆ ಪಡೆದ ನಂತರದಲ್ಲಿ ಸಾವನ್ನಪ್ಪಿದ್ದಾರೆ ಎಂಬ ವರದಿಗಳು ಅಲ್ಲಲ್ಲಿ ಪ್ರಕಟವಾಗುತ್ತಿದ್ದು ಮಧ್ಯ ಪ್ರದೇಶ ಸರ್ಕಾರ ಲಸಿಕೆ ಪಡೆದು ಸಾವನ್ನಪ್ಪಿದ ವ್ಯಕ್ತಿಯೊಬ್ಬರ ಪ್ರಕರಣದ ತನಿಖೆಗೆ ಆದೇಶಿಸಿದೆ.
ನಿಜಕ್ಕೂ ಇದೊಂದು ಕೇಂದ್ರ ಸರ್ಕಾರದ ಅತಿದೊಡ್ಡ ಬೇಜವಾಬ್ದಾರಿ ನಡೆಯೇ ಆಗಿದ್ದು ಪ್ರಾಯೋಗಿಕ ಹಂತದಲ್ಲಿರುವ ಲಸಿಕೆಯನ್ನು ಜನರ ಮೇಲೆ ಪ್ರಯೋಗಿಸಲು ಹೊರಟಿದ್ದು ಜನ ಸಾಮಾನ್ಯರಲ್ಲಿ ಆತಂಕದ ವಾತಾವರಣವನ್ನು ನಿರ್ಮಿಸಲು ಹೊರಟಿದ್ದಾರೆ.
ಕೊರೊನಾ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿರುವ ಸರ್ಕಾರವು ಕರೋನಾ ಸೋಂಕು ಸರ್ಕಾರದ ಫಲಪ್ರದವಾದ ಪ್ರಯತ್ನಗಳಿಲ್ಲದೇ ತಾನಾಗಿ ತಾನೇ ನಿಯಂತ್ರಣಕ್ಕೆ ಬರುತ್ತಿರುವ ಹೊತ್ತಿನಲ್ಲಿ ಇವರ ಹೊಲಸು ಪ್ರಚಾರಕ್ಕಾಗಿ ಪ್ರಾಯೋಗಿಕ ಹಂತದ ಲಸಿಕೆಯನ್ನು ಜನರಿಗೆ ನೀಡಲು ಹೊರಟಿದ್ದಾರಲ್ಲಾ … ಇಂತಹ ಅವಿವೇಕಿಗಳಿಗೆ ಏನೆಂದು ಹೇಳಬೇಕು?
ದಯಮಾಡಿ ಮಾಧ್ಯಮಗಳು ಒಂದು ಕ್ಷಣ “ಮೋದಿ ಬಾಹುಬಲಿ” “ಆ ಬಲಿ” “ಈ ಬಲಿ” ಎಂಬ ತಲೆಯಿಲ್ಲದ ಕಾರ್ಯಕ್ರಮಗಳನ್ನು ಬದಿಗೊತ್ತಿ ಪ್ರಾಯೋಗಿಕ ಲಸಿಕೆಯ ಬಳಕೆಯ ದುಷ್ಪರಿಣಾಮ ಮದ ಬಗ್ಗೆ ಅರಿವು ಮೂಡಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಇಲ್ಲವಾದರೆ ಆ ಲಸಿಕೆಯನ್ನು ಬಳಸಿ ಆಗುವ ಅನಾಹುತಕ್ಕೆ ಕ್ಷಮೆ ಇರುವುದಿಲ್ಲ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.