Visit Channel

ಉರಿಮಂಡಲ ಹಾವು ಎಷ್ಟು ಅಪಾಯಕಾರಿ, ಆಕ್ರಮಣಕಾರಿ ಗೊತ್ತಾ?

saw scaled

ದ್ವೇಷ, ರೋಷ ಎಂದಾಕ್ಷಣ ನಮಗೆ ನೆನಪಾಗುವುದು ನಾಗರಹಾವು.”ಹಾವಿನ ದ್ವೇಷ ಹನ್ನೆರಡು ವರುಷ” ಅನ್ನೊ ಮೂಡನಂಬಿಕೆಯ ಜೊತೆಗೆ ಹೆಡೆ ಎತ್ತಿ, ಅತೀ ಕೋಪದಿಂದ ಬುಸುಗುಡುತ್ತಾ ಕಚ್ಚಲು ಪ್ರಯತ್ನಿಸುವ ಅದರ ಗುಣ ಈ ಮಾತಿಗೆ ಕಾರಣವಾಗಿರಬಹುದು. ಹಾವುಗಳಲ್ಲಿ ನಾಗರಹಾವಿನಷ್ಟೆ ಆಕ್ರಮಣಕಾರಿ ಆಗಿರುವ ಬಹಳಷ್ಟು ಹಾವುಗಳಿವೆ. ಅವುಗಳಲ್ಲಿ ಒಂದು ಈ ಉರಿಮಂಡಲ(Saw Scaled Viper). ಉರಿಮಂಡಲ ಹಾವು ಭಾರತದ ನಾಲ್ಕು ದೊಡ್ಡ ವಿಷಕಾರಿ ಹಾವು (big 4 Venomous Snakes)ಗಳಲ್ಲಿ ಒಂದಾಗಿದೆ. (ಭಾರತದಲ್ಲಿ ಹಾವು ಕಡಿತದಿಂದ ಸಂಭವಿಸುವ ಸಾವುಗಳಿಗೆ ಶೇ.90 ರಷ್ಟು ಕೊಡುಗೆ ಈ ನಾಲ್ಕು ಹಾವುಗಳದ್ದೆ ಇದೆ)

saw scaled

ಉರಿಮಂಡಲ ಸೇರಿ ಎಲ್ಲಾ ಮಂಡಲಹಾವುಗಳ (Vipers) ಚಲನೆಯ ಗತಿಯನ್ನು ಅಂದಾಜಿಸುವುದು ಕಷ್ಟ. ಸಾಮಾನ್ಯವಾಗಿ ಎಲ್ಲಾ ಹಾವುಗಳು ಬೇಟೆ ಸಿಕ್ಕಾಗ ಅಥವಾ ತಾವು ಅಪಾಯಕ್ಕೆ ಸಿಲುಕಿದ್ದೇವೆಂದು ರೊಚ್ಚಿಗೆದ್ದಾಗ, ನೇರವಾಗಿ ಮುಂದಿನ ದಿಕ್ಕಿನೆಡೆಗೆ ಚಲಿಸಿ ದಾಳಿಗೆ ಮುಂದಾದರೆ ಈ ಮಂಡಲದ ಹಾವುಗಳು ಮುಂಭಾಗ, ತಮ್ಮ ಎಡ ಬಲ ಹೀಗೆ ಸಿಕ್ಕ ಸಿಕ್ಕೆಡೆಗೆ ಒಮ್ಮಿಂದೊಮ್ಮೆಲೆ ಊಹಿಸಲು ಸಾಧ್ಯವಿಲ್ಲದಂತೆ ಒಮ್ಮೆಲೇ ಚಿಮ್ಮುತ್ತಾ ದಾಳಿ ಮಾಡುತ್ತವೆ. ಇವುಗಳ ಉಸಿರಿನ ಶಬ್ದ ಕೂಡ ಜಾಸ್ತಿ. ಅದರಲ್ಲೂ ಕೊಳಕು ಮಂಡಲವಂತೂ ಬಹಳ ದೂರದವರೆಗೂ ಕೇಳಿಸುವಂತೆ ಉಸಿರಿನ ಶಬ್ದ ಮಾಡುತ್ತದೆ.

snakes

ಇದರ ಉಸಿರಿನ ಶಬ್ದವನ್ನು ಕುಕ್ಕರಿನ ಶಬ್ದಕ್ಕೆ ಹೋಲಿಸುತ್ತಾರೆ. ಈ ಉಸಿರಿನ ಶಬ್ದದ ಕಾರಣಕ್ಕೆ ಏನೋ ಅದರ ಉಸಿರು ಸೋಕಿದರೆ ಸಾಕು, ಸೋಕಿದ ಜಾಗ ಕೊಳೆಯುತ್ತದೆ ಎಂಬ ತಪ್ಪು ಅಭಿಪ್ರಾಯ ರೂಪಿತವಾಗಿದೆ. ವಾಸ್ತವವಾಗಿ ಕೇವಲ ಉಸಿರು ಸೂಗುವುದರಿಂದ ವ್ಯಕ್ತಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಅದು ಕಚ್ಚಿದರೆ ಮಾತ್ರ ಸಮಸ್ಯೆ. ಕೆಳಗಿನ ವಿಡಿಯೋದಲ್ಲಿರುವುದು ಉರಿಮಂಡಲ (Saw scaled Viper) ಆಕ್ರಮಣಾಕಾರಿಯಾದ ಸಂದರ್ಭದ ದೃಶ್ಯ. ಈ ಗುಂಪಿಗೆ ಸೇರಿದ ಎಲ್ಲಾ ಹಾವುಗಳು ಅಪಾಯ ಎದುರಾದಾಗ ತನ್ನ ದೇಹವನ್ನೇ C ಆಕಾರದಲ್ಲಿ ಅನೇಕ ಸುತ್ತುಗಳನ್ನು ಸುತ್ತಿಕೊಂಡು ತಲೆಯನ್ನು ಆ ಸುತ್ತುಗಳ ಮಧ್ಯದಲ್ಲಿ ಇರಿಸುತ್ತದೆ.

snake

ಈ ರೀತಿಯಲ್ಲಿ ಅದು ಇರುವಾಗ ಯಾವಾಗ ವೈರಿ ಮೇಲೆ ದಾಳಿ ಮಾಡುತ್ತದೆ ಎಂಬುದನ್ನು ಅಂದಾಜಿಸಲು ಅಸಾಧ್ಯ! ಇವುಗಳು ಈ ರೀತಿಯಲ್ಲಿ ಸುರುಳಿ ಸುತ್ತಿಕೊಂಡು ಅದರ ದೇಹದ ಚರ್ಮವನ್ನು ಸುತ್ತಿಕೊಳ್ಳುತ್ತಾ, ಉಜ್ಜಿಕೊಳ್ಳುತ್ತಾ ಬುಸುಗುಡುತ್ತಾ ಹೆದರಿಸಲು ಪ್ರಯತ್ನಿಸುತ್ತದೆ.ಅದಕ್ಕೆ ಹೆದರದೆ ಇದ್ದರೆ ತೀವ್ರ ಆಕ್ರಮಣಕಾರಿಯಾಗಿ ದಾಳಿ ಮಾಡುತ್ತೆ, ವಿಷವನ್ನು ಶೀಘ್ರವೇ ಪಸರಿಸುತ್ತೆ. ಈ ಹಾವು ನೋಡಲು ಅಷ್ಟು ಭಯಂಕರ ಅನ್ನಿಸದೇ ಇದ್ದರು, ಆಕ್ರಮಣ ಶೈಲಿಯಲ್ಲಿ ಬಹಳ ಅಪಾಯಕಾರಿಯಾಗಿದೆ.

Source Credits : ಸಂಜಯ್ ಹೊಯ್ಸಳ

Latest News

bjp
ರಾಜಕೀಯ

ಕಾಂಗ್ರೆಸ್ಸಿಗರಿಗೇಕೆ ಜಿಹಾದಿಗಳ ಮೇಲೆ ಇಷ್ಟೊಂದು ಪ್ರೀತಿ? : ಬಿಜೆಪಿ ಪ್ರಶ್ನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಕ್ಕೆ ಮಸಿ ಬಳಿಯಲು ಯತ್ನಿಸಿದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲಾಗಿದೆ ಎಂದು ಬಿಜೆಪಿ ತಿಳಿಸಿದೆ.

Pingali
ಮಾಹಿತಿ

ನಮ್ಮ ರಾಷ್ಟ್ರಧ್ವಜವನ್ನು ನಿರ್ಮಿಸಿದ ಪಿಂಗಳಿ ವೆಂಕಯ್ಯ, ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು ; ಇಲ್ಲಿದೆ ಓದಿ ಅಚ್ಚರಿಯ ಮಾಹಿತಿ

ದೇಶಕ್ಕೊಂದು ಧ್ವಜಕೊಟ್ಟು 100 ವರ್ಷ ಕಳೆದರೂ ಪಿಂಗಳಿ ಅವರ ನೆನಪು ಅಜರಾಮರವಾಗಿದೆ. ಪಿಂಗಳಿ ವೆಂಕಯ್ಯ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಮುಂದೆ ಓದಿ.

JK
ದೇಶ-ವಿದೇಶ

ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರನ್ನು ಹತ್ಯೆಗೈದ ಭಯೋತ್ಪಾದಕರು!

ಕಾಶ್ಮೀರಿ ಪಂಡಿತರೊಬ್ಬರನ್ನು(Kashmiri Pandits) ಗುಂಡಿಕ್ಕಿ ಕೊಂದು ಆತನ ಸಹೋದರನನ್ನು ಗಾಯಗೊಳಿಸಿದ್ದಾರೆ. ಸಂತ್ರಸ್ತ ಸಹೋದರನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.