- ನಾನು ಯಾವತ್ತೂ ಕನ್ನಡ ಮಾತಾಡಲ್ಲ ಎಂದಿದ್ದ ಮ್ಯಾನೇಜರ್
- ಕನ್ನಡದ ಮಾತಾಡದೇ ದರ್ಪ ತೋರಿಸಿದ್ದಕ್ಕೆ ಮ್ಯಾನೇಜರ್ ಎತ್ತಂಗಡಿ (SBI manager apologies Kannada)
- ಸ್ಥಳೀಯ ಭಾಷೆ ತರಬೇತಿ ನೀಡಿ ಎಂದ ಸಿಎಂ ಸಿದ್ದರಾಮಯ್ಯ
Bengaluru: ಬೆಂಗಳೂರಿಗೆ ಬಂದು ಐಟಿ ಕಂಪನಿಗಳಲ್ಲಿ (IT companies) ಕೆಲಸ ಮಾಡುವ ಕೆಲ ಉದ್ಯೋಗಿಗಳು ಕನ್ನಡ (Kannada) ಬಗ್ಗೆ ಅಸಡ್ಡೆ ತೋರಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ಇತ್ತೀಚೆಗೆ ಆಟೋ ಹತ್ತಿದ ನಾರ್ಥಿ ಪ್ರಯಾಣಿಕ ಕನ್ನಡ (Passenger Kannada) ಮಾತನಾಡಲ್ಲ ಎಂದು ಕನ್ನಡಿಗ ಚಾಲಕನಿಗೆ ಆವಾಜ್ ಹಾಕಿದ್ದ ಮಾಸುವ ಮುನ್ನವೇ ಎಸ್‌ಬಿಐ ಬ್ಯಾಂಕ್ (SBI Bank) ಲೇಡಿ ಮ್ಯಾನೇಜರ್ ಕನ್ನಡ ಮಾತನಾಡುವುದೇ ಇಲ್ಲ ಎಂದು ದುರಹಂಕಾರ ಪ್ರದರ್ಶಿಸಿದ್ದರು.
ಚಂದಾಪುರದಲ್ಲಿರುವ ಎಸ್‌ಬಿಐ ಬ್ಯಾಂಕ್ ಮಹಿಳಾ ವ್ಯವಸ್ಥಾಪಕಿ, ಇದು ಇಂಡಿಯಾ (India) ನಾನು ಕನ್ನಡ ಮಾತನಾಡುವುದೇ ಇಲ್ಲ. ಸ್ಥಳೀಯ ಭಾಷೆ, ಆರ್‌ಬಿಐ ಮಾರ್ಗಸೂಚಿ (RBI guidelines) ಪಾಲನೆ ಅದೆಲ್ಲ ಇಲ್ಲ ಎಂದು ಮನ ಬಂದಂತೆ ಗ್ರಾಹಕರ ಜೊತೆ ರೇಗಾಡಿದ್ದರು. ಇದರ ವಿಡಿಯೋ ವೈರಲ್ (video went viral) ಆಗುತ್ತಿದ್ದಂತೆ ಕನ್ನಡಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು .
ಸ್ಥಳೀಯ ಗ್ರಾಹಕರೊಂದಿಗೆ ಸ್ಥಳೀಯ ಭಾಷೆಯಲ್ಲಿ (Lee’s language) ಮಾತನಾಡಬೇಕು ಎಂಬ ನಿಯಮವಿದ್ದರೂ ದರ್ಪ ಪ್ರದರ್ಶಿಸಿದ್ದಕ್ಕೆ ಕನ್ನಡ ಪರ ಸಂಘಟನೆಗಳು (Pro-Kannada organizations) ಬ್ಯಾಂಕ್ಗೆ ತೆರಳಿ ಆಕ್ಷೇಪ ವ್ಯಕ್ತಪಡಿಸಿದ್ದರು.
ವಿಡಿಯೊ ಸೋಷಿಯಲ್ (Video Social) ಮೀಡಿಯಾದಲ್ಲಿ ವೈರಲ್ ಆದಾಗ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು (Outrage was expressed) , ಬ್ಯಾಂಕ್ ಗಳಲ್ಲಿ ಆಯಾ ರಾಜ್ಯಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಉದ್ಯೋಗಿಗಳು ಸೇವೆ (Employees service) ನೀಡುವುದನ್ನು ಕಡ್ಡಾಯಗೊಳಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು.

ಇದರ ಬೆನ್ನಲ್ಲೇ ಆಕೆ ಕ್ಷಮೆ ಯಾಚಿಸಿದ್ದಳು. ಈಗ ಆ ವ್ಯವಸ್ಥಾಪಕಿಯನ್ನು (Manager) ವರ್ಗಾವಣೆ ಮಾಡಲಾಗಿದೆ. ಈ ಘಟನೆ ಸಿಎಂ ಸಿದ್ದರಾಮಯ್ಯ (CM Siddaramaiah) ಗಮನಕ್ಕೂ ಬಂದಿದ್ದು, ಮಹಿಳಾ ವ್ಯವಸ್ಥಾಪಕಿಯನ್ನು ವರ್ಗಾವಣೆ ಮಾಡಿರುವುದಕ್ಕೆ ಎಸ್ ಬಿಐ ಅಧಿಕಾರಿಗಳನ್ನು (SBI officials) ಅಭಿನಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಸ್ಥಳೀಯ ಭಾಷೆ (Local language) ಕಲಿಕೆಗೆ ತರಬೇತಿ ನೀಡುವಂತೆ ಸೂಚನೆ ನೀಡಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಸ್ ಬಿಐ ಬ್ಯಾಂಕ್ ಮ್ಯಾನೇಜರ್ (SBI Bank Manager) ಅವರ ನಡತೆ ಸ್ವೀಕಾರಾರ್ಹವಲ್ಲ, ಇಂತಹ ವರ್ತನೆ ಖಂಡನೀಯ, ಅವರನ್ನು ತಕ್ಷಣವೇ ವರ್ಗಾಯಿಸಿ ಕ್ರಮ ತೆಗೆದುಕೊಂಡ ಎಸ್ ಬಿಐ ಕ್ರಮ ಶ್ಲಾಘನೀಯವಾಗಿದೆ (SBI’s action is commendable) .
ಇದನ್ನು ಓದಿ : http://ಕನ್ನಡ ಸಾಹಿತಿ ಬಾನು ಮುಷ್ತಾಕ್ ಅವರ ಕೃತಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ: ಕನ್ನಡಕ್ಕೆ ಸಂದ ಮೊದಲ ಪ್ರಶಸ್ತಿ
ಇಂತಹ ಘಟನೆ ಮರುಕಳಿಸಬಾರದು. ಬ್ಯಾಂಕ್ ಸಿಬ್ಬಂದಿ ಗ್ರಾಹಕರನ್ನು (Bank staff customers) ಗೌರವದಿಂದ ನಡೆಸಿಕೊಳ್ಳಬೇಕು, ಸ್ಥಳೀಯ ಭಾಷೆಗಳಿಗೆ (Local languages) ಆದ್ಯತೆ ನೀಡಬೇಕು.ಈ ನಿಟ್ಟಿನಲ್ಲಿ ಹಣಕಾಸು ಸಚಿವರು ಮತ್ತು ಹಣಕಾಸು ಸೇವೆಗಳ ಇಲಾಖೆ ಕ್ರಮ ಕೈಗೊಂಡು (Take action) ಭಾಷೆ ಮತ್ತು ಸಂಸ್ಕೃತಿಯ (SBI manager apologies Kannada) ಸೂಕ್ಷ್ಮತೆಯನ್ನು ಬ್ಯಾಂಕ್ ಸಿಬ್ಬಂದಿ ಅರ್ಥಮಾಡಿಕೊಳ್ಳಲು ಎಲ್ಲಾ ಸಿಬ್ಬಂದಿಗೆ ಆಯಾ ರಾಜ್ಯಗಳ ಸ್ಥಳೀಯ ಭಾಷೆ (Local language of the states) ಬಗ್ಗೆ ತರಬೇತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.