New Delhi : ಆಧುನಿಕ ಯುಗದಲ್ಲಿ ಮಾನವ ಎಷ್ಟೇ ಮುಂದುವರಿದಿದ್ದರೂ, ಸಂತಾನೋತ್ಪತ್ತಿ ಕ್ರಿಯೆಯನ್ನು ಧಾರ್ಮಿಕ ಮತ್ತು ಸಾಮಾಜಿಕ ದೃಷ್ಟಿಕೋನದಿಂದಲೇ ಹೆಚ್ಚಾಗಿ ನೋಡಲಾಗುತ್ತದೆ. ಈ ಕಾರಣದಿಂದಲೇ, ಗರ್ಭಧಾರಣೆ ಹಾಗೂ ಗರ್ಭಪಾತ(Abortion) ಎನ್ನುವ ಕ್ರಿಯೆಯ ಸುತ್ತ ನೂರಾರು ಚರ್ಚೆಗಳು ಮತ್ತು ವಿವಾದಗಳು ಹೆಣೆದುಕೊಂಡಿರುತ್ತವೆ.

ಗರ್ಭಪಾತ ಕಾನೂನು ಬಾಹಿರ(Law Offense) ಎಂಬುದು ನಮಗೆಲ್ಲ ತಿಳಿದುರುವ ವಿಷಯವೇ. ಆದರೆ ಈಗ, ಮಹಿಳೆಯರ ಕಾನೂನುಬದ್ಧ ಗರ್ಭಪಾತದ ಬಗ್ಗೆ ಸುಪ್ರೀಂ ಕೋರ್ಟ್(SupremeCourt) ದೊಡ್ಡ ಪ್ರತಿಕ್ರಿಯೆ ನೀಡಿದೆ. ಹೌದು, ಪ್ರತಿಯೊಬ್ಬ ಮಹಿಳೆಯೂ, ಆಕೆ ವಿವಾಹಿತೆಯಾಗಿರಲಿ ಅಥವಾ ಅವಿವಾಹಿತೆಯಾಗಿರಲಿ, ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಇದನ್ನೂ ಓದಿ : https://vijayatimes.com/health-tips-for-human-eye/
ಜಸ್ಟಿಸ್ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು, ವಿವಾಹಿತ ಹಾಗೂ ಅವಿವಾಹಿತ ಮಹಿಳೆಯರು ಕೂಡ ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು ಎಂದು ಹೇಳಿದೆ. ಏಕೆಂದರೆ, ಒಂದು ಹೆಣ್ಣು ಅತ್ಯಾಚಾರದಿಂದ ಅಥವಾ ಬಲವಂತವಾಗಿ ಗರ್ಭಿಣಿಯಾಗಿದ್ದರೆ ಅದು ಆಕೆಗೆ ಮಾನಸಿಕ ಹಿಂಸೆಯುಂಟುಮಾಡುತ್ತದೆ.

ಈ ಕಾರಣದಿಂದ ಖಂಡಿತ ಆಕೆ ಗರ್ಭಪಾತಕ್ಕೆ ಅರ್ಹಳು ಎಂದು ಹೇಳಿದೆ. ಬಲವಂತದ ಗರ್ಭಧಾರಣೆಯಿಂದ ಮಹಿಳೆಯರನ್ನು ರಕ್ಷಿಸಲು ಇದು ಬಹಳ ಅಗತ್ಯವಾಗಿದೆ ಹಾಗೂ ಮಹಿಳೆಗೆ ಬಲವಂತದಿಂದ ಗರ್ಭಧಾರಣೆಯಾಗಿದ್ದರೆ, ಅದೂ ಕೂಡ ಅತ್ಯಾಚಾರಕ್ಕೆ(Rape) ಸಮ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.
ಇದನ್ನೂ ಓದಿ : https://vijayatimes.com/hdk-allegation-over-state-govt/
ಇದೇ ವೇಳೆ ನ್ಯಾಯಪೀಠವು, ಗಂಡಂದಿರಿಂದ ಲೈಂಗಿಕ ದೌರ್ಜನ್ಯವು ಅತ್ಯಾಚಾರದ ರೂಪವನ್ನು ಪಡೆದುಕೊಳ್ಳಬಹುದು. ಹಾಗಾಗಿ, ಅತ್ಯಾಚಾರದ ಅರ್ಥವು ಎಂಟಿಪಿ ಕಾಯ್ದೆ ಮತ್ತು ಗರ್ಭಪಾತದ ಉದ್ದೇಶಗಳಿಗಾಗಿ ನಿಯಮಗಳ ಅಡಿಯಲ್ಲಿ ವೈವಾಹಿಕ ಅತ್ಯಾಚಾರದ ಅರ್ಥವನ್ನು ಒಳಗೊಂಡಿರಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಇದನ್ನೂ ಓದಿ : https://youtu.be/goe0pevvNrg ಭ್ರಷ್ಟ ಜಿವಿಕೆಯ 108 ಹಗರಣ!
ಅವಿವಾಹಿತ ಮಹಿಳೆಯೂ ವಿವಾಹಿತ ಮಹಿಳೆಯರಿಗೆ ಸರಿಸಮನಾಗಿ 24 ವಾರಗಳವರೆಗೆ ಗರ್ಭಪಾತಕ್ಕೆ ಒಳಗಾಗಬಹುದು ಎಂದು ಘೋಷಿಸಲು ಕೋರ್ಟ್ ಎಂಟಿಪಿ ಕಾಯ್ದೆಯನ್ನು ವ್ಯಾಖ್ಯಾನಿಸಿದೆ.
- Pavithra