Health : ಹೆಲ್ತಿಡ್ರಿಂಕ್ಸ್ (Healthy drinks) ಅಲ್ಲ ಹಾರಿಬಲ್ ಡ್ರಿಂಕ್ಸ್ . ಬಯಲಾಯ್ತು ಜನಪ್ರಿಯ ಹೆಲ್ತಿ ಡ್ರಿಂಕ್ಸ್ ಭಯಾನಕ ಸತ್ಯ! ಹೆಲ್ತ್ ಡ್ರಿಂಕ್ಸ್ (scary truth about healthy drinks) ಒಳಗಿರೋದು ಬರೀ ಸಕ್ಕರೆ, ಪೌಷ್ಟಿಕಾಂಶ (nutrition) ಅಲ್ಲ. ಹೆಲ್ತ್ ಡ್ರಿಂಕ್ಸ್ ನಿಂದ ಹೆಚ್ಚಾಗ್ತಿದೆ ಮಕ್ಕಳಲ್ಲಿ ಡಯಾಬಿಟಿಸ್ (Diabetes) !

ನಿಮ್ಮ ಮಕ್ಕಳು ಎತ್ತರವಾಗಿ ಬೆಳೆಯ ಬೇಕಾ? ಹಾಗಾದ್ರೆ ಹಾಲಿನ ಶಕ್ತಿಯುಳ್ಳ ಈ ಹೆಲ್ತ್ ಡ್ರಿಂಕ್ ಕುಡಿಯಿರಿ. ನಿಮ್ಮ ಮಕ್ಕಳು ಜೀನಿಯಸ್ ಆಗ್ಬೇಕಾ ಹಾಗಾದ್ರೆ ಈ ಚಾಕಲೇಟ್ ಹೆಲ್ತ್ ಡ್ರಿಂಕ್ ನಿತ್ಯ ಕುಡಿಸಿ.
ನಿಮ್ಮ ಮಕ್ಕಳ ಎನರ್ಜಿ ಹೆಚ್ಚಿಸಬೇಕಾ? ಹಾಗಾದ್ರೆ ಇದನ್ನು ಮಕ್ಕಳಿಗೆ ಕೊಡಿ ಅಂತ ಹೇಳೋ ಜಾಹಿರಾತಿಗೆ ನೀವೇನಾದ್ರೂ ಮಾರು ಹೋಗಿದ್ದೀರಾ?
ದೊಡ್ಡ ಸ್ಟಾರ್ ನಟರು, ಕ್ರೀಡಾಪಟುಗಳ ಮಾತು ಕೇಳಿ ನಿತ್ಯ ಮಕ್ಕಳಿಗೆ ಹೆಲ್ತ್ ಡ್ರಿಂಕ್ ಕುಡಿಸ್ತಿದ್ದೀರಾ? ಹಾಗಾದ್ರೆ ಎಚ್ಚರ…..!
ಹೆಲ್ತ್ಡ್ರಿಂಕ್ಸ್ ಜಾಹಿರಾತಿಗಳಿಗೆ ಮರುಳಾಗಬೇಡಿ :
ಅಧ್ಯಯನದಿಂದ ಬಯಲಾಗಿದೆ ಹೆಲ್ತ್ಡ್ರಿಂಕ್ಸ್ ಕಹಿಸತ್ಯ. ಹೌದು, ಆರೋಗ್ಯ ಅಧ್ಯಯನ ಶಾಕಿಂಗ್ ನ್ಯೂಸನ್ನು ಬಯಲು ಮಾಡಿದೆ. ಜಾಹೀರಾತಿನಲ್ಲಿ (Advertisement) ಬರೋ ಅಮಿತಾ ಬಚ್ಚನ್ (Amita Bachchan),
ಸಚಿನ್ ತೆಂಡೂಲ್ಕರ್ (Sachin Tendulkar), ಧೋನಿ (Dhoni), ಕೊಹ್ಲಿಯಂಥಾ ನಟರ, ಕ್ರೀಡಾಪಟುಗಳ, ವೈದ್ಯರ ಮಾತು ಕೇಳಿ
ನಿತ್ಯ ಮಕ್ಕಳಿಗೆ ಕುಡಿಸುತ್ತಿದ್ದ ಹೆಲ್ತ್ ಡ್ರಿಂಕ್ನಲ್ಲಿ ಪೌಷ್ಟಿಕಾಂಶ ಇಲ್ಲ ಬದಲಾಗಿ ಅದ್ರಲ್ಲಿ ಇರೋದು ಸಾಕ್ರಿನ್ ರೂಪದ ಸಕ್ಕರೆ ಮತ್ತು ಕಾರ್ಬೋಹೈಡ್ರೇಡ್ ಅಂತ.
ಇದನ್ನೂ ಓದಿ : https://vijayatimes.com/fir-registered-against-brijbhushan/
ನಿತ್ಯ ನಮ್ಮ ಮಕ್ಕಳಿಗೆ ಕುಡಿಸೋ ಈ ಹೆಲ್ತ್ ಡ್ರಿಂಕ್ ನಮ್ಮ ಮಕ್ಕಳಿಗೆ ಆರೋಗ್ಯ ಕೊಡುತ್ತಿಲ್ಲ ಬದಲಾಗಿ ಮಕ್ಕಳಿಗೆ (scary truth about healthy drinks) ಡಯಾಬಿಟೀಸ್,
ಹೈಪರ್ ಆಕ್ಟೀವ್ ಡಿಸೀಸ್, ಇನ್ನು ಏನೇನೋ ಕಾಯಿಲೆಗಳನ್ನ ಕೊಡುತ್ತಿದೆ ಅನ್ನೋದನ್ನು ಮಕ್ಕಳ ವೈದ್ಯರು ಬಯಲು ಮಾಡಿದ್ದಾರೆ.
ಜಾಹೀರಾತು ಸುಳ್ಳು ಹೇಳುತ್ತಿದೆ !
ಆರೋಗ್ಯದ ವಿಷಯ ಬಂದಾಗ ಯಾರೂ ಹಣದ ಮುಖ ನೋಡುವುದಿಲ್ಲ ಎಂದು ವ್ಯಾಪಾರಿಗಳಿಗೆ ಚೆನ್ನಾಗಿ ಗೊತ್ತು. ಅದರಲ್ಲೂ ಮಕ್ಕಳ ಆರೋಗ್ಯ ವಿಷಯ ಬಂದಾಗ ಹೆತ್ತವರು ಹಣದ ಚಿಂತೆ ಮಾಡಲ್ಲ.
ಅದಕ್ಕಾಗಿ ಈ ಹೆಲ್ತ್ ಡ್ರಿಂಕ್ಗಳ ಜಾಹೀರಾತಿಗೆ ಕೊಟ್ಯಾಂತರ ರೂಪಾಯಿ ಖರ್ಚು ಮಾಡಿ ಖ್ಯಾತ ಕ್ರಿಕೆಟ್ ಆಟಗಾರರು (Cricket players)
ಮತ್ತು ಸಿನಿಮಾ ತಾರೆಯರ ಬಾಯಲ್ಲಿ ಸುಳ್ಳು ಹೇಳಿಸಿ ಜನರಿಗೆ ಮೋಸ ಮಾಡ್ತಿದ್ದಾರೆ.
ಈ ಹೆಲ್ತ್ ಡ್ರಿಂಕ್ಗಳ ಬಗ್ಗೆ ಜಾಹೀರಾತು ನೋಡಿ ಅದರೊಳಿಗಿನ ಸತ್ಯ – ಅಸತ್ಯವನ್ನು ತಿಳಿಯದೆ ನೇರವಾಗಿ ಅಂಗಡಿಗೆ ಹೋಗಿ ಕೊಂಡು ನಮ್ಮ ಮಕ್ಕಳಿಗೂ ಕುಡಿಸುತ್ತೇವೆ.
ಆದರೆ ಇದನ್ನು ಕುಡಿದರೆ ಆಗುವ ಸೈಡ್ ಎಫೆಕ್ಟ್ ವಿವರಗಳು ಇಲ್ಲಿವೆ ನೋಡಿ.
ಸಕ್ಕರೆ ಅಂಶ ಅತೀ ಹೆಚ್ಚು ಪ್ರಮಾಣದಲ್ಲಿದೆ !

ದೇಹಕ್ಕೆ ಅತಿಯಾದ ಸಕ್ಕರೆ ಒಳ್ಳೆಯದಲ್ಲ ಇದು ಎಲ್ಲರಿಗೆ ಗೊತ್ತು. ಅದರಲ್ಲೂ WHO ತಿಳಿಸಿರುವ ಹಾಗೆ 20 ಗ್ರಾಂ ಅಂದರೆ ಐದು ಸ್ಪೂನ್ ಹೆಚ್ಚಿನ ಸಕ್ಕರೆ ನಮ್ಮ ಆರೋಗ್ಯಕ್ಕೆ ಕೆಟ್ಟದು.
ಆದರೆ ಈ ಡ್ರಿಂಕ್ಸ್ ಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಸಕ್ಕರೆ ಹಾಗು ಚಾಕಲೇಟ್ ಅಂಶ ವಿರುತ್ತದೆ.
ಕೆಲವು ಹೆಲ್ತ್ ಡ್ರಿಂಕ್ಸ್ಗಳಲ್ಲಿ 38 ಶೇಕಡಾಕ್ಕಿಂತ ಹೆಚ್ಚು ಪ್ರಮಾಣದ ಸುಕ್ರೋಸ್ ಇದೆ ಅನ್ನೋದು ತಿಳಿದುಬಂದಿದೆ.
ಇದರಿಂದ ಮಕ್ಕಳು ಡಯಾಬಿಟಿಸ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಅಷ್ಟೇ ಅಲ್ಲ ಹೈಪರ್ ಆಕ್ಟೀವ್ ಡಿಸೀಸ್ಗೂ ತುತ್ತಾಗುತ್ತಾರೆ ಅನ್ನೋ ಅಂಶ ಅಧ್ಯಯನದಿಂದ ಬಯಲಾಗಿದೆ.
ಇದನ್ನೂ ಓದಿ : https://vijayatimes.com/business-without-investment/
ಬಾಯಿಯ ಆರೋಗ್ಯ ಕೆಡುತ್ತದೆ:
ಸಕ್ಕರೆ ಪ್ರಮಾಣ ಹೆಚ್ಚಿದಷ್ಟು ಬಾಯಿಯ ಆರೋಗ್ಯ ಹಾಳಾಗುವ ಸಂಭವ ಹೆಚ್ಚು. ಏಕೆಂದರೆ ಇದನ್ನ ಕುಡಿದ ಬಳಿಕ ಬಾಯಿಯಲ್ಲಿ ಉಳಿಯುವ ಈ ಡ್ರಿಂಕ್ಸ್ ಬ್ಯಾಕ್ಟೀರಿಯಾ ಗಳಿಗೆ ಮೃಷ್ಟಾನ್ನ ಭೋಜನ.
ಏಕೆಂದರೆ ಅತಿ ಹೆಚ್ಚು ಸಕ್ಕರೆಯಿಂದ ನಮ್ಮ ಹಲ್ಲು ಉಳುಕವಾಗುವುದು ವಸಡು ಕೊಳೆಯುವುದು ಹೀಗೆ ಮೊದಲಾದ ತೊಂದರೆಗಳು ಕಾಣಿಸುತ್ತವೆ.
ಅಪಾಯಕಾರಿಯಾದ ಪ್ರಿಸರ್ವೇಟಿವ್ಸ್ :
ಪ್ರತಿ ಸಿದ್ಧ, ಸಂಸ್ಜರಿತ ಆಹಾರದಲ್ಲಿ ಪ್ರಿಸರ್ವೇಟಿವ್ಗಳನ್ನು (Preservative) ಸೇರಿಸಿಯೇ ಸೇರಿಸ್ತಾರೆ. ಏಕೆಂದರೆ ಆಹಾರ ಮಾರುಕಟ್ಟೆಯಿಂದ ಗ್ರಾಹಕನ ಮನೆಗೆ ಬರುವ ಮುನ್ನವೇ ಹಾಳಾಗಬಾರದೆಂದು.
ಆದರೆ ಈ ಸಂರಕ್ಷಕಗಳು ಆರೋಗ್ಯಕ್ಕೆ ಉತ್ತಮ ಅಲ್ಲ. ಸುಂದರವಾಗಿ ಕಾಣಲು ಸೇವಿಸುವ ಕೆಲವು ಕೃತಕ ಬಣ್ಣಗಳು ಸಹ ಅನಾರೋಗ್ಯಕರವಾಗಿವೆ.
ಅಷ್ಟೇ ಅಲ್ಲದೆ ಇದರಿಂದ ಮಕ್ಕಳ ಸ್ಮರಣ ಶಕ್ತಿ ಕುಂಠಿತಗೊಳ್ಳುತ್ತದೆ.

ಖಾಲಿ ಹೊಟ್ಟೆಗೆ ಕುಡಿದ್ರೆ, ಬರುತ್ತೆ ಇನ್ನಷ್ಟು ಕಾಯಿಲೆ :
ಇನ್ನು ಈ ಹೆಲ್ತಿ ಡ್ರಿಂಕ್ ಗಳನ್ನು ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಅನೇಕ ತೊಂದರೆಗಳು ಎದುರಾಗುತ್ತವೆ. ಹೊಟ್ಟೆ ನೋವು ಅಸಿಡಿಟಿ ಹೀಗೆ ಹಲವಾರು ಕಾಯಿಲೆಗಳು ಕಾಡುತ್ತವೆ.
ಏಕೆಂದರೆ ಇದರಲ್ಲಿ ಅತಿ ಹೆಚ್ಚಾದ ಫೈಬರ್ ಅಂಶ ಇರುತ್ತದೆ. ಇದಕ್ಕಾಗಿ ಖಾಲಿ ಹೊಟ್ಟೆಯಲ್ಲಿ ಹಾರ್ಲಿಕ್ಸ್ (Horlicks) ಅಥವಾ ಬೂಸ್ಟ್ ಗಳಂತ ಎನರ್ಜಿ ಡ್ರಿಂಕ್ ಗಳನ್ನು ಸೇವಿಸಬೇಡಿ.
ನೋಡಿದ್ರಲ್ಲಾ ಸ್ನೇಹಿತ್ರೆ ಬಣ್ಣ ಬಣ್ಣದ ಪ್ಯಾಕೇಟ್, ಕಲರ್ ಫುಲ್ ಅಡ್ವರ್ಟೈಸ್ಮೆಂಟ್. ಇವುಗಳು ಜನರನ್ನು ಮರಳು ಮಾಡಿ ಹೇಗೆ ಅಪಾಯಕ್ಕೆ ಸಿಲುಕಿಸುತ್ತವೆ ಅಲ್ವಾ.
ಜನ ನಾವು ಎಚ್ಚೆತ್ತುಕೊಳ್ಳಬೇಕು. ಮಕ್ಕಳಿಗೆ ನೈಸರ್ಗಿಕ ಆಹಾರ ತಿನ್ನಿಸಿ ಅವರ ಆರೋಗ್ಯ ವೃದ್ಧಿಸುವ ಹಾಗೆ ಮಾಡಬೇಕು.
- ಪ್ರೀತು ಮಹೇಂದರ್