ಶಾಲೆಯಲ್ಲಿ ೯ನೇ ಕ್ಲಾಸ್ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕನೊಬ್ಬ ಕಾರನ್ನು ರಭಸವಾಗಿ ಚಲಾಯಿಸಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಾಲ್ವರಿಗೆ ಡಿಕ್ಕಿ ಹೊಡೆದು ಅವರ ಸಾವಿಗೆ ಕಾರಣನಾಗಿದ್ದಾನೆ. ಈ ಒಂದು ದುರ್ಘಟನೆ ಹೈದ್ರಾಬಾದ್ ಕರೀಮ್ ನಗರದಲ್ಲಿ ನಡೆದಿದೆ. ಕಾರನ್ನು ರಭಸವಾಗಿ ಚಾಲನೆ ಮಾಡಿಕೊಂಡು ಬಂದ ಬಾಲಕ ರಸ್ತೆಯ ಪಕ್ಕದಲ್ಲಿ ಪಾದಚಾರಿಗಳು ನಡೆದುಕೊಂಡು ಹೋಗುವ ಪಥದ ಮೇಲೆ ಕಾರು ಹತ್ತಿಸಿದ್ದಾನೆ. ಪಾದಚಾರಿಗಳ ಪಥದ ಮೇಲೆ ನಡೆದುಕೊಂಡು ಹೋಗುತ್ತಿದ್ದ ಓರ್ವ ಬಾಲಕಿ ಸೇರಿದಂತೆ ಮೂವರು ಮಹಿಳೆಯರ ಮೇಲೆ ಹತ್ತಿಸಿ ಅವರ ಜೀವ ಬಲಿಪಡೆದಿದ್ದಾನೆ.

ಕಾರು ಚಲಾಯಿಸುತ್ತಿದ್ದ ಬಾಲಕನ ಜೊತೆ ಇನ್ನೂ ಮೂರು ಜನ ಸ್ನೇಹಿತರು ಕಾರಿನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಾರನ್ನು ಚಲಾಯಿಸುತ್ತಿದ್ದ ಬಾಲಕ ವಾಹನವನ್ನು ಬಹಳ ವೇಗವಾಗಿ ಚಲಾಯಿಸಿಕೊಂಡು ಬಂದಿದ್ದಾನೆ. ಈ ವೇಳೆ ರಸ್ತೆ ಪೂರ್ತಿ ಮಂಜಿನಿಂದ ಕೂಡಿತ್ತು, ಜೊತೆಗೆ ಕಾರಿನ ಸ್ಟೀರಿಂಗ್ ಹಿಡಿದಿದ್ದ ಯುವಕ ಕಣ್ಣಿಗೇನೋ ಬಿತ್ತು ಎಂದು ಕಣ್ಣುಜ್ಜಿಕೊಳ್ಳಲು ಮುಂದಾಗಿದ್ದಾನೆ. ಈ ಸಮಯದಲ್ಲಿ ಕಾರು ನಿಯಂತ್ರಣ ತಪ್ಪಿದೆ. ಗಾಬರಿಗೊಂಡ ಯುವಕ ಕಾರಿನ ಬ್ರೇಕ್ ಹಿಡಿಯುವ ಬದಲು ಆಕ್ಸಿಲೇಟರ್ ಜೋರಾಗಿ ಒತ್ತಿದ್ದಾನೆ.
.jpg?tYVB0YNaI5OIN83cFIoUm2I5thMfTct4&size=1200:675)
ಕ್ಷಣಮಾತ್ರದಲ್ಲಿ ಕಾರು ನಿಲ್ಲುವ ಬದಲು ವೇಗವಾಗಿ ಚಲಾಯಿಸಿ ಫುಟ್ ಪಾತ್ ಮೇಲೆ ಹೋಗುತ್ತಿದ್ದ 14 ವರ್ಷದ ಬಾಲಕಿ ಹಾಗೂ ಮೂವರು ಮಹಿಳೆಯರ ಮೇಲೆ ಹತ್ತಿಸಿದ್ದಾನೆ. ಕಾರು ಡಿಕ್ಕಿ ಹೊಡೆದ ಕೂಡಲೇ ನಾಲ್ವರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಈ ಘಟನೆ ಮುಂಜಾನೆ 6:30 ರಲ್ಲಿ ನಡೆದಿದೆ. ಘಟನೆ ಸಂಭವಿಸುತ್ತಿದ್ದಂತೆ ಕಾರನ್ನು ಅಲ್ಲೇ ಬಿಟ್ಟು ಯುವಕ ಹಾಗೂ ಆತನ ಸ್ನೇಹಿತರೆಲ್ಲರೂ ಪರಾರಿಯಾಗಿದ್ದಾರೆ. ಪೊಲೀಸರು ತಮ್ಮ ತನಿಖೆಯನ್ನು ಆರಂಭಿಸಿ ಈ ಹುಡುಗರನ್ನು ಬಂಧಿಸಿದ್ದಾರೆ ಜೊತೆಗೆ ಅಪ್ರಾಪ್ತರ ವಿರುದ್ಧ ಐಪಿಸಿ ಸೆಕ್ಷನ್ 304ರ ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.