Bengaluru : ರಾಜ್ಯದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI compete 100 constituencies) 100 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ,
ಎಂದು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಫಸರ್ ಕೊಡ್ಲಿಪೇಟೆ (Afsar Kodlipet) ತಿಳಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಡಿಪಿಐ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.
ಅವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ (Udupi) ಸೇರಿದಂತೆ ರಾಜ್ಯದ 100 ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಮತ್ತು ಬಿಜೆಪಿ (SDPI compete 100 constituencies) ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯೋಜನೆಗಳ ಅನುಮೋದನೆಗೆ ಶೇಕಡ 5 ಕಮಿಷನ್ ಮತ್ತು ಮಸೂದೆಗಳನ್ನು ಅಂಗೀಕರಿಸಲು ಶೇಕಡಾ 40 ಕಮಿಷನ್ ಕೇಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇನ್ನು 2016 ರಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆದ ಎಲ್ಲಾ ಮುಸ್ಲಿಮರ(Muslim) ಹತ್ಯೆಗಳಲ್ಲಿ ವಿಎಚ್ಪಿ ಮುಖಂಡ ಶರಣ್ ಪಂಪ್ವೆಲ್(Sharan Pumpwell) ಭಾಗಿಯಾಗಿದ್ದಾರೆ.
ಬಿಜೆಪಿ ಯುವ ಘಟಕದ ಮುಖಂಡ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆಗೆ ಸೇಡು ತೀರಿಸಿಕೊಳ್ಳಲು ಸುರತ್ಕಲ್‌ನ ಫಾಝಿಲ್‌ನನ್ನು ಹಿಂದೂ ಯುವಕರು ಹತ್ಯೆ ಮಾಡಿದ್ದಾರೆ,
ಎಂದು ಹೇಳಿಕೆ ನೀಡಿರುವ ಅವರ ಹೇಳಿಕೆ ವಿರುದ್ಧ ರಾಜ್ಯ ಸರ್ಕಾರ ಏಕೆ ಕ್ರಮ ಕೈಗೊಳ್ಳುತ್ತಿಲ್ಲ.
ಮುಸ್ಲಿಂ ಯುವಕರ ಹತ್ಯೆಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ಬಿಜೆಪಿ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್ಐಎಗೆ (NIA) ಹಸ್ತಾಂತರಿಸಿದ್ದರೆ, ಕಾಟಿಪಳ್ಳದಲ್ಲಿ ಜಲೀಲ್
ಮತ್ತು ಸುರತ್ಕಲ್‌ನಲ್ಲಿ ಫಾಜಿಲ್ ಹತ್ಯೆ ಪ್ರಕರಣಗಳನ್ನು ಕೇಂದ್ರ ಸಂಸ್ಥೆಗಳಿಗೆ ಏಕೆ ಹಸ್ತಾಂತರಿಸಲಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ ; ಕೇಸರಿ ಪಡೆ ಸೇರಿದ ಜೆಡಿಎಸ್-ಕಾಂಗ್ರೆಸ್ ನಾಯಕರು
ಇನ್ನು ಪಿಎಫ್ಐ (PFI) ನಿಷೇಧದ ನಂತರ ಎಸ್ಡಿಪಿಐ ಇದೇ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ಎದುರಿಸುತ್ತಿದೆ. ಪಿಎಫ್ಐ ನಿಷೇಧದಿಂದಾಗಿ ಎಸ್ಡಿಪಿಐ ಸಂಘಟನೆಯ ಶಕ್ತಿ ಕುಸಿದಿದ್ದು, ಅನೇಕರು ಸಂಘಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.
ಆದರೆ ರಾಜ್ಯದ 10ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎಸ್ಡಿಪಿಐ ಪ್ರಬಲ ಹೋರಾಟ ನಡೆಸಲು ಮುಂದಾಗಿದೆ. ಮುಖ್ಯವಾಗಿ ಯು.ಟಿ ಖಾದರ್ (U T Khadar) ಶಾಸಕರಾಗಿರುವ ಉಳ್ಳಾಲ ವಿಧಾನಸಭಾ ಕ್ಷೇತ್ರ, ತನ್ವೀರ್ ಸೇಠ್ ಅವರ ನರಸಿಂಹರಾಜ ವಿಧಾನಸಭಾ ಕ್ಷೇತ್ರ,
ರಿಜ್ವಾನ್ ಅರ್ಷದ್ ಶಿವಾಜಿನಗರ, ರಹೀಂ ಖಾನ್ ಕ್ಷೇತ್ರ ಬೀದರ್, ಖನೀಜಾ ಫಾತೀಮಾ ಅವರ ಕ್ಷೇತ್ರ ಕಲಬುರಗಿ ಉತ್ತರದಲ್ಲಿ ಎಸ್ಡಿಪಿಐ ಮತಗಳನ್ನು ವಿಭಜಿಸುವ ಸಾಮರ್ಥ್ಯವನ್ನು ಹೊಂದಿದೆ.