New Delhi : ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ(Union Ministry of Road Transport and Highways) ಏಪ್ರಿಲ್1 ರಿಂದ 15 ವರ್ಷಕ್ಕಿಂತ ಹಳೆಯದಾದ ಎಲ್ಲ ವಾಹನಗಳ ಸಂಚಾರ(Second hand car rules) ಮತ್ತು ನೋಂದಣಿಯನ್ನು ರದ್ದುಗೊಳಿಸುವ ಹೊಸ ನಿಯಮ ಜಾರಿಗೆ ತರಲು ಸಿದ್ದತೆ ನಡೆಸಿದ್ದು,
ಈ ಕುರಿತು ಇನ್ನು ಕೆಲವೇ ದಿನಗಳಲ್ಲಿ ಅಧಿಕೃತ ಅಧಿಸೂಚನೆ ಹೊರಬರುವ ಸಾಧ್ಯತೆಯಿದ್ದು, ಸೆಕೆಂಡ್ ಹ್ಯಾಂಡ್ ವಾಹನ(Second hand Vehicle) ಖರೀದಿಸುವವರು ಈ ಬಗ್ಗೆ ಎಚ್ಚರದಿಂದರಬೇಕು.
ಇದನ್ನೂ ಓದಿ: ಬೆಂಗಳೂರಿಗೆ ಮತ್ತೊಂದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಾಹನಗಳು (Second hand car rules) ಮತ್ತು ಸಾರ್ವಜನಿಕ ವಲಯದ ವಾಹನಗಳು ಸೇರಿದಂತೆ 15 ವರ್ಷಕ್ಕಿಂತ ಹಳೆಯದಾದ ಎಲ್ಲ ವಾಹನಗಳನ್ನು ಇನ್ನು ಮುಂದೆ ಚಲಾಯಿಸುವಂತಿಲ್ಲ.
ಅದರ ನೋಂದಣಿಯನ್ನು(Registration) ರದ್ದುಗೊಳಿಸಲಾಗುತ್ತದೆ. ಆದರೆ ಈ ನಿಯಮ ವಿಶೇಷ ಉದ್ದೇಶ ವಾಹನಗಳಿಗೆ ಅನ್ವಯವಾಗುವುದಿಲ್ಲ.
ಇನ್ನು ಹೊಸ ವಾಹನಗಳನ್ನು ಖರೀದಿಸುವವರಿಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು ಶೇ25ರಷ್ಟು ಸಬ್ಸಿಡಿಯನ್ನು(Subsidy) ನೀಡಿ,
ಹೊಸ ವಾಹನ ಖರೀದಿಗೆ ಪೋತ್ಸಾಹ ನೀಡಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳಿದೆ.

ಇದಕ್ಕೂ ಮುನ್ನ 2021-22ರ ಬಜೆಟ್ನಲ್ಲಿ(Budget) ವಾಹನಗಳಿಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು.
ಇದರ ಪ್ರಕಾರ ಖಾಸಗಿ ವಲಯದ ವಾಹನಗಳು 20 ವರ್ಷಗಳ ನಂತರ ಮತ್ತು ವಾಣಿಜ್ಯ ಬಳಕೆಯ ವಾಹನಗಳು 15 ವರ್ಷಗಳ ನಂತರ ಕಡ್ಡಾಯವಾಗಿ ಫಿಟ್ನೆಸ್ ಪರೀಕ್ಷೆಯನ್ನು(Fitness Test) ಮಾಡಿಸಲೇಬೇಕು ಎಂಬ ನಿಯಮ ರೂಪಿಸಲಾಗಿತ್ತು.
ಇನ್ನು ರಾಜ್ಯ ಸಾರಿಗೆ ಇಲಾಖೆ ಪ್ರಕಾರ, 2022ರ ಮಾರ್ಚ್ನಲ್ಲಿ 15 ವರ್ಷ ಹಳೆಯದಾದ 51.9 ಲಕ್ಷ ದ್ವಿಚಕ್ರ ವಾಹನಗಳು ಕರ್ನಾಟಕದಲ್ಲಿವೆ.
ಬೆಂಗಳೂರಿನಲ್ಲಿ 17.7 ಲಕ್ಷ ದ್ವಿಚಕ್ರ ವಾಹನಗಳಿವೆ. ಅದೇ ರೀತಿ ಕ್ರಮವಾಗಿ ಕಾರುಗಳು 12.5 ಲಕ್ಷ ಹಾಗೂ 5.9 ಲಕ್ಷ,
ಆಟೋಗಳು 3.1 ಲಕ್ಷ ಹಾಗೂ 1.3 ಲಕ್ಷ, ಟ್ರಕ್ಗಳು 1.7 ಲಕ್ಷ ಹಾಗೂ 1 ಲಕ್ಷ, ಬಸ್ಗಳು 61,045 ಮತ್ತು 19,532 ಇವೆ. 2023ರ ಏಪ್ರಿಲ್ ವೇಳೆ ಎಲ್ಲ ವಾಹನಗಳು 16 ವರ್ಷ ಹಳೆಯದಾಗಲಿವೆ. ಹೀಗಾಗಿ ಅವುಗಳ ನೋಂದಣಿ ರದ್ದು ಮಾಡಲು ಸರ್ಕಾರ ಸಿದ್ದತೆ ನಡೆಸಿದೆ.