ಕೊರೊನಾ ಹಾವಳಿ ಇದ್ದ ಕಾರಣ ರಾಜ್ಯ ಸರ್ಕಾರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಾಂಕವನ್ನು ನಿಗದಿಪಡಿಸಲು ಹಿಂದೆ ಸರಿದಿತ್ತು! ಪರೀಕ್ಷೆ ನಡೆಸಬೇಕೋ, ಬೇಡವೋ? ಅಥವಾ ಸಮಯ ನಿಗದಿಪಡಿಸುವುದು ಹೇಗೆ? ಕೊರೊನಾ ಹೆಚ್ಚಾದರೇ ಪರೀಕ್ಷೆ ನಡೆಸುವುದು ಹೇಗೆ ಎಂಬ ಅನೇಕ ಪ್ರಶ್ನೆಗಳು ಉದ್ಬವಗೊಂಡಿತ್ತು. ಸದ್ಯ ಇದೆಲ್ಲದಕ್ಕೂ ಈಗ ಸ್ಪಷ್ಟವಾಗಿ ಉತ್ತರಿಸಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ.
ಪರೀಕ್ಷಾ ದಿನಾಂಕವನ್ನು ನಿಗದಿಪಡಿಸಿ ಇಂದು ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸಕ್ತ 2022 ಏಪ್ರಿಲ್ 16 ರಿಂದ ಮೇ 06 ರವರೆಗೆ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳೆಲ್ಲರೂ ಪಿಯು ಪರೀಕ್ಷೆಗೆ ಪೂರ್ವ ಸಿದ್ದತೆಗಳಲ್ಲಿ ತೊಡಗಿಸಿಕೊಂಡಿದ್ದು, ಪರೀಕ್ಷಾ ದಿನಾಂಕವನ್ನು ನಿಗದಿಪಡಿಸಿ ಇಂದು ಪ್ರಕಟಣೆಯಲ್ಲಿ ತಿಳಿಸಿದೆ. ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಪರೀಕ್ಷೆಗಳ ದಿನಾಂಕ ಹೀಗಿದೆ.
ಏಪ್ರಿಲ್ 16 ರಂದು ಗಣಿತ
ಏಪ್ರಿಲ್ 18 ರಂದು ರಾಜ್ಯಶಾಸ್ತ್ರ/ ಸಂಖ್ಯಾಶಾಸ್ತ್ರ
ಏಪ್ರಿಲ್ 20 ರಂದು ಇತಿಹಾಸ/ ಭೌತಶಾಸ್ತ್ರ
ಏಪ್ರಿಲ್ 22 ರಂದು ತರ್ಕಶಾಸ್ತ್ರ
ಏಪ್ರಿಲ್ 23 ರಂದು ಮನಃಶಾಸ್ತ್ರ/ ಕೆಮಿಸ್ಟ್ರಿ
ಏಪ್ರಿಲ್ 25 ರಂದು ಅರ್ಥಶಾಸ್ತ್ರ
ಏಪ್ರಿಲ್ 26 ರಂದು ಹಿಂದಿ ಭಾಷೆ
ಏಪ್ರಿಲ್ 28 ರಂದು ಕನ್ನಡ ಭಾಷೆ
ಏಪ್ರಿಲ್ 30 ರಂದು ಸಮಾಜಶಾಸ್ತ್ರ/ ಕಂಪ್ಯೂಟರ್ ಸೈನ್ಸ್
ಮೇ 02 ರಂದು ಭೂಗೋಳ ಶಾಸ್ತ್ರ/ ಜೀವಶಾಸ್ತ್ರ
ಮೇ 04 ರಂದು ಇಂಗ್ಲೀಷ್ ಪರೀಕ್ಷೆ
ಒಟ್ಟಾರೆ ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ದ್ವಿತೀಯ ಪಿಯು ಪರೀಕ್ಷಾ ವೇಳಾಪಟ್ಟಿ ಬಿಡುಗಡೆಗೊಳಿಸಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಉತ್ತಮವಾಗಿ ಓದಿಕೊಂಡು ಸಿದ್ಧರಾಗಿ ಬರಲಿ ಎಂದು ಆಶಿಸುತ್ತೇವೆ.