- ಹೈಕಮಾಂಡ್ ನಿರ್ಧಾರದಿಂದ ರಾಜ್ಯ ರಾಜಕೀಯದಲ್ಲಿ ಸಂಚಲನ
- ಸಿಎಂ ಸಿದ್ಧರಾಮಯ್ಯ ಅವರ ಪ್ರಯತ್ನ ವಿಫಲ (Secret behind Rajanna Resignation)
- ವಿವಾದಾತ್ಮಕ ಹೇಳಿಕೆಯಿಂದ ಕಾಂಗ್ರೆಸ್ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದ ರಾಜಣ್ಣ
Bengaluru: ರಾಜ್ಯದ ರಾಜಕೀಯ ವಲಯದಲ್ಲಿ ನಿನ್ನೆ ದೊಡ್ಡ ಸಂಚಲನ ಉಂಟಾಗುವಂತಹ ಬೆಳವಣಿಗೆ ನಡೆದಿದೆ.(Secret behind Rajanna Resignation)
ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಸಂಪುಟದಲ್ಲಿ ಸಹಕಾರ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆಎನ್ ರಾಜಣ್ಣ (K.N.Rajanna) ಅವರನ್ನು ಅಕಸ್ಮಾತ್ ಸಂಪುಟದಿಂದ ವಜಾಗೊಳಿಸಲಾಗಿದೆ.

ರಾಜಣ್ಣ ಅವರ ನಿರ್ಗಮನ ಕಾಂಗ್ರೆಸ್ (Congress) ಶಿಬಿರದಲ್ಲೂ, ವಿರೋಧ ಪಕ್ಷಗಳಲ್ಲೂ ಚರ್ಚೆಗೆ ಕಾರಣವಾಗಿತ್ತು.ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಹೊಸ ರಾಜಕೀಯ ಸಮೀಕರಣಗಳ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ.
ಇನ್ನು ಕಾಂಗ್ರೆಸ್ ಹೈಕಮಾಂಡ್ ನಿನ್ನೆ ಸಂಜೆ 6 ಗಂಟೆಯೊಳಗೆ ರಾಜಣ್ಣ ಅವರ ರಾಜೀನಾಮೆ ಪಡೆಯುವಂತೆ ಸಿಎಂ ಸಿದ್ದರಾಮಯ್ಯನವರಿಗೆ ಸೂಚನೆ ನೀಡಿತ್ತು.
ಅವರು ರಾಜೀನಾಮೆ ನೀಡದಿದ್ದರೆ, ಪಕ್ಷದಿಂದಲೇ ಉಚ್ಛಾಟನೆ ಮಾಡುವ ನಿರ್ಧಾರ ಹೈಕಮಾಂಡ್ (High Command) ಮಟ್ಟದಲ್ಲಿ ಕೈಗೊಳ್ಳಲಾಗಿತ್ತು.
ಇದರಿಂದಾಗಿ ಸಿಎಂ ಸಿದ್ದರಾಮಯ್ಯ ತಕ್ಷಣ ರಾಜಣ್ಣ ಅವರೊಂದಿಗೆ ಮಾತುಕತೆ ನಡೆಸಿ, ಉಚ್ಛಾಟನೆಯ ಅಪಮಾನ ತಪ್ಪಿಸಲು ಸ್ವಯಂ ರಾಜೀನಾಮೆ ನೀಡುವಂತೆ ಮನವರಿಕೆ ಮಾಡಿದ್ದರು.
ಅಂತಿಮವಾಗಿ, ರಾಜಣ್ಣ ತಮ್ಮ ರಾಜೀನಾಮೆ ಪತ್ರವನ್ನು ಸಿಎಂನ ಆಪ್ತ ಕಾರ್ಯದರ್ಶಿಗೆ ಹಸ್ತಾಂತರಿಸಿ ವಿಧಾನಸೌಧದಿಂದ ಹೊರಟಿದ್ದರು.
ನಂತರದಲ್ಲಿ ಆ ರಾಜೀನಾಮೆಯನ್ನು ಸಿಎಂ ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಿದರು.(Secret behind Rajanna Resignation)
ರಾಜಭವನದಿಂದ ಬಂದ ಅನುಮೋದನೆ ಪ್ರತಿಯನ್ನು ತಕ್ಷಣವೇ ರಾಹುಲ್ ಗಾಂಧಿಯ ಕಚೇರಿಗೂ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ರಾಜಣ್ಣ ಅವರು ಸಿಎಂನ ಆಪ್ತ ಸಹೋದ್ಯೋಗಿಗಳಲ್ಲಿ ಒಬ್ಬರಾಗಿದ್ದು, ಅವರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲು ಸಿಎಂ ಹಲವು ಪ್ರಯತ್ನಗಳನ್ನು ನಡೆಸಿದ್ದರು ಎನ್ನಲಾಗಿದೆ. ಆದರೆ, ಹೈಕಮಾಂಡ್ ನಿರ್ಧಾರದ ಮುಂದೆ ಸಿಎಂ ಸಹ ನಿಲ್ಲಲು ಸಾಧ್ಯವಾಗಲಿಲ್ಲ.
ಇತ್ತೀಚಿನ ದಿನಗಳಲ್ಲಿ ರಾಜಣ್ಣ ನೀಡಿದ್ದ ಕೆಲವು ಹೇಳಿಕೆಗಳು ಕಾಂಗ್ರೆಸ್ ಹೈಕಮಾಂಡ್‌ಗೆ ಅಸಮಾಧಾನ ಉಂಟುಮಾಡಿದ್ದವು. ವಿಶೇಷವಾಗಿ, ಮತದಾರರ ಪಟ್ಟಿಯ ವಿಚಾರದಲ್ಲಿ ತಮ್ಮದೇ ಪಕ್ಷದ ನಾಯಕರ ವಿರುದ್ಧ ಅವರು ಮಾಡಿದ್ದ ಟೀಕೆ ದೊಡ್ಡ ವಿವಾದಕ್ಕೆ ಕಾರಣವಾಯಿತು.
ಆಗಸ್ಟ್ 8ರಂದು ಬೆಂಗಳೂರಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ (Rahul Gandhi) , ಮಹದೇವಪುರ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಜಣ್ಣ, “ನಾವೇ ಮೊದಲೇ ಮತಪಟ್ಟಿಯನ್ನು ಪರಿಶೀಲಿಸಬೇಕಿತ್ತು. ಈಗ ಆ ವಿಷಯ ಎತ್ತುವುದು ಸರಿಯಲ್ಲ. ನಮ್ಮ ಸರ್ಕಾರವೇ ಅಧಿಕಾರದಲ್ಲಿದ್ದಾಗ ಪಟ್ಟಿಯನ್ನು ಸಿದ್ಧಪಡಿಸಿದ್ದೇವೆ, ಆಗ ನಮ್ಮ ನಾಯಕರು ಏಕೆ ಕ್ರಮ ಕೈಗೊಂಡಿಲ್ಲ?” ಎಂದು ಹೇಳಿಕೆ ನೀಡಿದ್ದರು.
ಈ ಮಾತುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಬಿಜೆಪಿಗೆ (BJP) ಕಾಂಗ್ರೆಸ್ ವಿರುದ್ಧ ಟೀಕೆಗೆ ಆಯುಧವಾಯಿತು.ಬಿಜೆಪಿ ನಾಯಕರು, “ನಿಮ್ಮದೇ ಸಚಿವರು ನಿಮ್ಮ ಸರ್ಕಾರದ ದುರ್ಬಲತೆ ಬಯಲಿಗೆಳೆಯುತ್ತಿದ್ದಾರೆ” ಎಂದು ಲೇವಡಿ ಮಾಡಿದರು.
ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಿ, ರಾಜಣ್ಣ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಅಂತಿಮವಾಗಿ, ರಾಜೀನಾಮೆ ಅಥವಾ ಉಚ್ಛಾಟನೆ ಎಂಬ ಎರಡು ಆಯ್ಕೆಗಳು ರಾಜಣ್ಣ ಮುಂದಿಟ್ಟುಕೊಳ್ಳಲಾಯಿತು.
ಪಕ್ಷದ ಗೌರವ ಕಾಪಾಡಿಕೊಳ್ಳುವ ಉದ್ದೇಶದಿಂದ ಅವರು ರಾಜೀನಾಮೆಯನ್ನು ಆಯ್ಕೆ ಮಾಡಿಕೊಂಡರು ಎನ್ನಲಾಗುತ್ತಿದೆ.
ಇದನ್ನು ಓದಿ : ರಾಜ್ಯ ಶಿಕ್ಷಣ ನೀತಿ ವರದಿ: ಹಿಂದಿಗೆ ‘ಕೊಕ್’, ದ್ವಿಭಾಷಾ ಸೂತ್ರಕ್ಕೆ ಶಿಫಾರಸು
ಇನ್ನು ರಾಜಣ್ಣ ಮುಂದಿನ ದಿನಗಳಲ್ಲಿ ಪಕ್ಷದಲ್ಲೇ ಮುಂದುವರಿಯುತ್ತಾರಾ ಅಥವಾ ಹೊಸ ರಾಜಕೀಯ ಅಧ್ಯಾಯ ಆರಂಭಿಸುತ್ತಾರಾ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. (Secret behind Rajanna Resignation)