Visit Channel

ಗರ್ಭಿಣಿ ಹೆಂಡತಿಯನ್ನು ಹೀಗೆ ನೋಡಿಕೊಂಡರೆ ಆಕೆಯ ಖುಷಿಗೆ ಪಾರವೇ ಇಲ್ಲ

vijaya-karnataka

ಹೆಣ್ಣಿನ ಜೀವನದಲ್ಲಿ ಗರ್ಭಾವಸ್ಥೆಯು ಒಂದು ಅದ್ಭುತ ಹಂತ. ಈ ಸಮಯದಲ್ಲಿ ಆಕೆಗೆ ಹೆಚ್ಚು ಕಾಳಜಿ ಹಾಗೂ ಬೆಂಬಲ ಅಗತ್ಯವಾಗಿರುತ್ತದೆ. ಈ ಕಾಳಜಿ ತನ್ನ ಪತಿಯಿಂದಲೇ ಬಂದರೆ ಆಕೆಯ ಆಯಾಸ, ನೋವೆಲ್ಲವೂ ಮಾಯವಾಗುವುದು ಗ್ಯಾರಂಟಿ. ಏಕೆಂದರೆ ಗಂಡನ ಆರೈಕೆ, ಪ್ರೀತಿಗೆ ಅಷ್ಟು ಬೆಲೆಯಿದೆ. ನಿಮ್ಮ ಮಡದಿ ಗರ್ಭಿಣಿಯಾಗಿದ್ದರೆ, ಅವಳನ್ನು ಸಂತೋಷಪಡಿಸುವ ಮಾರ್ಗವನ್ನು ನೀವು ಹುಡುಕುತ್ತಿದ್ದರೆ, ಈ ಲೇಖನ ನಿಮಗಾಗಿ. ಈ ಟಿಪ್ಸ್ ಗಳಿಂದ ನಿಮ್ಮ ಗರ್ಭಿಣಿ ಹೆಂಡತಿಗೆ ಸ್ಪೆಷಲ್ ಫೀಲ್ ನೀಡಬಹುದು.

ಗರ್ಭಿಣಿ ಹೆಂಡತಿಗೆ ಪ್ರೀತಿಯನ್ನು ನೀಡುವ ವಿವಿಧ ವಿಧಾನಗಳನ್ನು ಈ ಕೆಳಗೆ ನೀಡಲಾಗಿದೆ:

ಲೈಫಲ್ಲಿ ಕ್ರಿಯೆಟವ್ ಆಗಿರಿ:
ನಿಮಗೆ ಬರೆಯಲು ಸಾಧ್ಯವಾದರೆ, ಸುಂದರವಾದ ಗ್ರೀಟಿಂಗ್ ಕಾರ್ಡ್‌ನಲ್ಲಿ ಪ್ರೇಮ ಸಾಲುಗಳನ್ನು ಬರೆದು ಕೊಡಿ. ಅಥವಾ ನಿಮ್ಮ ಹೆಂಡತಿಗೆ ಸುಂದರವಾದ ಚಿತ್ರ ಮಾಡಿಕೊಡಿ. ಇದು ಅವಳಿಗೆ ನೀವು ಹೆಚ್ಚುವರಿ ಗಮನವನ್ನು ನೀಡುತ್ತಿದ್ದೀರಾ ಎಂಬ ಭಾವನೆ ಮೂಡಿಸುತ್ತದೆ. ಜೊತೆಗೆ ನೀವೆಷ್ಟು ಆಕೆಯನ್ನು ಪ್ರೀತಿಸುತ್ತಿದ್ದೀರಾ ಎಂಬುದನ್ನು ಅರ್ಥ ಮಾಡಿಸುವುದು.

ಊಟದ ನಂತರ ನೀವೇ ಸ್ವಚ್ಛಗೊಳಿಸಿ:
ಗರ್ಭಿಣಿಯಾಗಿರುವುದರಿಂದ, ನಿಮ್ಮ ಹೆಂಡತಿಗೆ ಬಯಕೆಗಳು ಹೆಚ್ಚಾಗಿರುತ್ತವೆ. ಆದ್ದರಿಂದ, ಅವಳಿಗೇನು ಇಷ್ಟವೋ ಅದನ್ನು ತಯಾರಿಸಿ ಕೊಡಿ ಜೊತೆಗೆ ಪಾತ್ರೆಗಳನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ. ಅವಳ ನೆಚ್ಚಿನ ಸಂಗೀತವನ್ನು ಪ್ಲೇ ಮಾಡಿ, ಕೆಲವು ಮೇಣದಬತ್ತಿಗಳನ್ನು ಬೆಳಗಿಸಿ ಮತ್ತು ಅವಳಿಗೆ ಸೇವೆ ಸಲ್ಲಿಸಿ, ಇದರಿಂದ ನಿಮ್ಮ ಗರ್ಭಿಣಿ ಹೆಂಡತಿ ಖುಷಿಯಾಗುವುದರಲ್ಲಿ ಎರಡು ಮಾತಿಲ್ಲ.

ಅವಳ ಕಾಲು ಮಸಾಜ್ ಮಾಡಿ:
ನಿಮ್ಮ ಗರ್ಭಿಣಿ ಹೆಂಡತಿಗೆ ಕೆಲವು ಸಾರಭೂತ ತೈಲಗಳಿಂದ ಉತ್ತಮವಾಗಿ ಕಾಲು ರಬ್ ನೀಡಿ. ಇದು ಅವರಿಗೆ ವಿಶ್ರಾಂತಿ ನೀಡುವುದಲ್ಲದೇ ಒತ್ತಡವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದು ಗರ್ಭಾವಸ್ಥೆಯಲ್ಲಿ ಹೆಚ್ಚು ಅಗತ್ಯವಾಗಿರುತ್ತದೆ. ಗರ್ಭಿಣಿ ಮಹಿಳೆಯ ಚೈತನ್ಯವನ್ನು ಹೆಚ್ಚು ಮಾಡಲು ಕಾಲು ರಬ್ ಮಾಡುವುದು ತುಂಬಾ ಮುಖ್ಯ.

ಅವಳನ್ನು ಮಲಗಲು ಬಿಡಿ:
ಗರ್ಭಿಣಿಯರಿಗೆ ದೈಹಿಕ ಬಳಲಿಕೆ ಇರುತ್ತದೆ. ಆದ್ದರಿಂದ ನೀವು ಮನೆಗೆಲಸಗಳನ್ನು ಮಾಡುವಾಗ ಅಥವಾ ಇನ್ನೇನಾದರೂ ಮಾಡಬೇಕಾದರೆ ಅವರಿಗೆ ಒಳಗೆ ಮಲಗಲು ಹೇಳಿ. ಇದರಿಂದಾಗಿ ಅಗತ್ಯವಿರುವ ವಿಶ್ರಾಂತಿಯನ್ನು ಪಡೆದುಕೊಳ್ಳಬಹುದು ಮತ್ತು ಉಲ್ಲಾಸವನ್ನು ಅನುಭವಿಸಬಹುದು.

ಅವಳಿಗೆ ಸ್ಪಾ ದಿನವನ್ನು ನಿಗದಿಪಡಿಸಿ:
ಗರ್ಭಿಣಿ ಮಹಿಳೆ ಸ್ಪಾದಲ್ಲಿ ಕಳೆಯೋ ಒಂದು ದಿನದಿಂದ ಮತ್ತಷ್ಟು ಮುದ್ದು ಮತ್ತು ಪುನರ್ಯೌವನಗೊಳ್ಳುತ್ತಾಳೆ. ಆದ್ದರಿಂದ ಆಕೆಗಾಗಿ ಆ ದಿನವನ್ನು ನಿಗದಿಪಡಿಸಿ ಕರೆದೊಯ್ಯರಿ. ಅಲ್ಲದೆ, ಆಧುನಿಕ ಜಗತ್ತು ಹೋಮ್ ಸ್ಪಾ ಸೇರಿದಂತೆ ಹಲವಾರು ಸೌಲಭ್ಯಗಳನ್ನು ನೀಡುತ್ತದೆ. ಆದ್ದರಿಂದ ನಿಮ್ಮ ಹೆಂಡತಿ ಮನೆಯಲ್ಲಿಯೇ ಸ್ಪಾ ವ್ಯವಸ್ಥೆ ಪಡೆಯಬಹುದು.

ವೀಕೆಂಡ್ ಗೆ ಹೊರಕರೆದುಕೊಂಡು ಹೋಗಿ:
ಇದು ನಿಮ್ಮಿಬ್ಬರಿಗೂ ಅತ್ಯಂತ ನಿರಾಳತೆ ನೀಡುತ್ತದೆ. ಇದಕ್ಕೆ ಜಾಸ್ತಿ ಏನು ಬೇಡ. ಹತ್ತಿರದಲ್ಲೇ ಎಲ್ಲೋ ಇರುವ ಜಾಗಕ್ಕೆ ಒಟ್ಟಿಗೆ ಹೋಗಿ ಇದರಿಂದ ಪರಸ್ಪರ ಗುಣಮಟ್ಟದ ಸಮಯವನ್ನು ಕಳೆಯಬಹುದು, ಅದು ಮಗು ಜನಿಸಿದ ನಂತರ ನಿಮಗೆ ಸಿಗುವುದಿಲ್ಲ. ಆದ್ದರಿಂದ ಸಿಗುವ ಸಮಯವನ್ನು ಆನಂದಿಸಿ.

ಎಲ್ಲದಕ್ಕಿಂತ ಮುಖ್ಯವಾಗಿ ಅವಳನ್ನು ಪ್ರೀತಿಸಿ:
ಇದು ಎಲ್ಲದಕ್ಕಿಂತ ಮುಖ್ಯ. ಅವಳಿಗೆ ಮುತ್ತಿಡಿ, ಅವಳನ್ನು ತಬ್ಬಿಕೊಳ್ಳಿ, ಅವಳೊಂದಿಗೆ ಮುದ್ದಾಡಿ, ಮತ್ತು ಮಗುವಿನ ಕುರಿರು ನಿಮ್ಮ ಮುಂದಿನ ಯೋಜನೆಗಳನ್ನು ಅವಳೊಂದಿಗೆ ಹಂಚಿಕೊಳ್ಳಿ. ದೈಹಿಕ ಸ್ಪರ್ಶವು ಆಕೆಗೆ ಹಿತವನ್ನು ನೀಡುವುದು. ನಿಮ್ಮ ಮಗುವನ್ನು ಹೊತ್ತಿರುವ ಆಕೆಗೆ ನೀವು ಸ್ನಾನ ಮಾಡಿಸುವುದರಿಂದ ಆಕೆಯ ಸಂತೋಷ, ನೀವಿಟ್ಟಿರುವ ಪ್ರೀತಿ ಎಂತಹುದು ಎಂದು ತಿಳಿಯುವುದು.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.