ಬೆಂಗಳೂರು, ಜ. 29: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಬಿಜೆಪಿ ಸೇರಿರುವುದು ಗೊತ್ತಿರುವ ವಿಷಯ. ಸದ್ಯ ಅವರು ತಮಿಳುನಾಡು ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ.
ಅಣ್ಣಾಮಲೈ ರಾಜೀನಾಮೆ ಕೊಟ್ಟ ರಾಜಕೀಯ ಪ್ರವೇಶ ಮಾಡಿದ್ದರ ಬಗ್ಗೆ ಹಿಂದೆ ಚರ್ಚೆ ನಡೆದಿದ್ದವು. ಕೆಲ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದೂ ಉಂಟು.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೊವೊಂದು ಅಣ್ಣಾಮಲೈ ಅವರ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆಗೆ ಕಾರಣವಾಗಿದೆ.
ಬಿಜೆಪಿ ನಾಯಕರಿರುವ ಕೋಣೆಯಲ್ಲಿ ಅಣ್ಣಾ ಮಲೈ ಅವರು ಕೈ ಕಟ್ಟಿ ತಲೆ ಬಾಗಿರುವ ಫೋಟೊವೊಂದು ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರು ಇದರ ಬಗ್ಗೆ ಕಮೆಂಟ್‌ಗಳ ಮಳೆ ಸುರಿಸಿದ್ದಾರೆ. ಐಪಿಎಸ್ ಅಧಿಕಾರಿಯಾಗಿದ್ದಾಗ ‘ಸಿಂಗಂ’ ಎಂದು ಖ್ಯಾತಿಯಾಗಿದ್ದ ಅಣ್ಣಾ ಮಲೈ ಬಿಜೆಪಿಗೆ ಸೇರಿ ಇಲಿಯಾದ್ರಾ? ಎಂಬ ಪ್ರಶ್ನೆಗಳು ಕೂಡ ಕೇಳಿಬರುತ್ತಿದೆ.

ಈ ನಡುವೆ, ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರೋ ತಮ್ಮ ಫೋಟೋ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಂದನಾರ್ಪಣೆ ಹೇಳುತ್ತಿರುವ ನನ್ನ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕದ ಸ್ನೇಹಿತರಿಂದ ಇಷ್ಟೊಂದು ಆಕ್ರೋಶ ವ್ಯಕ್ತವಾಗುತ್ತದೆ ಎಂದು ಭಾವಿಸಿರಲಿಲ್ಲ. ಈ ಕಾರ್ಯಕ್ರಮದಲ್ಲಿ ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಹ ಭಾಗವಹಿಸಿದ್ದರು. ‘ಆಲ್ ಈಸ್ ವೆಲ್ ಫ್ರೆಂಡ್ಸ್’ ಎಂದಿದ್ದಾರೆ.