Chitradurga : ಮುರುಘಾ ಮಠದ ಹಾಸ್ಟೆಲ್‌ನಲ್ಲಿ ಅಪ್ರಾಪ್ತ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ,(Seer Basavaprabhu to Murugha Mutt)
ಎಸಗಿರುವುದಾಗಿ ಶಿವಮೂರ್ತಿ ಶ್ರೀಗಳ ಮೇಲೆ ಮೈ`ಸೂರು ನಗರದ (Mysuru City) ಪೊಲೀಸ್ ಠಾಣೆಯಲ್ಲಿ (Police Station) ಪ್ರಕರಣ ದಾಖಲಾಗಿ ಬಳಿಕ ಚಿತ್ರದುರ್ಗಕ್ಕೆ ಪ್ರಕರಣ ಹಸ್ತಾಂತರವಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಮಠದ ಶಿವಮೂರ್ತಿ ಶ್ರೀಯನ್ನು ಕಳೆದ ಸೆಪ್ಟೆಂಬರ್ 2ರಂದು ಚಿತ್ರದುರ್ಗದ ಪೊಲೀಸರು ಬಂಧಿಸಿದ್ದರು. ಇನ್ನು, ಈ ಪ್ರಕರಣದಲ್ಲಿ ಮುರುಘಾ ಶ್ರೀಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈ ನಡುವೆ ಕಳೆದ ಎರಡು ದಿನಗಳ ಹಿಂದೆಯಷ್ಟೇ ಮತ್ತಿಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಕೂಡ ಮುರುಘಾ ಶ್ರೀ ವಿರುದ್ಧ ಕೇಳಿಬಂದಿತ್ತು.
ಸಧ್ಯ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಶಿವಮೂರ್ತಿ ಮುರುಘಾ ಶರಣರು, ಮಠದ ಪೂಜೆ, ಸೇವಾ,
ಧಾರ್ಮಿಕ ಕೈಂಕರ್ಯ ನಡೆಸಿಕೊಂಡು ಹೋಗಲು ದಾವಣಗೆರೆ (Davangere) ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಅವರನ್ನು ನೇಮಕ ಮಾಡಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.
ಇದನ್ನೂ ಓದಿ : https://vijayatimes.com/pm-kisan-samman-sammelan-2022/
ಮಠದ ದೈನಂದಿನ (Seer Basavaprabhu to Murugha Mutt) ಪೂಜಾ ಕೈಂಕರ್ಯ ಹಾಗೂ ಚಟುವಟಿಕೆಗಳ ಉಸ್ತುವಾರಿಯನ್ನು ನೋಡಿಕೊಳ್ಳಲು ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮಿಗಳನ್ನು ಶರಣರು ನೇಮಕ ಮಾಡಿದ್ದಾರೆ.
ಮಠದ ಉಸ್ತುವಾರಿ ನೋಡಿಕೊಳ್ಳಲು ತಾತ್ಕಾಲಿಕವಾಗಿ ಯಾರನ್ನಾದರೂ ನೇಮಿಸಲು ಅನುಮತಿ ನೀಡುವಂತೆ ಕೋರಿ ಹೈಕೋರ್ಟ್ (Highcourts) ಮೊರೆ ಹೋಗಿದ್ದ ಮುರುಘಾ ಶರಣರಿಗೆ ಅಕ್ಟೋಬರ್ 12 ರಂದು ನ್ಯಾಯಾಲಯ ಷರತ್ತುಬದ್ದ ಅನುಮತಿ ನೀಡಿತ್ತು.
ಅದರಂತೆ ಅಕ್ಟೋಬರ್ 15 ರೊಳಗೆ ಪ್ರಕ್ರಿಯೆ ಮುಗಿಸುವಂತೆ ಆದೇಶದಲ್ಲಿ ತಿಳಿಸಿತ್ತು. ಹಾಗಾಗಿ, ಮಠದ ಆಡಳಿತ ಮಂಡಳಿ ಸದಸ್ಯರು, ವಕೀಲರು,
ಕಾರಾಗೃಹ ಅಧೀಕ್ಷಕರ ಸಮ್ಮುಖದಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಸವಪ್ರಭು ಸ್ವಾಮಿಗಳು,
“ಗುರುಗಳು ನನಗೆ ಮಠದ ದೈನಂದಿನ ಚಟುವಟಿಕೆಗಳನ್ನು ನೋಡಿಕೊಳ್ಳಲು ಆದೇಶ ನೀಡಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಮಠವನ್ನು ಮುನ್ನಡೆಸುವ ಅವಕಾಶ ದೊರೆತಿದೆ,