- ಹೊಸವರ್ಷಕ್ಕೆಂದು ಡ್ರಗ್ಸ್ ಶೇಖರಿಸುತ್ತಿದ್ದವರ ಹೆಡೆಮುರಿ ಕಟ್ಟಿದ ಸಿಸಿಬಿ (Seizure of drugs worth Rs 28 crore) ಪೊಲೀಸರು
- 28 ಕೋಟಿ ಮೌಲ್ಯದ ಮಾದಕ ವಸ್ತುಗಳ ಪತ್ತೆ: ವಿದೇಶಿ ಪೆಡ್ಲರ್‌ಗಳಿಗೆ ಲಾಕ್‌ಅಪ್ ಭಾಗ್ಯ
- ವೀಸಾದ ದುರುಪಯೋಗ ಮಾಡಿ ನಗರದಲ್ಲಿ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಪ್ರಜೆಗಳ ಬಂಧನ
Bengaluru: ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮದ ಮುನ್ನವೇ ದೊಡ್ಡ ಮಟ್ಟದ ಡ್ರಗ್ಸ್ ಹಾವಳಿ ತಡೆಗಟ್ಟಲು ಸಿಸಿಬಿ ಪೊಲೀಸರು ಎಲ್ಲೆಡೆ ಚೆಕಿಂಗ್ ಆರಂಭಿಸಿದ್ದಾರೆ .

ನ್ಯೂ ಇಯರ್ ವೇಳೆ ಡ್ರಗ್ಸ್ ಬೇಡಿಕೆ ತೀವ್ರವಾಗುತ್ತದೆ ಎಂಬ ಸೂತ್ರವನ್ನು ಮುಂದಿಟ್ಟುಕೊಂಡು ಹಲವು ದಿನಗಳಿಂದ (Seizure of drugs worth Rs 28 crore) ಶಂಕಾಸ್ಪದ ಚಟುವಟಿಕೆಗಳ ಮೇಲೆ
ನಿಗಾವಹಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ತಂಡ ಪ್ರತ್ಯೇಕವಾಗಿ ಎರಡು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ ಒಟ್ಟು 28 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಈ ಕಾರ್ಯಾಚರಣೆಯು ಬೆಂಗಳೂರು ನಗರದಲ್ಲಿ ಮಾದಕ ದ್ರವ್ಯ ಸಾಗಾಣಿಕೆ (Material transportation) ಮತ್ತು ಪೆಡ್ಲಿಂಗ್ (peddling) ಜಾಲದ ವ್ಯಾಪ್ತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ.
ಮೊದಲ ಪ್ರಕರಣದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಬೇಡಿಕೆ ಹೊಂದಿರುವ ಎಂಡಿಎಂಎ (MDMA) ಎಂಬ ಸಂಶ್ಲೇಷಿತ ಮಾದಕ ವಸ್ತುವಿನ 10 ಕೆಜಿ ಪ್ರಮಾಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇದರ ಅಂದಾಜು ಮೌಲ್ಯವೇ 20 ಕೋಟಿಗೂ ಅಧಿಕ. ಆರೋಪಿಗಳು ಟೀ ಪುಡಿ ಪ್ಯಾಕೆಟ್‌ಗಳಿಗೆ ಇದು ತುಂಬಿಸಿಕೊಂಡು ಸಾಮಾನ್ಯ ಆಹಾರ ಪದಾರ್ಥಗಳ ಸಾಗಾಟದಂತೆ ಮರೆಮಾಡಿ ಮಾರಾಟ ಮಾಡಲು
ಪ್ರಯತ್ನಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇನ್ನು ಎರಡನೇ ಪ್ರಕರಣದಲ್ಲಿ, ವಿದೇಶದಿಂದ ಬಂದಿದ್ದ 8 ಕೆಜಿ ಹೈಡ್ರೋ ಗಾಂಜಾವನ್ನು ಚಾಮರಾಜಪೇಟೆ ಅಂಚೆ ಕಚೇರಿಯಲ್ಲಿ ಪರಿಶೀಲನೆ ಮಾಡುವ ವೇಳೆ ಪತ್ತೆ ಹಚ್ಚಲಾಗಿದೆ. ಇದರ ಮೌಲ್ಯ ಸುಮಾರು 8 ಕೋಟಿಯಷ್ಟಿದೆ. ಈ ಎರಡೂ ಪ್ರಕರಣಗಳು,
ಬೇರೆ ಬೇರೆ ಜಾಲಗಳು ಹೊಸ ವರ್ಷದ ವಿಶೇಷ ಬೇಡಿಕೆಯನ್ನು ಬಳಸಿಕೊಳ್ಳಲು ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಸಂಗ್ರಹಿಸುತ್ತಿದ್ದುದನ್ನು ಕಾಣಬಹುದಾಗಿದೆ.
ಈ ಜಾಲದಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಸಿಸಿಬಿ ಬಂಧಿಸಿದೆ. ಇವರಲ್ಲಿ ಒಬ್ಬಳು ತಾಂಜೇನಿಯಾ ಮೂಲದ ನ್ಯಾನ್ಸಿ, ಮತ್ತೊಬ್ಬ ನೈಜೀರಿಯಾದ ಎಮುನಲ್ಅರೆಂಜಿ ಇಡಿಕೋ.
ನ್ಯಾನ್ಸಿ ಮೂವರು ವರ್ಷಗಳ ಹಿಂದೆ ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದಿದ್ದು, ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದು, ನಗರದಲ್ಲಿ ಸಕ್ರಿಯ ಪೆಡ್ಲರ್ ಆಗಿದ್ದಾಳೆ.
ಅವಳಿಗೆ ಸಹಕರಿಸುತ್ತಿದ್ದ ಮತ್ತೊಬ್ಬ ಸ್ಥಳೀಯ ಆರೋಪಿ ಪರಾರಿಯಾಗಿದ್ದಾನೆ. ಮತ್ತೊಂದೆಡೆ, ಎಮುನಲ್ (Emunal) ನಾಲ್ಕು ವರ್ಷಗಳ ಹಿಂದೆ ವ್ಯಾಪಾರ ವೀಸಾದಡಿ ಭಾರತಕ್ಕೆ ಆಗಮಿಸಿ ಸಿದ್ದಾಪುರ ಪ್ರದೇಶದಲ್ಲಿ
ವಾಸಿಸುತ್ತಿದ್ದಾನೆ. ದೆಹಲಿಯಿಂದ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ತರಿಸಿ ತನ್ನ ನಿವಾಸದಲ್ಲೇ ಸಂಗ್ರಹಿಸುತ್ತಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ದೃಢಪಟ್ಟಿದೆ. ಇನ್ನು ಬಂಧಿತರು ಬೆಂಗಳೂರಿನ ಯುವಕರು, ಕಾಲೇಜು
ವಿದ್ಯಾರ್ಥಿಗಳು ಮತ್ತು ಐಟಿ-ಬಿಟಿ (IT-BT) ಉದ್ಯೋಗಿಗಳನ್ನು ಮುಖ್ಯ ಗುರಿಯಾಗಿಸಿಕೊಂಡಿದ್ದರು. ಇವರು ಹೆಚ್ಚಿನ ಬೆಲೆಗೆ ಡ್ರಗ್ಸ್ ಮಾರಾಟ ಮಾಡುವ ಮೂಲಕ ದೊಡ್ಡ ಮಟ್ಟದ ಲಾಭ ಗಳಿಸುತ್ತಿದ್ದರು. ವಿಶೇಷವಾಗಿ
ನ್ಯೂ ಇಯರ್ ಆಚರಣೆಗಳು ಹತ್ತಿರವಾಗುತ್ತಿದ್ದಂತೆಯೇ ಡ್ರಗ್ಸ್ ಬೇಡಿಕೆ ಹೆಚ್ಚುತ್ತದೆ ಹಾಗಾಗಿ ಈ ಅವಧಿಯನ್ನು ಬಳಸಿಕೊಳ್ಳಲು ಸಿದ್ಧತೆ ನಡೆಸಿದ್ದರು. ಡ್ರಗ್ಸ್ ಪೂರೈಕೆಯನ್ನು ವಿಸ್ತರಿಸಲು ಯತ್ನಿಸುತ್ತಿದ್ದ ಈ ಜಾಲದ ಮೇಲೆ
ಸಿಸಿಬಿ ಪೊಲೀಸರು ನಿಗಾದಿಟ್ಟಿದ್ದರಿಂದ, ಕಾಲಕ್ಕೆ ಸರಿಯಾಗಿ ದಾಳಿ ನಡೆಸಲು ಸಾಧ್ಯವಾಯಿತು. ಸಿಸಿಬಿ ಮತ್ತು ಮಾದಕ ದ್ರವ್ಯ ನಿಗ್ರಹ ದಳ ಸೇರಿ ಸಂಯುಕ್ತವಾಗಿ ನಡೆಸಿದ ಈ ಕಾರ್ಯಾಚರಣೆ, ನಗರದ ಮನರಂಜನಾ
ವಲಯದಲ್ಲಿ ಡ್ರಗ್ಸ್ ಹರಡುವಿಕೆಯನ್ನು ತಡೆಯಲು ಮಹತ್ವದ ಹೆಜ್ಜೆಯಾಗಿದೆ.
ಇದನ್ನು ಓದಿ : SSC Recruitment: 25,487 ಕಾನ್ಸ್‌ಟೇಬಲ್ ಹುದ್ದೆಗೆ ನೇಮಕಾತಿ ಆರಂಭ