Belagavi : ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ(Send back Sathish Jarkiholi) ʼಹಿಂದೂʼ ಪದದ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು(Controversial Statement) ಖಂಡಿಸಿ, ರಾಜ್ಯ ಬಿಜೆಪಿ ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತೆ ಅನೇಕ ಕಡೆ ಪ್ರತಿಭಟನೆಗಳನ್ನು ನಡೆಸಿದೆ.
ಕೂಡಲೇ ಸತೀಶ್ ಜಾರಕಿಹೊಳಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದೆ.

ಇನ್ನೊಂದೆಡೆ ಈ ಕುರಿತು ಟ್ವೀಟ್(Tweet) ಮಾಡಿರುವ ಬಿಜೆಪಿ(BJP), ಇದು ದಾರ್ಷ್ಟ್ಯದ ಪರಮಾವಧಿಯಿದು.
ಈ ದೇಶ, ಈ ಮಣ್ಣಿನ ಅಸ್ಮಿತೆಯಾಗಿರುವ ಹಿಂದೂ ಎಂಬ ಪದವನ್ನೇ ಅಶ್ಲೀಲ ಎಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷರು ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ.
ಹಿಂದೂ ಧರ್ಮದ ವಿರುದ್ಧ ಕಾಂಗ್ರೆಸ್(Congress) ಸಮರ ಸಾರುತ್ತಿದೆಯೇ? ಕೆಪಿಸಿಸಿ ಕಾರ್ಯಾಧ್ಯಕ್ಷನ ಹೇಳಿಕೆಯನ್ನು ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮರ್ಥಿಸಿದ್ದಾರೆ.
ಹಿಂದೂ ಧರ್ಮವನ್ನು ತೆಗಳುವುದು ಕಾಂಗ್ರೆಸ್ ಪಕ್ಷದ ಚುನಾವಣಾ ಕಾರ್ಯಸೂಚಿಯೇ? ಅದೇ ಆಗಿದ್ದಲ್ಲಿ, ಬಹಿರಂಗವಾಗಿ “ಹಿಂದೂಗಳ ಮತ ನಮಗೆ ಬೇಡ” ಎನ್ನಲು ಕಾಂಗ್ರೆಸ್ ಪಕ್ಷಕ್ಕೆ ತಾಕತ್ತು ಇದೆಯೇ? ಎಂದು ಪ್ರಶ್ನಿಸಿದೆ.

ಹಿಂದೂಗಳಿಗೆ ಹಾಗೂ ಶಿವಾಜಿ ಮಹಾರಾಜರಿಗೆ ಸತೀಶ್ ಜಾರಕಿಹೊಳಿ ಅವರು ಅವಮಾನ ಮಾಡಿದ್ದಾರೆ. ಮಾತ್ರವಲ್ಲ ಕ್ಷಮೆ ಕೂಡ ಕೇಳುವುದಿಲ್ಲ ಎಂದಿದ್ದಾರೆ.
ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿ ಮತ್ತು ಖರ್ಗೆ ಅವರೇ ಇದು ಜಾರಕಿಹೊಳಿ ನಿಲುವು ಮಾತ್ರವಾ ಅಥವಾ ಕಾಂಗ್ರೆಸ್ ಪಕ್ಷದ ನಿಲುವು ಕೂಡ ಇದೇನಾ? ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಪಕ್ಷ(Congress Party) ಹಿಂದೂ ವಿರೋಧಿಗಳ ಆಗರವಾಗಿದೆ. ಹಿಂದೂಗಳ ಭಾವನೆಗೆ ಘಾಸಿಯುಂಟು ಮಾಡುವುದಲ್ಲದೇ ಕ್ಷಮೆಯೇ ಕೇಳುವುದಿಲ್ಲ ಎಂಬ ಧಿಮಾಕು ತೋರ್ಪಡಿಸುತ್ತಾರೆ.
ಕಾಂಗ್ರೆಸ್ ಯಾವತ್ತೂ ಹಿಂದೂಗಳ ಪರ ಇರಲಿಲ್ಲ, ಮುಂದೆಯೂ ಇರುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.

ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಎನ್ನುವಂತೆ ರಾಹುಲ್ ಗಾಂಧಿ(Rahul Gandhi) ಚಾಳಿ ಪಕ್ಷದಲ್ಲೆಲ್ಲಾ ಹರಡಿದೆ. ನಾನು ಹಿಂದೂ, ಬ್ರಾಹ್ಮಣ ಎನ್ನುತ್ತಾ ರಾಹುಲ್ ನಾಟಕವಾಡುತ್ತಾರೆ.
ಆದರೆ ದೇವಾಲಯಕ್ಕೆ ಹೋದರೆ ಹೇಗೆ ತೀರ್ಥ ತೆಗೆದುಕೊಳ್ಳಬೇಕು ಎನ್ನುವ ಪರಿಜ್ಞಾನವೇ ಇಲ್ಲ. ಹಿಂದೂ ಧರ್ಮದ ಆಚರಣೆಗಳನ್ನು ಅಪಹಾಸ್ಯ ಮಾಡುವುದೇಕೆ?
ಕಾಂಗ್ರೆಸ್ಸಿನ ಕೋಮುವಾದಕ್ಕೆ ದೊಡ್ಡ ಇತಿಹಾಸವೇ ಇದೆ. 1917ರ ಖಿಲಾಫತ್ ಚಳವಳಿಗೆ ಬೆಂಬಲ ನೀಡುವ ಮೂಲಕ ದೇಶವನ್ನು ಇಬ್ಭಾಗ ಮಾಡಲು ಕಾರಣವಾಗಿದ್ದು, ಇದೇ ಕಾಂಗ್ರೆಸ್.
ಕೋಮುದಳ್ಳುರಿಯಿಂದಲೇ ಕಾಂಗ್ರೆಸ್ ಪಕ್ಷ 60 ವರ್ಷಗಳ ಕಾಲ ದೇಶವನ್ನು ಆಳಿತ್ತು.
ಇದನ್ನೂ ಓದಿ : https://vijayatimes.com/postpone-kantara-ott-release/
ಕೋಮು ರಾಜಕೀಯದಿಂದಲೇ ಕಾಂಗ್ರೆಸ್ ಉಸಿರಾಡುತ್ತಿರುವುದೇ? ಹಿಂದುತ್ವ ಅಂದರೆ ಜೀವನಶೈಲಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಹೀಗಿರುವಾಗ, ಸತೀಶ್ ಜಾರಕಿಹೊಳಿ ಹಿಂದೂ ಪದ ಅಶ್ಲೀಲ ಎನ್ನುವ ಮೂಲಕ ನ್ಯಾಯಾಲಯಕ್ಕೆ ಅಗೌರವ ತೋರಿದ್ದಾರೆ. ಅಷ್ಟೇ ಅಲ್ಲದೆ ಹಿಂದೂಗಳ ಮನಸ್ಸಿಗೆ ಘಾಸಿ ಮಾಡಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.