ಮಾಜಿ ಪ್ರಧಾನಿ(Former Primeminister), ಜೆಡಿಎಸ್(JDS Leader) ವರಿಷ್ಠರಾದ ಹೆಚ್.ಡಿ. ದೇವೇಗೌಡ(HD Devegowda) ಅವರ ಪತ್ನಿ ಚೆನ್ನಮ್ಮ ಅವರಿಗೆ ಐಟಿ ನೋಟಿಸ್ ನೀಡಿದ್ದಾರೆ. ಕಬ್ಬು ಬೆಳೆಯುವ ರೈತರ ಮೇಲೆ ಐಟಿ ಅವರ ಸುಖಾಸುಮ್ಮನೆ ದಾಳಿ ಅಲ್ವಾ? ಯಾರು ಎಷ್ಟು ಜಾಗದಲ್ಲಿ ಏನು ಬೆಳೆಯುತ್ತಾರೆ, ಎಷ್ಟು ದುಡಿಯುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ವಿಚಾರ ಮಾಡಿ ತಿಳಿಯಬೇಕು!

ಆರ್.ಟಿ.ಓ ಇಲಾಖೆಯಲ್ಲಿ ನೂರಾರು ಕೋಟಿ ಗುಳುಂ ಅನ್ನಿಸುತ್ತಾರೆ, ಅವರ ಬಗ್ಗೆ ತನಿಖೆ ನಡೆಸಲು ಆಗೋದಿಲ್ಲ, ಆದ್ರೆ ನಮ್ಮ ತಾಯಿ ಅವರಿಗೆ ನೋಟಿಸ್ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ. ನಾವು ಒಂದು ಎಕರೆಯಲ್ಲಿ ಏನು ಬೆಳೆಯುತ್ತೇವೆ, ಎಷ್ಟು ಬೆಳೆಯುತ್ತೇವೆ ಎಂಬುದನ್ನು ಬಂದು ತಿಳಿಯಲಿ. ಈ ಕುರಿತು ಸರ್ವೇ ಮಾಡಿಸಿ ಎಂದು ಡಿಸಿ ಅವರಿಗೆ ಮಾಹಿತಿ ನೀಡಿದ್ದೇನೆ.

ನಾನು ಈ ಬಗ್ಗೆ ಸರ್ವೇ ಮಾಡಿಸೋದು ಸರಿಯಲ್ಲ! ಹೀಗಾಗಿ ನಾನು ಸರ್ವೇ ಮಾಡಿಸೊಲ್ಲ. ಕಷ್ಟಪಟ್ಟು ವ್ಯವಸಾಯ ಮಾಡಿ ದುಡಿಯುವ ನಮಗೇಕೆ ನೋಟಿಸ್ ಕೊಡಬೇಕು? ಕೋಟಿ..ಕೋಟಿ ಲೂಟಿ ಮಾಡಿ ಎಲ್ಲೋ ಮಜಾ ಮಾಡೋರಿಗೆ ಇಲ್ಲ ಯಾವುದೋ ನೋಟಿಸ್? ನಮಗೆ ಮಾತ್ರ ನೋಟಿಸ್ ಕೊಡ್ತಾರಂತೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.