- ದಿನದ ಆರಂಭದಲ್ಲೇ ಷೇರು ಮಾರುಕಟ್ಟೆಯಲ್ಲಿ (Stock market) ರಕ್ತಪಾತ
- ಭಾರತ (India) ಸೇರಿ ಅಂತಾರಾಷ್ಟ್ರೀಯ (International) ಮಾರುಕಟ್ಟೆಯಲ್ಲಿ ಕುಸಿತ
- ಸೆನ್ಸೆಕ್ಸ್ 4000 ಅಂಕ ಕುಸಿತ, ಷೇರು ಮಾರುಕಟ್ಟೆಯಲ್ಲಿ ತಲ್ಲಣ (Sensex falls 4000 points)
New delhi: ಅಮೆರಿಕದ (America) ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (President Donald Trump) ನೆರೆಯ ರಾಷ್ಟ್ರಗಳ ಮೇಲೆ ಸುಂಕ ವಿಧಿಸುವ ಘೋಷಣೆಯಿಂದಾಗಿ ಸೋಮವಾರ ಷೇರು ಮಾರುಕಟ್ಟೆಗಳಲ್ಲಿ ಸಾಕಷ್ಟು ಏರಿಳಿತಗಳು (Ups and downs) ಕಂಡುಬರುತ್ತಿದೆ. ಮಾರುಕಟ್ಟೆಯಲ್ಲಿ ಎಲ್ಲೆಡೆ ಕುಸಿತ ಕಂಡುಬಂದಿದೆ. ಇಲ್ಲಿಯವರೆಗೆ ಅಲ್ಪ ಕುಸಿತಗಳನ್ನು (Minor falls) ಕಂಡಿದ್ದ ಹೂಡಿಕೆದಾರರು ಸೋಮವಾರದ ಷೇರುಪೇಟೆ ಪತನ ಕಂಡು ದಿಗ್ಭ್ರಾಂತರಾಗಿದ್ದಾರೆ.ಬಿಎಸ್ಇ ಸೆನ್ಸೆಕ್ಸ್ (BSE Sensex) 4000 ಅಂಕಗಳ ಕುಸಿತದೊಂದಿಗೆ ವಹಿವಾಟು ಆರಂಭಿಸಿದ್ದರೆ, 1,160 ಅಂಕಗಳಷ್ಟು ನಷ್ಟದೊಂದಿಗೆ ದಿನದ ವಹಿವಾಟು ಶುರು ಮಾಡಿದೆ. ಈ ಮೂಲಕ 10 ತಿಂಗಳ ಕನಿಷ್ಠ ಮಟ್ಟಕ್ಕೆ (Minimum) ಇಳಿದಿದೆ.
ವಾರಾಂತ್ಯದ ರಜಾದಿನಗಳ (Weekend holidays) ನಂತರ ಸೋಮವಾರ ಬೆಳಿಗ್ಗೆ 9 ಗಂಟೆಗೆ ವಹಿವಾಟು ಪುನರಾರಂಭವಾದಾಗ (Trading resumes) ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 3, 939.68 ಅಂಕ ಕುಸಿತ ಕಂಡು 71,425.01ಕ್ಕೆ ತಲುಪಿತ್ತು. ಈ ಅವಧಿಯಲ್ಲಿ ನಿಫ್ಟಿ 50ಯು 1,160.8 ಅಂಕಗಳ ಕುಸಿತದೊಂದಿಗೆ 21,743.65ಕ್ಕೆ ತಲುಪಿತು.ಸದ್ಯ 9.54ರ ವೇಳೆಗೆ ಸೆನ್ಸೆಕ್ಸ್ 2,657.71 ಅಂಕ ಅಥವಾ ಶೇ. 3.53ರಷ್ಟು ಕುಸಿತ ಕಂಡಿದ್ದು, 72,706.98ರಲ್ಲಿ ವಹಿವಾಟು ಮುಂದುವರಿಸಿದೆ.
ನಿಫ್ಟಿ 50ಯು 872.55 ಅಂಕ ಅಥವಾ ಶೇ. 3.81ರಷ್ಟು ಇಳಿಕೆ ಕಂಡು 22,031.90ರಲ್ಲಿ ವಹಿವಾಟು ನಡೆಸುತ್ತಿದೆ. ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (President Donald Trump) ಅವರು ವ್ಯಾಪಾರ ಸುಂಕಗಳನ್ನು ವಿಧಿಸುವ ಸಾಧ್ಯತೆಯನ್ನು ಸಹ ಷೇರು ಮಾರುಕಟ್ಟೆಯ (Stock market) ಕುಸಿತಕ್ಕೆ ಕಾರಣವೆಂದು ಪರಿಗಣಿಸಲಾಗುತ್ತಿದೆ. ಟ್ರಂಪ್ 2.0ನಲ್ಲಿ ಆರ್ಥಿಕ ನಿರ್ಧಾರಗಳ (Financial decisions) ಬಗ್ಗೆ ಸ್ಪಷ್ಟತೆ ಇಲ್ಲ ಎಂದು ತಜ್ಞರು ಹೇಳುತ್ತಾರೆ.

ಆದಾಗ್ಯೂ, ಕೆನಡಾ (Canada) ಮತ್ತು ಮೆಕ್ಸಿಕೊ (Mexico) ಮೇಲೆ ಶೇಕಡಾ 25ರಷ್ಟು ಸುಂಕ ವಿಧಿಸುವ ಸಾಧ್ಯತೆಯ (Possibility of imposition) ಸುಳಿವು ಸುಂಕ ಹೆಚ್ಚಳ ನೀತಿಯನ್ನು ಕ್ರಮೇಣ ಜಾರಿಗೆ ತರಲಾಗುವುದು ಎಂದು ಸೂಚಿಸುತ್ತದೆ.ಅಮೆರಿಕ, ಯೂರೋಪ್ (America, Europe) ಮತ್ತು ಏಷ್ಯಾದ (Asia) ಎಲ್ಲಾ ಷೇರು ಮಾರುಕಟ್ಟೆಗಳೂ ಸೋಮವಾರ ತತ್ತರಿಸಿಹೋಗಿವೆ. ಹೂಡಿಕೆದಾರರು ಸಿಕ್ಕಾಪಟ್ಟೆ ನಷ್ಟ (Loss of the chain) ಮಾಡಿಕೊಂಡಿದ್ದಾರೆ. ಬೇರೆ ಜಾಗತಿಕ ಮಾರುಕಟ್ಟೆಗಳಿಗೆ (Global markets) ಹೋಲಿಸಿದರೆ ಭಾರತದ ಸೆನ್ಸೆಕ್ಸ್, ನಿಫ್ಟಿ ಅನುಭವಿಸಿದ ನಷ್ಟ ಕಡಿಮೆ ಎಂದನಿಸುವಷ್ಟು ಬ್ಲಡ್ ಬಾತ್ (Blood bath) ಆಗಿದೆ.ಮಾರುಕಟ್ಟೆಯ ರಕ್ತದೋಕುಳಿಗೆ ಪ್ರಮುಖ ಕಾರಣ ಎಂದರೆ ಟ್ಯಾರಿಫ್ ವಾರ್ (Tariff War) .
ಇದನ್ನು ಓದಿ : http://ಬೆಲೆ ಏರಿಕೆಗೆ ಕೇಂದ್ರದ ನೀತಿಗಳೇ ಕಾರಣ: ಕರ್ನಾಟಕದಲ್ಲಿ ಮಾತ್ರವಲ್ಲ ದೇಶದೆಲ್ಲೆಡೆ ಇದೇ ರೀತಿಯಿದೆ- ರಾಜ್ಯ ಸರ್ಕಾರ ಸಮರ್ಥನೆ
ಅಮೆರಿಕ ಆರಂಭಿಸಿದ ಈ ಸುಂಕ ಸಮರ ಜಾಗತಿಕ ಮಹಾಯುದ್ಧವಾಗಿ (Global war) ಪರಿಣಮಿಸಿದೆ. ಎಲ್ಲಾ ದೇಶಗಳ ಮೇಲೆ ಅಮೆರಿಕ ಟ್ಯಾರಿಫ್ ಹೇರಿಕೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಬೇರೆ ಬೇರೆ ದೇಶಗಳೂ ಕೂಡ ಅಮೆರಿಕದ ಮೇಲೆ ಪ್ರತಿಸುಂಕ ವಿಧಿಸತೊಡಗಿವೆ (Tariff has started) . ಚೀನಾ,(China) ಕೆನಡಾ (Canada) , ಮೆಕ್ಸಿಕೋ (Mexico) , ಈಗ ಯೂರೋಪಿಯನ್ (European) ಯೂನಿಯನ್ ಕೂಡ ಅಮೆರಿಕದ ವಿರುದ್ಧ ಟೊಂಕ ಕಟ್ಟಿ ನಿಂತಿದೆ. ಇನ್ನು ಟ್ಯಾರಿಫ್ ಯುದ್ಧದ (Tariff war) ಪರಿಣಾಮ ಭಾರತದ ಮೇಲೂ ಆಗಿದೆ. ಇದರ ಜೊತೆಗೆ, ವಿದೇಶೀ ಹೂಡಿಕೆದಾರರು (Foreign investors) ಮತ್ತೊಮ್ಮೆ ಹೊರನಡೆಯತೊಡಗಿದ್ದಾರೆ. ಜಾಗತಿಕವಾಗಿ ಎಲ್ಲಾ ಮಾರುಕಟ್ಟೆಗಳೂ ಕುಸಿಯುತ್ತಿರುವುದು (Markets are also falling) ಭಾರತಕ್ಕೂ ಪರಿಣಾಮ (Sensex falls 4000 points) ಬೀರಿದೆ.