ದೆಹಲಿ: ಭಾರೀ ಭರವಸೆ ಮೂಡಿಸಿದ್ದ ಆಕ್ಸ್ಫರ್ಡ್ ವಿವಿ ಸಂಶೋಧಕರ ಕೋವಿಡ್ ಲಸಿಕೆ ಪಡೆದ ವ್ಯಕ್ತಿಯೊಬ್ಬ ಅನಾರೋಗ್ಯಕ್ಕೆ ಗುರಿಯಾಗಿದ ಬೆನ್ನಲ್ಲೇ ಭಾರತದ ಸೆರಮ್ ಇನ್ಸ್ ಟಿಟ್ಯೂಟ್ ನ ಕೋವಿಡ್ ಲಸಿಕೆ ಪ್ರಯೋಗಕ್ಕೂ ಕೂಡ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ.
ಕೊರೊನಾ ಲಸಿಕೆ ಪಡೆದ ವ್ಯಕ್ತಿ ವಿಚಿತ್ರವಾಗಿ ವರ್ತಿಸಿ ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಆಸ್ಟ್ರಾಜೆನಕಾ ಕೋವಿಡ್ ಲಸಿಕೆ ಯೋಜನೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿತ್ತು. ಹೀಗಾಗಿ ಭಾರತದ ಡಿಸಿಜಿಐ (Drugs Controller General of India)ಭಾರತದಲ್ಲಿ ನಡೆಯುತ್ತಿರುವ ಕೊರೋನಾ ವೈರಸ್ ಲಸಿಕಾ ಪ್ರಯೋಗಕ್ಕೂ ಬ್ರೇಕ್ ಹಾಕುವಂತೆ ಸೂಚನೆ ನೀಡಿತ್ತು. ಅದರಂತೆ ಇದೀಗ ಪುಣೆ ಮೂಲದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ತನ್ನ ಲಸಿಕೆ ಪ್ರಯೋಗಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸೆರಮ್ ಇನ್ಸ್ ಟಿಟ್ಯೂಟ್ ಆಡಳಿತ ಮಂಡಳಿ, ಆಸ್ಟ್ರಾ ಜೆನಿಕಾ ಸಂಸ್ಥೆಯ ಲಸಿಕೆ ಪ್ರಯೋಗ ಪುನಾರಂಭವಾದ ಬಳಿಕ ಭಾರತದಲ್ಲಿ ಮತ್ತೆ ಲಸಿಕೆ ಪ್ರಯೋಗ ಮುಂದುವರೆಸುವುದಾಗಿ ಹೇಳಿದೆ.