ಗ್ರಾಹಕರಿಗೆ ಸಿಹಿ ಸುದ್ದಿ ; ಹೋಟೆಲ್ ಗಳಲ್ಲಿ ಸೇವಾಶುಲ್ಕ ಕಡ್ಡಾಯವಲ್ಲ!

ಹೋಟೆಲ್‌ಗೆ(Hotel/Restaurents) ಹೋದಾಗ ಊಟದ ಬಳಿಕ ಖುಷಿಯಿಂದ ಟಿಪ್ಸ್ ಕೊಡುವುದು ರೂಡಿ(Service bill is not mandatory payable).

ಈ ಟಿಪ್ಸ್ ಅಥವಾ ಸರ್ವಿಸ್ ಚಾರ್ಜ್(Service bill is not mandatory payable) ಅಥವಾ ಸೇವಾ ಶುಲ್ಕ ಎಂಬುದು ಹೋಟೆಲ್ ಅಥವಾ ರೆಸ್ಟೋರೆಂಟ್‌ನಲ್ಲಿ ಗ್ರಾಹಕರಿಗೆ ಆಹಾರ ತಲುಪಿಸುವ ಸಿಬ್ಬಂದಿ ಹಾಗು ಗ್ರಾಹಕರ ಮಧ್ಯೆ ನಡೆಯುವ ನೇರ ವಹಿವಾಟು.

ಅಂದ್ರೆ, ಸರಳವಾಗಿ ಅದು ಹೋಟೆಲ್‌ನಲ್ಲಿ ಸರ್ವರ್‌ಗೆ ನಾವು ಕೊಡುವ ಟಿಪ್ಸ್ ಹಣ. ಆದರೆ, ಈಗ ಹೊಟೇಲ್‌ನವರೇ ನಿರ್ದಿಷ್ಟ ಮೊತ್ತದ ಟಿಪ್ಸ್ ನಿಗದಿ ಮಾಡಿ ಅದನ್ನು ಸರ್ವಿಸ್ ಚಾರ್ಜ್ ರೂಪದಲ್ಲಿ ಗ್ರಾಹಕರಿಂದ ವಸೂಲಿ ಮಾಡುತ್ತಾರೆ.

ಊಟದ ಬಿಲ್‌ನಲ್ಲೇ ಸರ್ವಿಸ್ ಚಾರ್ಜ್ ಸೇರಿಸಲಾಗುತ್ತದೆ, ಗ್ರಾಹಕರು ಸರ್ವಿಸ್ ಚಾರ್ಜ್ ಪಾವತಿಸಿ ಜೊತೆಗೆ ಟಿಪ್ಸ್ ಅನ್ನೂ ಕೂಡ ಸರ್ವರ್‌ಗೆ ನೀಡುತ್ತಾರೆ. ಇದು ಒಂದು ರೀತಿಯಲ್ಲಿ ಗ್ರಾಹಕರಿಗೆ ಮಾಡುತ್ತಿರುವ ಸುಲಿಗೆ.

https://vijayatimes.com/weather-forecast-alerts-coastal-regions/

ಗ್ರಾಹಕರು ಸ್ವ ಇಚ್ಛೆಯಿಂದ ನೀಡಬೇಕಾದ ಸೇವಾ ದರವನ್ನು ಹೊಟೇಲ್‌ನವರು ಬಿಲ್ ಮೂಲಕವೇ ಸಂಗ್ರಹಿಸುತ್ತಿರುವುದನ್ನು ಆಕ್ಷೇಪಿಸಿ ಭಾರತದ ರಾಷ್ಟ್ರೀಯ ರೆಸ್ಟೋರೆಂಟ್ ಸಂಸ್ಥೆಗೆ ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಪತ್ರ ಬರೆದಿದ್ದಾರೆ.


ಈಗ ಇದು ಕೇಂದ್ರ ಸರಕಾರದ(Central Government) ಗಮನಕ್ಕೂ ಬಂದಿದ್ದು, ಹೊಟೇಲ್ ಉದ್ಯಮಕ್ಕೆ ಎಚ್ಚರಿಕೆ ನೀಡಿದೆ. ಗ್ರಾಹಕರಿಗೆ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಉತ್ತಮ ರೀತಿಯ ಸೇವೆ ಸಿಗದೆ ಹೋದಲ್ಲಿ ಸೇವಾಶುಲ್ಕ ನೀಡುವ ಅಗತ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ.

ಊಟದ ಬಿಲ್‌ನೊಂದಿಗೆ ಸೇವಾಶುಲ್ಕ ನೀಡುವುದು ಕಡ್ಡಾಯವಲ್ಲ. ಈ ಕುರಿತು ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಫಲಕಗಳನ್ನು ಹಾಕುವ ಮೂಲಕ ಗ್ರಾಹಕರಿಗೆ ಮಾಹಿತಿ ತಲುಪಿಸಬೇಕು. ಮಾಹಿತಿ ಪ್ರಸಾರ ಮಾಡಿರುವ ಬಗ್ಗೆ ರಾಜ್ಯ ಸರ್ಕಾರಗಳು ಖಚಿತ ಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಸೂಚಿಸಿದೆ. 
ಗ್ರಾಹಕರ ರಕ್ಷಣಾ ಕಾಯ್ದೆ 1986ರ ಪ್ರಕಾರ ವ್ಯಾಪಾರ ಅಥವಾ ಸೇವೆಯಲ್ಲಿ ಸರಿಯಾದ ಕ್ರಮ ಅನುಸರಿಸದಿದ್ದರೆ, ಅದನ್ನು ನ್ಯಾಯ ಸಮ್ಮತವಲ್ಲದ ರೀತಿಯ ವಹಿವಾಟು ಎಂದು ಪರಿಗಣಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
  • ಪವಿತ್ರ

Latest News

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.